ಬೆಂಗಳೂರು : ಸರ್ಕಾರಿ ಪ್ರೌಢಶಾಲಾ ಶಿಕ್ಷಕರಿಗೆ ಪದವಿ ಪೂರ್ವ (PU) ಕಾಲೇಜುಗಳ ಉಪನ್ಯಾಸಕರಾಗಿ ಬಡ್ತಿ ಪಡೆಯಲು ನಡೆಸಲಾಗುವ ಅರ್ಹತಾ ಪರೀಕ್ಷೆಯ ದಿನಾಂಕವನ್ನು ಶಾಲಾ ಶಿಕ್ಷಣ ಇಲಾಖೆ ಪ್ರಕಟಿಸಿದೆ.
ಅರ್ಹತಾ ಪರೀಕ್ಷೆಯು 2026ರ ಏಪ್ರಿಲ್ 21ರಿಂದ ಪ್ರಾರಂಭವಾಗಲಿದೆ.ಅಭ್ಯರ್ಥಿಗಳು ಆಯ್ಕೆ ಮಾಡಿಕೊಂಡ ವಿಷಯಗಳು, ಪರೀಕ್ಷಾ ಕೇಂದ್ರ, ಸಮಯ ಮತ್ತು ದಿನಾಂಕದ ಸಂಪೂರ್ಣ ವಿವರಗಳನ್ನು ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ.
ತಿದ್ದುಪಡಿಗೆ ಅವಕಾಶ: ವೆಬ್ಸೈಟ್ನಲ್ಲಿ ನೀಡಲಾದ ವಿವರಗಳಲ್ಲಿ ಏನಾದರೂ ವ್ಯತ್ಯಾಸ ಅಥವಾ ತಪ್ಪುಗಳಿದ್ದಲ್ಲಿ, ಅಭ್ಯರ್ಥಿಗಳು ಒಂದು ವಾರದೊಳಗೆ ಇಲಾಖೆಯನ್ನು ಸಂಪರ್ಕಿಸಬಹುದು.ತಿದ್ದುಪಡಿಗಳಿಗಾಗಿ [email protected] ಗೆ ಇಮೇಲ್ ಮಾಡಬಹುದು ಅಥವಾ ಸಹನಿರ್ದೇಶಕರ ಮೊಬೈಲ್ ಸಂಖ್ಯೆ 9449823723 ಕ್ಕೆ ಕರೆ ಮಾಡಬಹುದು.


