HomeKarnatakaBIG NEWS: ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ: ಬ್ರೇನ್‌ ಡೆಡ್‌ ಆಗಿದ್ದ ಮಗನ ಅಂಗಾಂಗ ದಾನ...

BIG NEWS: ಸಾವಿನಲ್ಲೂ ಸಾರ್ಥಕತೆ ಮೆರೆದ ಯುವಕ: ಬ್ರೇನ್‌ ಡೆಡ್‌ ಆಗಿದ್ದ ಮಗನ ಅಂಗಾಂಗ ದಾನ ಮಾಡಿದ ಕುಟುಂಬ

ಬೆಂಗಳೂರು: ಮಂಡ್ಯ ಮೂಲದ ಯುವಕನೊಬ್ಬ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ. ಬ್ರೇನ್ ಡೆಡ್ ಆಗಿದ್ದ ಮಗನ ಅಂಗಾಂಗ ದಾನ ಮಾಡುವ ಮೂಲಕ ಮಂಡ್ಯದ ಕಸಬಾ ಹೋಬಳಿಯ ಚಿಕ್ಕ ಮಂಡ್ಯ ಗ್ರಾಮದ ಕುಟುಂಬ ಸದಸ್ಯರು ಮಹಾತ್ಕಾರ್ಯ ಮಡಿದ್ದು, ಕೆಲವರ ಬಾಳಿಗೆ ಬೆಳಕಾಗಿದ್ದಾರೆ.

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿರುವ ಟ್ರಾಮಾ ಮತ್ತು ಎಮರ್ಜೆನ್ಸಿ ಕೇರ್‌ ಸೆಂಟರ್‌ನಲ್ಲಿ ಅಂಗಾಂಗ ಕಸಿ ಚಿಕಿತ್ಸೆ ಯಶಸ್ವಿಯಾಗಿದೆ. ಜನರಿಗೆ ಕೈಗೆಟಕುವ ದರದಲ್ಲಿ ಈ ಸೇವೆಯನ್ನು ಸರ್ಕಾರಿ ಆಸ್ಪತ್ರೆಯ ವೈದ್ಯರ ತಂಡ ಒದಗಿಸಿದೆ.

ಈ ಕುರಿತು ಮಾಹಿತಿ ನೀಡಿರುವ ಮೆಡಿಕಲ್‌ ಸೂಪರಿಟೆಂಡರ್‌ ಡಾ. ದೀಪಕ್‌ ಮತ್ತು ಟ್ರಾಮಾ ಎಮರ್ಜೆನ್ಸಿ ಕೇರ್‌ ಸೆಂಟರ್ ನ ವಿಶೇಷ ಅಧಿಕಾರಿ ಡಾ. ಅಸೀಮ ಬಾನು, ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಹಾಗೂ ಟ್ರಾಮ ಕೇರ್‌ ಸೆಂಟರ್‌ ಹಾಗೂ ಜೀವಸಾರ್ಥಕತೆ ತಂಡದ ಸದಸ್ಯರ ಸೇವೆ ಸ್ಮರಣೀಯ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನೋವಿನ ಸಮಯದಲ್ಲೂ ಸಮಾಜ ಸೇವೆ ಹಾಗೂ ಮತ್ತೊಬ್ಬರ ಬಾಳಿಗೆ ಬೆಳಗಾಗುವ ರೀತಿಯ ನಿರ್ಧಾರ ಕೈಗೊಂಡ ಯುವಕನ ಕುಟುಂಬ ಸದಸ್ಯರಿಗೆ ಧನ್ಯವಾದಗಳು ಎಂದು ಡಾ. ದೀಪಕ್‌ ತಿಳಿಸಿದ್ದಾರೆ.

ಚಿಕ್ಕಮಂಡ್ಯ ಗ್ರಾಮದ ದರ್ಶನ್‌ ಎಂಬ ಯುವಕ ಕಳೆದ ಫೆಬ್ರವರಿ 22ರಂದು ಬೈಕ್‌ನಿಂದ ಬಿದ್ದು ಗಾಯಗೊಂಡಿದ್ದ. ಆದರೆ ಆತುರದಲ್ಲಿ ಮನೆಗೆ ಬಂದು ರಾತ್ರಿ ಮಲಗಿದ್ದ. ಆದರೆ ಆತನ ತಲೆಗೆ ಭಾರಿ ಪೆಟ್ಟಾಗಿರುವುದು ಕಂಡು ಆಸ್ಪತ್ರೆಗೆ ಸೇರಿಸಲಾಗಿತ್ತು. ತಪಾಸಣೆ ಮಾಡಿದಾಗ ಯುವಕನ ತಲೆಯೊಳಗೆ ರಕ್ತಸ್ರಾವವಾಗಿರುವುದು ಪತ್ತೆಯಾಯಿತು.

ಕೂಡಲೇ ಆತನನ್ನು ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯ ಟ್ರಾಮಾ ಕೇರ್‌ ಸೆಂಟರ್‌ಗೆ ಕರೆದುಕೊಂಡು ಬರಲಾಯಿತು. ಹಲವಾರು ಪರೀಕ್ಷೆಗಳಿಗೆ ಒಳಪಡಿಸಿದರೂ ಆತ ಚಿಕಿತ್ಸೆಗೆ ಸ್ಪಂದಿಸಲಿಲ್ಲ. ಎರಡು ದಿನಗಳ ನಂತರ ಪರೀಕ್ಷೆ ನಡೆಸಿದ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ಡಾ. ಕಾವ್ಯಾ, ಡಾ. ದೀಪಕ್‌, ಡಾ. ಆಸೀಮಾ ಬಾನು ಉನ್ನತ ವೈದ್ಯರ ತಂಡ “ಬ್ರೇನ್‌ ಡೆಡ್‌” ಎಂದು ಘೋಷಿಸಿತು.

ನಂತರ ಜೀವ ಸಾರ್ಥಕತೆ ಎಂಬ ತಂಡ, ಕುಟುಂಬ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಯುವಕನ ಅಂಗಾಂಗ ದಾನ ಮಾಡಲು ಸಮ್ಮತಿಸಿ ಸಾರ್ಥಕತೆ ಮೆರೆದರು.

ದಿನೇಶ್‌ ಅವರ ಯಕೃತ್ತು, ಮೂತ್ರಪಿಂಡ, ಹೃದಯ ನಾಳಗಳು, ಇತರೆ ಅಂಗ ಪಡೆದು ಅರ್ಹರಿಗೆ ಅಳವಡಿಸಲಾಗಿದೆ. ದಿನೇಶ್‌ ಕುಟುಂಬ ಸದಸ್ಯರ ಈ ನಿರ್ಧಾರಕ್ಕೆ ವೈದ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular