HomeKarnatakaಮಹಾತ್ಮ ಗಾಂಧಿ ಪಾಕಿಸ್ತಾನದ ರಾಷ್ಟ್ರಪಿತ: ಶಾಸಕ ಯತ್ನಾಳ್ ವಿವಾದಿತ ಹೇಳಿಕೆ

ಮಹಾತ್ಮ ಗಾಂಧಿ ಪಾಕಿಸ್ತಾನದ ರಾಷ್ಟ್ರಪಿತ: ಶಾಸಕ ಯತ್ನಾಳ್ ವಿವಾದಿತ ಹೇಳಿಕೆ

ಯಾದಗಿರಿ: ಮಹಾತ್ಮ ಗಾಂಧಿ ನಮ್ಮ ಭಾರತದ ರಾಷ್ಟ್ರಪಿತ ಅಲ್ಲ, ಪಾಕಿಸ್ತಾನದ ರಾಷ್ಟ್ರಪಿತ. ಗಾಂಧಿ ನಮ್ಮ ದೇಶದ ರಾಷ್ಟ್ರಪಿತ ಎಂದು ನಾನು ಒಪ್ಪುವುದೇ ಇಲ್ಲ. ನೆಹರು ನಮ್ಮ ದೇಶದ ಮೊದಲ ಪ್ರಧಾನಮಂತ್ರಿ ಎಂದು ನಾನು ಒಪ್ಪುವುದಿಲ್ಲ. ಇವರೆಲ್ಲ ತಮ್ಮ ಚಟಕ್ಕೆ ನಮ್ಮ ದೇಶ ಹಾಳು ಮಾಡಿದವರು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಿತ ಹೇಳಿಕೆ ನೀಡಿದ್ದಾರೆ.

ಶನಿವಾರ ರಾತ್ರಿ ಯಾದಗಿರಿ ಜಿಲ್ಲೆಯ ಗುರುಮಠಕಲ್ ನಲ್ಲಿ ಆಯೋಜಿಸಿದ್ದ ಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ಗಾಂಧಿಯನ್ನು ನಾನು ನಮ್ಮ ಭಾರತದ ರಾಷ್ಟ್ರಪಿತ ಎಂದು ಎಂದಿಗೂ ಒಪ್ಪಿಲ್ಲ. ನೆಹರು ಮೊದಲ ಪ್ರಧಾನಿ ಅಲ್ಲ, ನಮ್ಮ ದೇಶದ ಮೊದಲ ಪ್ರಧಾನಿ ನೇತಾಜಿ ಸುಭಾಷ್ ಚಂದ್ರ ಬೋಸ್. ಅಂಬೇಡ್ಕರ್, ತಿಲಕ್, ಸಾವರ್ಕರ್ ಲಾಲಾ ಲಜಪತರಾಯ್, ಆಜಾದ್ ಅವರಂಥವರು ಸ್ವಾತಂತ್ರ್ಯಕ್ಕಾಗಿ ಕಷ್ಟ ಪಟ್ಟವರು. ಇತಿಹಾಸವನ್ನು ತಿರುಚಿ ನೆಹರು, ಗಾಂಧಿಯನ್ನು ಹೊಗಳಲಾಗಿದೆ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಕ್ರ ತಿರುಗಿಸಿದ್ದಕ್ಕೆ ಸ್ವಾತಂತ್ರ್ಯ ದೊರೆಯಿತು ಎಂದು ಹೇಳುತ್ತಾರೆ. ಅದೇ ಹೀಗೆ ಸಾಧ್ಯ? ನಾನು ಚಕ್ರ ತಿರುಗಿಸಿದರೆ ಸಿಎಂ ಆಗುತ್ತೇನೆಯೇ ಎಂದು ವ್ಯಂಗ್ಯವಾಡಿದ ಅವರು, ವಂದೇ ಮಾತರಂ ಬಗ್ಗೆ ತಕರಾರು ಮಾಡುವವರು ಪಾಕಿಸ್ತಾನಕ್ಕೆ ಹೋಗಲಿ ಎಂದು ವಾಗ್ದಾಳಿ ನಡೆಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular