ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಸೂಪರ್ 8 ಪಂದ್ಯದಲ್ಲಿ ನ್ಯೂಜಿಲೆಂಡ್ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿದ್ದು, ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯುತ್ತಿದೆ.
ಪಂದ್ಯದಲ್ಲಿ ಟಾಸ್ ಗೆದ್ದಿರುವ ಶ್ರೀಲಂಕಾ ಫೀಲ್ಡಿಂಗ್ ಆರಿಸಿಕೊಂಡಿದ್ದು, ನ್ಯೂಜಿಲೆಂಡ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದೆ.
ಇನ್ನು ಈ ಪಂದ್ಯ ಇತ್ತಂಡಳಿಗೂ ಮಹತ್ವದ್ದಾಗಿದ್ದು, ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಮಳೆಯಿಂದಾಗಿ ರದ್ದಾದ ಕಾರಣ ಕಿವೀಸ್ ಕೈನಲ್ಲಿ ಒಂದು ಅಂಕವಿದ್ದು, ಈ ಪಂದ್ಯ ಗೆದ್ದರೆ ಸೆಮಿಫೈನಲ್ಗೆ ಹತ್ತಿರವಾಗಲಿದೆ. ಒಂದುವೇಳೆ ಸೋತರೆ ಕಿವೀಸ್ ಹಾಗೂ ಪಾಕ್ ಜತೆಗೆ ಲಂಕಾ ಸಹ ಸೆಮಿಫೈನಲ್ ರೇಸ್ಗಿಳಿಯಲಿದೆ.
ಒಂದುವೇಳೆ ಶ್ರೀಲಂಕಾ ತಂಡವೇನಾದರೂ ಈ ಪಂದ್ಯವನ್ನು ಸೋತರೆ ಸೂಪರ್ 8 ಸುತ್ತಿನ ಎರಡನೇ ಸೋಲಾಗಲಿದ್ದು, ಟೂರ್ನಿಯಿಂದ ಹೊರಬೀಳಲಿದೆ. ಹೀಗಾಗಿ ಲಂಕಾಗೆ ಈ ಪಂದ್ಯ ಅತ್ಯಮೂಲ್ಯವಾಗಿದೆ.
ನ್ಯೂಜಿಲೆಂಡ್ ಆಡುವ ಬಳಗ: ಟಿಮ್ ಸೈಫರ್ಟ್ (ವಿಕೆಟ್ ಕೀಪರ್), ಫಿನ್ ಅಲೆನ್, ರಚಿನ್ ರವೀಂದ್ರ, ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಡ್ಯಾರಿಲ್ ಮಿಚೆಲ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಕೋಲ್ ಮ್ಯಾಕ್ಕಾಂಚಿ, ಮ್ಯಾಟ್ ಹೆನ್ರಿ, ಇಶ್ ಸೋಧಿ, ಲಾಕಿ ಫರ್ಗ್ಯೂಸನ್.
ಶ್ರೀಲಂಕಾ ಆಡುವ ಬಳಗ: ಪತುಮ್ ನಿಸ್ಸಂಕಾ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಚರಿತ್ ಅಸಲಂಕಾ, ಪವನ್ ರತ್ನಾಯಕೆ, ಕಮಿಂದು ಮೆಂಡಿಸ್, ದಸುನ್ ಶನಕಾ (ನಾಯಕ), ದುನಿತ್ ವೆಲ್ಲಲಗೆ, ದುಷಾಂತ ಹೇಮಂತ, ದುಷ್ಮಂತ ಚಮೀರಾ, ಮಹೀಶ್ ತೀಕ್ಷಣ, ದಿಲ್ಶಾನ್ ಮದುಶಂಕಾ.

