HomeLatest NewsT20 World Cup 2026: ಇವರಿಂದಲೇ ಪಂದ್ಯ ಸೋತೆವು; ಆಫ್ರಿಕಾ ವಿರುದ್ಧದ ಹೀನಾಯ ಸೋಲಿಗೆ ಕಾರಣ...

T20 World Cup 2026: ಇವರಿಂದಲೇ ಪಂದ್ಯ ಸೋತೆವು; ಆಫ್ರಿಕಾ ವಿರುದ್ಧದ ಹೀನಾಯ ಸೋಲಿಗೆ ಕಾರಣ ಯಾರೆಂದು ತಿಳಿಸಿದ ಸೂರ್ಯ

ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಸೂಪರ್ 8 ಸುತ್ತಿನ ಮೂರನೇ ಪಂದ್ಯ ಇಂದು ( ಫೆಬ್ರವರಿ 22 ) ಅಹ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದಿದ್ದು, ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ ವಿರುದ್ಧ 76 ರನ್‌ಗಳ ಭರ್ಜರಿ ಗೆಲುವನ್ನು ಸಾಧಿಸಿ ಸೂಪರ್ 8ನಲ್ಲಿ ಶುಭಾರಂಭ ಮಾಡಿದೆ.

ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಆರಿಸಿಕೊಂಡು 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 187 ರನ್ ಕಲೆಹಾಕಿ ದಕ್ಷಿಣ ಆಫ್ರಿಕಾಗೆ 188 ರನ್‌ಗಳ ಸವಾಲಿನ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಭಾರತ 18.4 ಓವರ್‌ಗಳಲ್ಲಿ 111 ರನ್ ಕಲೆಹಾಕಿ ಆಲ್‌ಔಟ್ ಆಗಿದೆ.

ಆರಂಭದಲ್ಲಿ ಕುಸಿತ ಕಂಡು ಡಿವಾಲ್ಡ್ ಬ್ರೆವಿಸ್ ಹಾಗೂ ಡೇವಿಡ್ ಮಿಲ್ಲರ್ ಜತೆಯಾಟದಿಂದ ಚೇತರಿಸಿಕೊಂಡ ದಕ್ಷಿಣ ಆಫ್ರಿಕಾ ಕೊನೆಯಲ್ಲಿ ಟ್ರಿಸ್ಟನ್ ಸ್ಟಬ್ಸ್ ಸ್ಪೋಟಕ ಬ್ಯಾಟಿಂಗ್‌ನಿಂದ ಒಳ್ಳೆಯ ಮೊತ್ತ ಕಲೆಹಾಕಿತು. ಇತ್ತ ಭಾರತ ಸಹ ಅದೇ ಹಾದಿಯಲ್ಲಿ ಆರಂಭದಲ್ಲೆ ಮುಗ್ಗರಿಸಿತ್ತು. ಆದರೆ ಯಾವೊಬ್ಬ ಆಟಗಾರನೂ ಸಹ ತಂಡಕ್ಕೆ ಸುಧಾರಣೆ ತರುವ ಕೆಲಸ ಮಾಡಲಿಲ್ಲ. ದುಬೆ ಕೊನೆಯಲ್ಲಿ ರನ್ ಗಳಿಸಿದ್ದು ಬಿಟ್ಟರೆ ಉಳಿದೆಲ್ಲ ಆಟಗಾರರೂ ಸಹ ನೆಲಕಚ್ಚಿ ಭಾರತ ಹೀನಾಯ ಸೋಲನ್ನು ಕಂಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೀಗೆ ಬೃಹತ್ ಸೋಲನ್ನು ಕಂಡ ಬಳಿಕ ಪಂದ್ಯದ ಕುರಿತು ಮಾತನಾಡಿದ ನಾಯಕ ಸೂರ್ಯಕುಮಾರ್ ಯಾದವ್ ಸೋಲಿಗೆ ಕಾರಣವನ್ನು ಬಿಚ್ಚಿಟ್ಟಿದ್ದಾರೆ.

‘ನಾವು ಆರಂಭದಲ್ಲಿ ಚೆನ್ನಾಗಿಯೇ ಬೌಲಿಂಗ್ ಮಾಡಿದೆವು. 21ಕ್ಕೆ 3 ವಿಕೆಟೆ ಪಡೆದವು. ಅವರು 7ರಿಂದ 15 ಓವರ್‌ಗಳವರೆಗೆ ಚೆನ್ನಾಗಿ ಬ್ಯಾಟ್ ಬೀಸಿದರು. ನಂತರದ ಓವರ್‌ಗಳಲ್ಲಿ ನಾವು ಕಮ್‌ಬ್ಯಾಕ್ ಮಾಡಿದೆವು. ಒಟ್ಟಾರೆ ನೋಡಿದರೆ ನಾವು ಚೆನ್ನಾಗಿ ಬೌಲಿಂಗ್‌ ಮಾಡಿದೆವು. ಆದರೆ ತುಸು ಚೆನ್ನಾಗಿ ಬ್ಯಾಟಿಂಗ್ ಮಾಡಬೇಕಿತ್ತು. ನನ್ನ ಯೋಚನೆ ಪ್ರಕಾರ ನಾವು 180ರಿಂದ 180 ರನ್ ಚೇಸ್ ಮಾಡುವಾಗ ಪವರ್‌ಪ್ಲೇನಲ್ಲೆ ಪಂದ್ಯ ಗೆಲ್ಲಲಾಗುವುದಿಲ್ಲ, ಆದರೆ ಪವರ್‌ಪ್ಲೇನಲ್ಲೇ ಆ ಪಂದ್ಯವನ್ನು ಸೋಲಬಹುದು. ಹಾಗೆಯೇ ನಾವು ಪವರ್‌ಪ್ಲೇನಲ್ಲೇ ಸಾಕಷ್ಟು ವಿಕೆಟ್ ಕಳೆದುಕೊಂಡೆವು. ನಂತರ ಆ 180-185 ಮೊತ್ತವನ್ನು ಬೆನ್ನಟ್ಟಲು ಬೇಕಾದ ಸಣ್ಣ ಜತೆಯಾಟ ಸಹ ನಮ್ಮಿಂದ ಬರಲಿಲ್ಲ. ಏನೇ ಆಗಲಿ ಆಟದಲ್ಲಿ ಇದೆಲ್ಲ ಸಹಜ. ಇದರಿಂದ ನಾವು ತಿದ್ದಿಕೊಳ್ಳುತ್ತೇವೆ’ ಎಂದು ಸೂರ್ಯಕುಮಾರ್ ಯಾದವ್ ಪವರ್‌ಪ್ಲೇನಲ್ಲಿ ಹಾಗೂ ನಂತರ ವಿಫಲರಾದ ಬ್ಯಾಟ್ಸ್‌ಮನ್‌ಗಳೇ ಸೋಲಿಗೆ ಕಾರಣ ಎಂದು ತಿಳಿಸಿದರು.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

LEAVE A REPLY

Please enter your comment!
Please enter your name here

Most Popular