HomeEntertainmentದಕ್ಷಿಣ ಭಾರತದ ಸಿನಿಮಾಗಳಲ್ಲಿ 'ಹೊಕ್ಕುಳ' ಪ್ರದರ್ಶನದ ಗೀಳು ಹೆಚ್ಚು; ಬಾಲಿವುಡ್‌ನಲ್ಲಿ ಕ್ಲೀವೇಜ್‌ಗೆ ಆದ್ಯತೆ: ತಾಪ್ಸಿ ಪನ್ನು

ದಕ್ಷಿಣ ಭಾರತದ ಸಿನಿಮಾಗಳಲ್ಲಿ ‘ಹೊಕ್ಕುಳ’ ಪ್ರದರ್ಶನದ ಗೀಳು ಹೆಚ್ಚು; ಬಾಲಿವುಡ್‌ನಲ್ಲಿ ಕ್ಲೀವೇಜ್‌ಗೆ ಆದ್ಯತೆ: ತಾಪ್ಸಿ ಪನ್ನು

ಬಾಲಿವುಡ್ ಹಾಗೂ ದಕ್ಷಿಣ ಭಾರತದ ಚಿತ್ರರಂಗ ಎರಡರಲ್ಲೂ ಗುರುತಿಸಿಕೊಂಡಿರುವ ನಟಿ ತಾಪ್ಸಿ ಪನ್ನು, ಚಿತ್ರರಂಗದಲ್ಲಿ ಮಹಿಳೆಯರ ದೇಹವನ್ನು ತೆರೆಯ ಮೇಲೆ ಚಿತ್ರಿಸುವ ರೀತಿ ಹಾಗೂ ತೆರೆಯ ಹಿಂದೆ ನಡೆಯುವ ಕೆಲವು ಮುಜುಗರದ ಸಂಗತಿಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.

ಇತ್ತೀಚೆಗೆ ಶುಭಂಕರ್ ಮಿಶ್ರಾ ಅವರೊಂದಿಗಿನ ಸಂವಾದದಲ್ಲಿ ಭಾಗವಹಿಸಿದ್ದ ತಾಪ್ಸಿ, ಭೋಜ್‌ಪುರಿ ಮತ್ತು ದಕ್ಷಿಣ ಭಾರತದ ಸಿನಿಮಾಗಳಲ್ಲಿ ಹಾಡುಗಳ ಚಿತ್ರೀಕರಣದ ವೇಳೆ ಮಹಿಳೆಯರ ಹೊಕ್ಕುಳಿನ (Navel) ಭಾಗಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ ಎಂಬ ವಿಷಯದ ಬಗ್ಗೆ ಪ್ರತಿಕ್ರಿಯಿಸಿದರು. “ಹಿಂದಿ ಸಿನಿಮಾಗಳಲ್ಲಿಯೂ ಐಟಂ ಸಾಂಗ್‌ಗಳ ವೇಳೆ ಇಂತಹ ಚಿತ್ರೀಕರಣ ನಡೆಯುತ್ತದೆ. ಆದರೆ, ದಕ್ಷಿಣ ಭಾರತದ ಸಿನಿಮಾಗಳಲ್ಲಿ ಇರುವಷ್ಟು ಗೀಳು ಅಲ್ಲಿಲ್ಲ. ಹಿಂದಿ ಚಿತ್ರರಂಗದಲ್ಲಿ ‘ಕ್ಲೀವೇಜ್’ ಪ್ರದರ್ಶನಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ,” ಎಂದು ಅವರು ವಿಶ್ಲೇಷಿಸಿದ್ದಾರೆ.

ತೆರೆಯ ಹಿಂದಿನ ಮುಜುಗರದ ಸನ್ನಿವೇಶ: ತಮ್ಮ ಆರಂಭಿಕ ದಿನಗಳನ್ನು ನೆನಪಿಸಿಕೊಂಡ ತಾಪ್ಸಿ, ದಕ್ಷಿಣ ಭಾರತದ ಕೆಲವು ಸಿನಿಮಾಗಳಲ್ಲಿ ಹಾಡುಗಳ ಚಿತ್ರೀಕರಣದ ವೇಳೆ ನಟಿಯರಿಗೆ ‘ಪ್ಯಾಡೆಡ್ ಬ್ರಾ’ ಧರಿಸುವಂತೆ ಸೂಚನೆ ನೀಡಲಾಗುತ್ತಿತ್ತು ಎಂಬ ಆಘಾತಕಾರಿ ವಿಷಯವನ್ನು ಹಂಚಿಕೊಂಡಿದ್ದಾರೆ. ಈ ಸೂಚನೆಗಳು ನಟಿಯರಿಗೆ ನೇರವಾಗಿ ತಲುಪುವುದಿಲ್ಲ, ಬದಲಾಗಿ ನಿರ್ದೇಶಕರಿಂದ ಸಹಾಯಕ ನಿರ್ದೇಶಕರಿಗೆ, ಅಲ್ಲಿಂದ ಸ್ಟೈಲಿಂಗ್ ತಂಡಕ್ಕೆ ಹೀಗೆ ಹಂತಹಂತವಾಗಿ ತಲುಪುತ್ತವೆ ಎಂದು ಅವರು ವಿವರಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ಒಮ್ಮೆ ಯೋಚಿಸಿ ನೋಡಿ, ಅದು ಎಷ್ಟು ಮುಜುಗರದ ಸನ್ನಿವೇಶವಾಗಿರಬಹುದು? ಹಾಡಿನ ಚಿತ್ರೀಕರಣದ ನಡುವೆ ಯಾರೋ ಒಬ್ಬರು ಎದ್ದು ಹೋಗುತ್ತಾರೆ, ಮರಳಿ ಬಂದಾಗ ಅಲ್ಲಿರುವ ಎಲ್ಲಾ ಪುರುಷರು ನಿಮ್ಮನ್ನು ನೋಡುತ್ತಿರುತ್ತಾರೆ ಮತ್ತು ನಿಮ್ಮಲ್ಲಿ ಏನು ಬದಲಾವಣೆಯಾಗಿದೆ ಎಂಬುದು ಅವರಿಗೆ ತಿಳಿದಿರುತ್ತದೆ. ಅಂತಹ ಸಂದರ್ಭಗಳು ನಿಜಕ್ಕೂ ಮುಜುಗರ ಉಂಟುಮಾಡುತ್ತವೆ,” ಎಂದು ತಾಪ್ಸಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಪ್ಸಿ ಸಿನಿ ಪಯಣ: 2010ರಲ್ಲಿ ತೆಲುಗಿನ ‘ಝುಮ್ಮಂದಿ ನಾದಂ’ ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದ ತಾಪ್ಸಿ, ನಂತರ ತಮಿಳು ಮತ್ತು ತೆಲುಗಿನ ಹಲವು ಚಿತ್ರಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದರು. ನಂತರ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಅವರು ‘ಬೇಬಿ’, ‘ಪಿಂಕ್’ ಅಂತಹ ಕಥಾಧರಿತ ಸಿನಿಮಾಗಳ ಮೂಲಕ ತಮ್ಮದೇ ಆದ ವಿಶಿಷ್ಟ ಗುರುತು ಮೂಡಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular