ಬೆಂಗಳೂರು: ಸಿಎಂ ಸಿದ್ದರಾಮಯ್ಯನವರಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಪತ್ರ ಬರೆದಿದ್ದಾರೆ. ಕೆಲವು ಕಾಡಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಮತ್ತು ಯೋಜನಾ ಪ್ರಾಧಿಕಾರದ ಅಧ್ಯಕ್ಷರ ಅವಧಿಯನ್ನು ಮುಂದುವರೆಸಲು ಮನವಿ ಮಾಡಿದ್ದಾರೆ. ಅವಧಿ ಮುಂದುವರೆಸಿ ಆದೇಶ ಹೊರಡಿಸುವಂತೆ ಕೋರಿ ಡಿಸಿಎಂ ಪತ್ರ ಬರೆದಿದ್ದಾರೆ.
ದಿನಾಂಕ 28.02.2024ರಂದು ವಿವಿಧ ಪ್ರಾಧಿಕಾರದ ಅಧ್ಯಕ್ಷರು ಹಾಗೂ ನಿಗಮ ಮಂಡಳಿಗಳಿಗೆ ಡಿಸಿಸಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಮುಖಂಡರುಗಳನ್ನು ಎರಡು ವರ್ಷಗಳ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ನೇಮಕ ಮಾಡಲಾಗಿದ್ದು, ದಿನಾಂಕ 07.02.2026ರಂದು ಆದೇಶದ ಪಟ್ಟಿಯಲ್ಲಿರುವ ಕೆಲವರಿಗೆ ರಾಜ್ಯ ಸಚಿವ ಸ್ಥಾನಮಾನ ನೀಡಿ ಮುಂದಿನ ಆದೇಶದವರೆಗೆ ಮುಂದುವರೆಸಲು ಆದೇಶ ಮಾಡಿದ್ದು, ಇದರಲ್ಲಿ ಕಾಡಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರುಗಳನ್ನು ಮತ್ತು ಯೋಜನಾ ಅಧ್ಯಕ್ಷರುಗಳನ್ನು ಕೈಬಿಡಲಾಗಿರುತ್ತದೆ. ಪ್ರಸ್ತುತ ಸದರಿ ಪ್ರಾಧಿಕಾರಗಳಿಗೆ ಬೇರೆ ಅಧ್ಯಕ್ಷರನ್ನು ನೇಮಕ ಮಾಡಿಲ್ಲವಾದ್ದರಿಂದ ಮುಂದಿನ ಆದೇಶದವರೆಗೆ ಅಥವಾ ನೇಮಕ ಮಾಡುವವರೆಗೆ ಈ ಕೆಳಕಂಡ ಅಧ್ಯಕ್ಷರುಗಳನ್ನು ಮುಂದುವರೆಸುವ ಬಗ್ಗೆ ಸೂಕ್ತ ಆದೇಶ ಹೊರಡಿಸಲು ಕೋರಿದೆ.
ಪಿ. ಮರಿಸ್ವಾಮಿ -ಕಾಡಾ, ಮೈಸೂರು
ಡಾ. ಅಂಶುಮಂತ್ -ಕಾಡಾ, ಶಿವಮೊಗ್ಗ
ಆಂಜುನೇಯಲು ಜೆ.ಎಸ್. – ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ
ಯೋಗೇಶ್ ಬಾಬು -ಕರ್ನಾಟಕ ದ್ರಾಕ್ಷಾರಸ ಮಂಡಳಿ
ಕೇಶವರೆಡ್ಡಿ – ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರ
ತಾಜ್ ಪೀರ್ -ಚಿತ್ರದುರ್ಗ ನಗರಾಭಿವೃದ್ಧಿ ಪ್ರಾಧಿಕಾರ
ಜಾಕಿರ್ ಸವದಿ – ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ
ಹೆಚ್.ಎಸ್. ಸುಂದರೇಶ್ -ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ
ಸದಾಶಿವ ಉಲ್ಲಾಳ್ -ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ
ಬಸವರಾಜ್ ಜಾಬಶೆಟ್ಟಿ – ಬೀದರ್ ನಗರಾಭಿವೃದ್ಧಿ ಪ್ರಾಧಿಕಾರ


