HomeKarnatakaNamma Metro; ನಾಗವಾರ-ಡೈರಿ ಸರ್ಕಲ್ ಸುರಂಗ ಮಾರ್ಗ ಅಪ್‌ಡೇಟ್

Namma Metro; ನಾಗವಾರ-ಡೈರಿ ಸರ್ಕಲ್ ಸುರಂಗ ಮಾರ್ಗ ಅಪ್‌ಡೇಟ್

ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಡಾ. ಜೆ ರವಿಶಂಕರ್ ರೀಚ್-6ರ ಸುರಂಗ ಮೆಟ್ರೋ ಕಾರಿಡಾರ್‌ ಪರಿಶೀಲನೆ ಮಾಡಿದರು. ಇಂಜಿನಿಯರ್‌ಗಳು, ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಸೂಚನೆಗಳನ್ನು ಕೊಟ್ಟರು.

ವ್ಯವಸ್ಥಾಪಕ ನಿರ್ದೇಶಕರು ಶುಕ್ರವಾರ ನಾಗವಾರ-ಡೈರಿ ಸರ್ಕಲ್‌ವರೆಗಿನ ರೀಚ್-6ರ ಭೂಗತ ಮೆಟ್ರೋ ಕಾರಿಡಾರ್‌ನಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಪರಿಶೀಲಿಸಿದರು.

ನಿಲ್ದಾಣ ನಿರ್ಮಾಣ, ಸುರಂಗ ಸಂಬಂಧಿತ ಕಾಮಗಾರಿಗಳು, ಹಳಿ ಅಳವಡಿಕೆ, ವಿವಿಧ ವ್ಯವಸ್ಥೆಗಳ ಸ್ಥಾಪನೆ, ಪರೀಕ್ಷಾ ಗಡುವುಗಳು ಹಾಗೂ ಇತರೆ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿ, ಮಾಹಿತಿ ಪಡೆದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಮಾರ್ಗವು ಕಾರ್ಯಾರಂಭವಾದ ನಂತರ ಬೆಂಗಳೂರಿನ ಉತ್ತರ-ದಕ್ಷಿಣ ಸಂಪರ್ಕ ಬಲವಾಗುವ ಜೊತೆಗೆ ಪ್ರಮುಖ ಮುಖ್ಯ ರಸ್ತೆಗಳ ಮೇಲಿನ ಸಂಚಾರ ದಟ್ಟಣೆಯೂ ತಗ್ಗಲಿದೆ ಎಂದರು.

ನಗರದ ಸಂಚಾರ ದಟ್ಟಣೆ ಕಡಿಮೆ ಮಾಡಲು ಈ ಕಾರಿಡಾರ್ ಮಹತ್ವದ ಪಾತ್ರ ವಹಿಸುವುದರಿಂದ, ಬಾಕಿ ಉಳಿದಿರುವ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಸೂಚಿಸಿದರು.

ವಿವಿಧ ವಿಭಾಗಗಳ ನಡುವೆ ಸಮನ್ವಯವನ್ನುಹೆಚ್ಚಿ ಸುವಂತೆ ಅಧಿಕಾರಿಗಳಿಗೆ, ಗುತ್ತಿಗೆದಾರರಿಗೆ ಹಾಗೂ ಸ್ಥಳೀಯ ಇಂಜಿನಿಯರ್‌ಗಳಿಗೆ ಡಾ. ಜೆ ರವಿಶಂಕರ್ ನಿರ್ದೇಶನ ನೀಡಿದರು.

ಈ ಪರಿಶೀಲನಾ ಸಂದರ್ಭದಲ್ಲಿ ನಿಗಮದ ನಿರ್ದೇಶಕರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular