HomeLatest Newsರಾತ್ರಿಯಿಡೀ ಹಾಸಿಗೆ ಮೇಲೆ ಹೊರಳಾಡ್ತೀರಾ ? ಕಣ್ಣು ಮುಚ್ಚಿದ ತಕ್ಷಣ ನಿದ್ದೆ ಬರಲು ಇಲ್ಲಿದೆ ಟ್ರಿಕ್ಸ್.!

ರಾತ್ರಿಯಿಡೀ ಹಾಸಿಗೆ ಮೇಲೆ ಹೊರಳಾಡ್ತೀರಾ ? ಕಣ್ಣು ಮುಚ್ಚಿದ ತಕ್ಷಣ ನಿದ್ದೆ ಬರಲು ಇಲ್ಲಿದೆ ಟ್ರಿಕ್ಸ್.!

ಇಂದಿನ ಧಾವಂತದ ಬದುಕಿನಲ್ಲಿ ಕೆಲಸದ ಒತ್ತಡ, ಮಾನಸಿಕ ಆತಂಕ ಮತ್ತು ಬದಲಾದ ಜೀವನಶೈಲಿಯಿಂದಾಗಿ ಲಕ್ಷಾಂತರ ಜನರು ‘ನಿದ್ರಾಹೀನತೆ’ (Insomnia) ಸಮಸ್ಯೆಯಿಂದ ಬಳಲುತ್ತಿದ್ದಾರೆ. ರಾತ್ರಿಯಿಡೀ ಹಾಸಿಗೆಯ ಮೇಲೆ ಹೊರಳಾಡಿದರೂ ಕಣ್ಣಿಗೆ ನಿದ್ದೆ ಹತ್ತದೆ, ಬೆಳ್ಳಂಬೆಳಗ್ಗೆ ಸುಸ್ತಿನಿಂದ ಏಳುವವರ ಸಂಖ್ಯೆ ಹೆಚ್ಚುತ್ತಿದೆ. ಅನೇಕರು ನಿದ್ದೆಗಾಗಿ ಮಾತ್ರೆಗಳ ಮೊರೆ ಹೋಗುತ್ತಿದ್ದಾರೆ, ಆದರೆ ಇದು ಆರೋಗ್ಯದ ಮೇಲೆ ದೀರ್ಘಕಾಲದ ಅಡ್ಡಪರಿಣಾಮ ಬೀರಬಹುದು.

ಹಾಗಾದರೆ, ಯಾವುದೇ ಔಷಧಿಯ ಸಹಾಯವಿಲ್ಲದೆ ನೈಸರ್ಗಿಕವಾಗಿ ಗಾಢ ನಿದ್ದೆ ಪಡೆಯುವುದು ಹೇಗೆ? ಕೇವಲ 10 ರಿಂದ 15 ನಿಮಿಷಗಳಲ್ಲಿ ನಿಮ್ಮನ್ನು ನಿದ್ದೆಯ ಲೋಕಕ್ಕೆ ಕೊಂಡೊಯ್ಯುವ ಕೆಲವು ಸರಳ ಹಾಗೂ ಪರಿಣಾಮಕಾರಿ ‘ರಾಮಬಾಣ’ದಂತಹ ಸುಲಭ ಉಪಾಯಗಳು ಇಲ್ಲಿವೆ.

ಇಂದಿನ ದಿನಗಳಲ್ಲಿ ನಿದ್ರಾಹೀನತೆ ಎಂಬುದು ಸಾಮಾನ್ಯ ಸಮಸ್ಯೆಯಾಗಿಬಿಟ್ಟಿದೆ. ಪ್ರಸ್ತುತ ಪ್ರತಿ 10 ಜನರಲ್ಲಿ ಐವರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಬದಲಾದ ಜೀವನಶೈಲಿ. ಸರಿಯಾಗಿ ನಿದ್ದೆ ಮಾಡದಿದ್ದರೆ ನಾವು ಬೇಗನೇ ಕಾಯಿಲೆಗಳಿಗೆ ತುತ್ತಾಗುತ್ತೇವೆ. ನೀವು ಕೂಡ ರಾತ್ರಿ ನಿದ್ದೆ ಬರದೇ ಕಷ್ಟಪಡುತ್ತಿದ್ದರೆ, ಈ ಮಾಹಿತಿ ನಿಮಗಾಗಿ.. ಈ ಸಲಹೆಗಳನ್ನು ನೀವು ನಿಯಮಿತವಾಗಿ ಪಾಲಿಸಿದರೆ, ಕಣ್ಣು ಮುಚ್ಚಿದ ತಕ್ಷಣ ನಿದ್ದೆ ಬರುವುದು ಖಚಿತ!

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

1. ದೇಹ ನೀಡುವ ಸಂಕೇತ ಮುಖ್ಯ : ನಾವು ಅತಿಯಾಗಿ ಕೆಲಸ ಮಾಡಿ ಸುಸ್ತಾದರೆ ಬೇಗ ನಿದ್ದೆ ಬರುತ್ತದೆ ಎಂದು ಅನೇಕರು ಹೇಳುತ್ತಾರೆ. ಆದರೆ ಕೆಲವೊಮ್ಮೆ ದೇಹ ಎಷ್ಟು ಸುಸ್ತಾಗಿದ್ದರೂ ನಿದ್ದೆ ಬರುವುದಿಲ್ಲ. ಏಕೆಂದರೆ, ನಮ್ಮ ದೇಹವು ನಿದ್ದೆ ಬೇಕು ಎಂಬ ಸಂಕೇತಗಳನ್ನು ಮೆದುಳಿಗೆ ನೀಡಿದಾಗ ಮಾತ್ರ ನಮಗೆ ನಿದ್ದೆ ಹತ್ತುತ್ತದೆ. ಕೆಲವು ಸರಳ ಕ್ರಮಗಳನ್ನು ಅನುಸರಿಸುವ ಮೂಲಕ ದೇಹವು ಸರಿಯಾದ ಸಮಯಕ್ಕೆ ನಿದ್ದೆಯ ಸಂಕೇತಗಳನ್ನು ನೀಡುವಂತೆ ಮಾಡಬಹುದು.

2. 4-7-8 ಉಸಿರಾಟದ ತಂತ್ರ : ಮಲಗಿದ ತಕ್ಷಣ ನಿದ್ದೆ ಬರಬೇಕೆಂದರೆ ಈ ಕ್ರಮ ಅನುಸರಿಸಿ: ಹಾಸಿಗೆಯ ಮೇಲೆ ಮಲಗಿ 4 ಸೆಕೆಂಡುಗಳ ಕಾಲ ದೀರ್ಘವಾಗಿ ಉಸಿರು ತೆಗೆದುಕೊಳ್ಳಿ. ನಂತರ 7 ಸೆಕೆಂಡುಗಳ ಕಾಲ ಉಸಿರನ್ನು ಹಿಡಿದಿಟ್ಟುಕೊಳ್ಳಿ. ಆಮೇಲೆ 8 ಸೆಕೆಂಡುಗಳ ಕಾಲ ನಿಧಾನವಾಗಿ ಉಸಿರನ್ನು ಹೊರಬಿಡಿ. ಹೀಗೆ ಮಾಡುವುದರಿಂದ ಮನಸ್ಸು ಶಾಂತವಾಗಿ ನಿಮಗೆ ಬೇಗ ನಿದ್ದೆ ಹತ್ತುತ್ತದೆ.

3. ಕಾಲುಗಳಿಗೆ ಸಾಕ್ಸ್ ಧರಿಸಿ : ಬೇಗ ನಿದ್ದೆ ಬರಲು ಮತ್ತೊಂದು ಉಪಾಯವೆಂದರೆ, ಮಲಗುವ ಮುನ್ನ ಕಾಲುಗಳಿಗೆ ಹತ್ತಿ (Cotton) ಸಾಕ್ಸ್‌ಗಳನ್ನು ಧರಿಸುವುದು. ಹೀಗೆ ಮಾಡುವುದರಿಂದ ಪಾದಗಳು ಬೆಚ್ಚಗಾಗಿ, ದೇಹವನ್ನು ತಂಪುಗೊಳಿಸಲು ಮೆದುಳಿಗೆ ಸಂಕೇತಗಳು ರವಾನೆಯಾಗುತ್ತವೆ. ಇದು ನಿದ್ದೆ ಬೇಗ ಬರಲು ಸಹಾಯ ಮಾಡುತ್ತದೆ. ಸಾಕ್ಸ್ ಧರಿಸಿ ಮಲಗುವುದರಿಂದ ನಿದ್ದೆಯ ಮಧ್ಯೆ ಯಾವುದೇ ಅಡಚಣೆ ಉಂಟಾಗುವುದಿಲ್ಲ ಎಂದು ಅಧ್ಯಯನಗಳು ಕೂಡ ತಿಳಿಸಿವೆ.

4. ಲ್ಯಾವೆಂಡರ್ ಎಣ್ಣೆಯ ಬಳಕೆ : ಉತ್ತಮ ನಿದ್ದೆಗೆ ಲ್ಯಾವೆಂಡರ್ ಎಣ್ಣೆ ರಾಮಬಾಣ. ಈ ಎಣ್ಣೆಯ ಸುವಾಸನೆ ಸೇವಿಸುವುದರಿಂದ ಬೇಗ ನಿದ್ದೆ ಬರುತ್ತದೆ. ಲ್ಯಾವೆಂಡರ್ ಎಣ್ಣೆಯಲ್ಲಿ ಮೆದುಳನ್ನು ಭಾವನಾತ್ಮಕವಾಗಿ ಶಾಂತಗೊಳಿಸುವ ಕೆಲವು ಸಂಯುಕ್ತಗಳಿವೆ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ. ಇದರಿಂದ ಹೃದಯ ಬಡಿತ, ರಕ್ತದೊತ್ತಡ (BP) ಮತ್ತು ಕೊಲೆಸ್ಟ್ರಾಲ್ ಕೂಡ ನಿಯಂತ್ರಣಕ್ಕೆ ಬರುತ್ತದೆ. ಆದ್ದರಿಂದ ಉತ್ತಮ ನಿದ್ದೆಗಾಗಿ ಇವುಗಳನ್ನು ಪ್ರಯತ್ನಿಸಿ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular