HomeKarnatakaಸಿಇಟಿ ಅರ್ಜಿ ತಿದ್ದುಪಡಿಗೆ ಮಾ. 30ರವರೆಗೆ ಅವಕಾಶ: ಎಸ್.ಸಿ. ಒಳಮೀಸಲಾತಿ RD ಕಡ್ಡಾಯ

ಸಿಇಟಿ ಅರ್ಜಿ ತಿದ್ದುಪಡಿಗೆ ಮಾ. 30ರವರೆಗೆ ಅವಕಾಶ: ಎಸ್.ಸಿ. ಒಳಮೀಸಲಾತಿ RD ಕಡ್ಡಾಯ

ಸಾಮಾನ್ಯ ಪ್ರವೇಶ ಪರೀಕ್ಷೆಗೆ(ಸಿಇಟಿ-2026) ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕದ ನಂತರವೂ ಮಾರ್ಚ್ 30ರವರೆಗೆ ಅರ್ಜಿಯಲ್ಲಿನ ದೋಷಗಳ ತಿದ್ದುಪಡಿಗೆ ಕಾಲಾವಕಾಶ ನೀಡಲಾಗಿದೆ.

ಅರ್ಜಿ ಸಲ್ಲಿಸಲು ಸದ್ಯ ಫೆ.27 ಕೊನೆ ದಿನ. ಶುಲ್ಕ ಪಾವತಿಗೆ ಮಾರ್ಚ್ 3 ಕೊನೆ ದಿನ. ಈ ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಿದವರು ಅಗತ್ಯ ಇದ್ದರೆ ತಿದ್ದುಪಡಿ ಮಾಡಿಕೊಳ್ಳಬಹುದು. ಆದರೆ, ಅರ್ಜಿ ಸಲ್ಲಿಕೆಯ ದಿನಾಂಕದಲ್ಲಿ ಯಾವುದೇ ವಿಸ್ತರಣೆ ಇರುವುದಿಲ್ಲ.

ಎಸ್.ಸಿ. ಒಳಮೀಸಲಾತಿ RD ಕಡ್ಡಾಯ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ಆರ್ ಡಿ ಸಂಖ್ಯೆ ಇರುವ ಪ್ರವರ್ಗ-ಎ, ಪ್ರವರ್ಗ-ಬಿ ಮತ್ತು ಪ್ರವರ್ಗ-ಸಿ ಎಂದು ಮುದ್ರಿತವಾಗಿರುವ ಪ್ರಮಾಣ ಪತ್ರವನ್ನು ಸಂಬಂಧಿಸಿದ ತಹಶೀಲ್ದಾರರಿಂದ ಪಡೆದು ಅರ್ಜಿಯ ಪೋರ್ಟಲ್ ನಲ್ಲಿ ಎಡಿಟಿಂಗ್ ಮಾಡುವ ಮೂಲಕ ಆರ್ ಡಿ ಸಂಖ್ಯೆಯನ್ನು ದಾಖಲಿಸಬೇಕು. ಇದಕ್ಕಾಗಿ ಎಡಿಟಿಂಗ್ ಅರ್ಜಿ ಪೋರ್ಟಲ್ ಅನ್ನು ಮಾರ್ಚ್ 30ರವರೆಗೆ ತೆರೆದಿರುತ್ತದೆ.

ಸದ್ಯ 40 ಸಾವಿರ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ಅದರಲ್ಲಿ ಕೇವಲ 20 ಸಾವಿರ ಅಭ್ಯರ್ಥಿಗಳು ಮಾತ್ರ ಒಳ ಮೀಸಲಾತಿ ಪ್ರಕಾರ ಪ್ರವರ್ಗಗಳ ಆರ್ ಡಿ ಸಂಖ್ಯೆಯನ್ನು ದಾಖಲಿಸಿದ್ದಾರೆ. ಇನ್ನೂ 20 ಸಾವಿರ ಮಂದಿ ಈ‌ ಹಿಂದಿನ ಹಾಗೂ ಕೇವಲ ಪರಿಶಿಷ್ಟ ಜಾತಿ ಎಂದು ನಮೂದಾಗಿರುವ ಆರ್ ಡಿ ಸಂಖ್ಯೆ‌ ನಮೂದಿಸಿದ್ದಾರೆ. ಹೀಗಾಗಿ ಇದುವರೆಗೂ ಒಳ ಮೀಸಲಾತಿ ಪ್ರಕಾರ ಪ್ರಮಾಣ ಪತ್ರ ಪಡೆಯದವರು ಈ ತಕ್ಷಣ ಪಡೆದು, ಹೊಸ ಆರ್ ಡಿ‌ ಸಂಖ್ಯೆಯನ್ನು ಎಡಿಟ್ ಮಾಡುವುದರ ಮೂಲಕ ಸರಿ ಮಾಡಿಕೊಳ್ಳಬೇಕು. ಒಳ ಮೀಸಲಾತಿ ಪ್ರಕಾರ ಪ್ರವರ್ಗಗಳ ಆರ್ ಡಿ ಸಂಖ್ಯೆ ನಮೂದಿಸಿದವರನ್ನು ಮಾತ್ರ ಸೀಟು ಹಂಚಿಕೆಗೆ ಪರಿಗಣಿಸಲಾಗುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular