HomeLatest NewsBREAKING : ಮುಂಬೈನಲ್ಲಿ ನಿರ್ಮಾಣ ಹಂತದ 'ಮೆಟ್ರೋ ಪಿಲ್ಲರ್' ಕುಸಿದು ಓರ್ವ ಸಾವು, ಹಲವರಿಗೆ...

BREAKING : ಮುಂಬೈನಲ್ಲಿ ನಿರ್ಮಾಣ ಹಂತದ ‘ಮೆಟ್ರೋ ಪಿಲ್ಲರ್’ ಕುಸಿದು ಓರ್ವ ಸಾವು, ಹಲವರಿಗೆ ಗಾಯ |WATCH VIDEO

ಮುಂಬೈ  :    ಮುಂಬೈನ ಮುಲುಂಡ್ ಪಶ್ಚಿಮದ ಎಲ್‌ಬಿಎಸ್ ಮಾರ್ಗದಲ್ಲಿ ಇಂದು (ಶನಿವಾರ) ಮಧ್ಯಾಹ್ನ ನಿರ್ಮಾಣ ಹಂತದಲ್ಲಿದ್ದ ಮೆಟ್ರೋ ಲೈನ್ 4ರ ಬೃಹತ್ ಕಾಂಕ್ರೀಟ್ ಸ್ಲ್ಯಾಬ್ ವಾಹನಗಳ ಮೇಲೆ ಕುಸಿದು ಬಿದ್ದಿದೆ. ಈ ಭೀಕರ ಅಪಘಾತದಲ್ಲಿ ಒಬ್ಬರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ.

ಇಂದು ಮಧ್ಯಾಹ್ನ ಸುಮಾರು 12:20ಕ್ಕೆ ಮುಲುಂಡ್ ಪಶ್ಚಿಮದ ಜಾನ್ಸನ್ ಅಂಡ್ ಜಾನ್ಸನ್ ಕಂಪನಿ ಮತ್ತು ಒಬೆರಾಯ್ ಕಾಂಪ್ಲೆಕ್ಸ್ ಬಳಿ ಈ ಘಟನೆ ನಡೆದಿದೆ.

ಮೆಟ್ರೋ ಪಿಲ್ಲರ್‌ನ ಮೇಲ್ಭಾಗದಲ್ಲಿದ್ದ ಬೃಹತ್ ಸಿಮೆಂಟ್ ಸ್ಲ್ಯಾಬ್ (ಪ್ಯಾರಪೆಟ್ ಸೆಗ್ಮೆಂಟ್) ರಸ್ತೆಯಲ್ಲಿ ಚಲಿಸುತ್ತಿದ್ದ ಆಟೋ ರಿಕ್ಷಾ ಮತ್ತು ಕಾರುಗಳ ಮೇಲೆ ನೇರವಾಗಿ ಬಿದ್ದಿದೆ.ಈ ಘಟನೆಯಲ್ಲಿ ರಾಮಧನ್ ಯಾದವ್ ಎಂಬುವವರು ಸಾವನ್ನಪ್ಪಿದ್ದಾರೆ. ಗಾಯಗೊಂಡವರ ಪೈಕಿ ರಾಜ್‌ಕುಮಾರ್ ಯಾದವ್ (45) ಅವರ ಸ್ಥಿತಿ ಗಂಭೀರವಾಗಿದ್ದು, ಮಹೇಂದ್ರ ಪ್ರತಾಪ್ ಯಾದವ್ (52) ಮತ್ತು ದೀಪಾ ರುಹಿಯಾ (40) ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಕ್ಷಣಾ ಕಾರ್ಯಾಚರಣೆ

ಘಟನೆ ನಡೆದ ತಕ್ಷಣ ಅಗ್ನಿಶಾಮಕ ದಳ, ಪೊಲೀಸರು ಮತ್ತು ಮೆಟ್ರೋ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದರು. ಸ್ಲ್ಯಾಬ್ ಅಡಿಯಲ್ಲಿ ಸಿಲುಕಿದ್ದ ಆಟೋ ಚಾಲಕ ಮತ್ತು ಓರ್ವ ಮಹಿಳೆಯನ್ನು ಗ್ಯಾಸ್ ಕಟರ್ ಬಳಸಿ ಅತ್ಯಂತ ಕಷ್ಟದಿಂದ ಹೊರತೆಗೆಯಲಾಯಿತು. ಗಾಯಾಳುಗಳನ್ನು ಕೂಡಲೇ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಂಚಾರ ವ್ಯತ್ಯಯ ಮತ್ತು MMRDA ಪ್ರತಿಕ್ರಿಯೆ:

ಈ ಅಪಘಾತದಿಂದಾಗಿ ಜನನಿಬಿಡ ಎಲ್‌ಬಿಎಸ್ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಮುಂಬೈ ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ (MMRDA) ಈ ಬಗ್ಗೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, “ರಾಜೀವ್ (ಮಿಲನ್) ಸ್ಟ್ರೆಚ್‌ನ ಪಿಲ್ಲರ್ ಸಂಖ್ಯೆ P196 ಬಳಿ ಈ ಅವಘಡ ಸಂಭವಿಸಿದೆ. ಮೆಟ್ರೋ ತಂಡವು ಸ್ಥಳದಲ್ಲಿದ್ದು, ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು” ಎಂದು ತಿಳಿಸಿದೆ.ಘಟನೆಗೆ ಸಂಬಂಧಿಸಿದಂತೆ ಶಿವಸೇನೆ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಕಿಡಿಕಾರಿದ್ದು, “ಬಿಜೆಪಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಜನರ ಪ್ರಾಣಕ್ಕೆ ಬೆಲೆಯೇ ಇಲ್ಲದಂತಾಗಿದೆ” ಎಂದು ಟೀಕಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular