ಸರ್ಕಾರಿ ಗೌರವಕ್ಕೆ ತಗಲಿದ ಖರ್ಚು ವೆಚ್ಚ ಪಾವತಿಸುವಂತೆ ದಿ. ಪತ್ರಕರ್ತ ರಾಮಯ್ಯನವರ ಕುಟುಂಬಕ್ಕೆ ಬಿಲ್ ಕಳಿಸಿದ ವಿಚಾರದ ಬಗ್ಗೆ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಇದು ನಾಡಿನ ಹಿರಿಯ ಪತ್ರಕರ್ತರಿಗೆ ಮಾಡಿರುವ ಅವಮಾನವಾಗಿದೆ .ಸರ್ಕಾರ ದಿವಾಳಿಯಾಗಿದೆ ಎಂದು ಟೀಕಿಸಿದೆ.
ಸಾವಿರ ದಿನದ ಕಾಂಗ್ರೆಸ್ ಸರ್ಕಾರ ಸಾವಿನಲ್ಲೂ ಕಾಸು ಕೇಳುವ ನೀಚತನಕ್ಕೆ ಇಳಿದಿದೆ. ಹಿರಿಯ ಪತ್ರಕರ್ತ, ವಿಧಾನ ಪರಿಷತ್ ಮಾಜಿ ಸದಸ್ಯ ಪಿ.ರಾಮಯ್ಯನವರ ಅಂತ್ಯಸಂಸ್ಕಾರವನ್ನು ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿಸುವುದಾಗಿ ಬರುಡೆ ಬಿಟ್ಟ ಸಿದ್ಧರಾಮಯ್ಯ ಸರ್ಕಾರ ಇದೀಗ ಹಿಂಬಾಗಿಲಿನಿಂದ ಅವರ ಕುಟುಂಬಸ್ಥರಿಗೆ ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಮಾಡಿರುವುದಕ್ಕೆ ಪೊಲೀಸ್ ಇಲಾಖೆ ಬಿಲ್ ಕಳುಹಿಸಿದೆ.
ಮಿಸ್ಟರ್ ಗೊತ್ತಿಲ್ಲ ಹೋಮ್ ಮಿನಿಸ್ಟರ್ ಡಾ. ಜಿ. ಪರಮೇಶ್ವರ್ ಅವರೇ, ಇದು ನಿಮಗೆ ಗೊತ್ತಿಲ್ಲವೇ? ಅಥವಾ ನಿಮ್ಮ ಸರ್ಕಾರ ಸಾವಿರದ ದಿನಕ್ಕೆ ಇಷ್ಟೊಂದು ಪಾಪರ್ ಆಗಿದೆಯೇ ಎಂದು ಬಿಜೆಪಿ ಪ್ರಶ್ನಿಸಿದೆ.

