ವಿಜಯನಗರ: ನಟಿ ರಚಿತಾ ರಾಮ್ ಕಾರು ಚಾಲಕ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರ ಮೇಲೆ ಹಲ್ಲೆ ನಡೆಸಿರುವ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿಯಲ್ಲಿ ನಡೆದಿದೆ.
ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕರಾಗಿರುವ ರವಿಕುಮಾರ್ ಅವರ ಮೇಲೆ ರಚಿತಾ ರಾಮ್ ಕಾರು ಚಾಲಕ ಹಲ್ಲೆ ನಡೆಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಹಂಪಿ ಉತ್ಸವದ ಕೊನೆಯ ದಿನವಾದ ಫೆ.15ರಂದು ಈ ಘಟನೆ ನಡೆದಿದೆ.
ಅಧಿಕಾರಿ ರವಿಕುಮಾರ್ ಅವರ ಕಣ್ಣಿಗೆ ಮುಷ್ಟಿ ಮಾಡಿ ಕಾರು ಚಾಲಕ ಗುದ್ದಿದ್ದು, ರವಿಕುಮಾರ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಭದ್ರತಾ ಹೆಸರಿನಲ್ಲಿ ರಚಿತಾ ರಾಮ್ ಕಾರು ಚಾಲಕ ಗೂಂಡಾಗಳಂತೆ ವರ್ತಿಸಿದ್ದಾನೆ ಎಂದು ತಿಳಿದುಬಂದಿದೆ.

