HomeLatest Newsಫೆ.15, 16 ರಂದು ಕುರುಗೋಡು ಉತ್ಸವ ಆಯೋಜನೆ, ಸಚಿವ ಜಮೀರ್ ಅಹ್ಮದ್ ಉದ್ಘಾಟನೆ

ಫೆ.15, 16 ರಂದು ಕುರುಗೋಡು ಉತ್ಸವ ಆಯೋಜನೆ, ಸಚಿವ ಜಮೀರ್ ಅಹ್ಮದ್ ಉದ್ಘಾಟನೆ

ಬಳ್ಳಾರಿ :    ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ವತಿಯಿಂದ ಫೆ.15 ಮತ್ತು 16 ರಂದು ಕುರುಗೋಡು ಉತ್ಸವ ಆಯೋಜಿಸಲಾಗಿದೆ.ಫೆ.16 ರಂದು ಸಂಜೆ 06 ಗಂಟೆಗೆ ಕಂಪ್ಲಿ ರಸ್ತೆಯ ಶ್ರೀ ಖಾದರ್‌ಲಿಂಗ ದರ್ಗಾ ಹತ್ತಿರದ ಶ್ರೀ ದೊಡ್ಡ ಬಸವೇಶ್ವರ ವೇದಿಕೆಯಲ್ಲಿ ಉದ್ಘಾಟನಾ ಸಮಾರಂಭ ನೆರವೇರಲಿದ್ದು, ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಉದ್ಘಾಟಿಸುವರು ಎಂದು ಪ್ರಕಟಣೆ ತಿಳಿಸಿದೆ.

ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಎಸ್.ಶಿವರಾಜ ತಂಗಡಗಿ, ಕಾನೂನು, ನ್ಯಾಯಾಲಯ ಹಕ್ಕುಗಳು, ಸಂಸದೀಯ ವ್ಯವಹಾರ ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಹೆಚ್. ಕೆ. ಪಾಟೀಲ್, ಕಾರ್ಮಿಕ ಸಚಿವ ಸಂತೋಷ್ ಲಾಡ್.ಎಸ್ ಅವರು ಘನ ಉಪಸ್ಥಿತಿ ಇರುವರು. ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ವಿಶೇಷ ಅತಿಥಿಗಳಾಗಿ ಭಾಗವಹಿಸಿ “ಕುರುಗೋಡು ಉತ್ಸವ ಐತಿಹಾಸಿಕ ದೇವಸ್ಥಾನಗಳ ದರ್ಶನ” ಪುಸ್ತಕ ಬಿಡುಗಡೆ ಮಾಡುವರು. ಕಂಪ್ಲಿ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಹಕಾರ ಕೈಮಗ್ಗ ನೇಕಾರರ ಮಹಾಮಂಡಳಿ ನಿಯಮಿತ (ಕಾವೇರಿ ಹ್ಯಾಂಡ್‌ಲೂಮ್ಸ್) ದ ಅಧ್ಯಕ್ಷರೂ ಆಗಿರುವ ಜೆ.ಎನ್.ಗಣೇಶ್ ಅವರು ಅಧ್ಯಕ್ಷತೆ ವಹಿಸುವರು.

ಮುಖ್ಯ ಅತಿಥಿಗಳಾಗಿ ಸಂಸದರುಗಳಾದ ಈ.ತುಕಾರಾಮ್, ಕೆ.ರಾಜಶೇಖರ ಬಸವರಾಜ ಹಿಟ್ನಾಳ್, ರಾಜ್ಯ ಸಭೆ ಸದಸ್ಯ ಡಾ.ಸೈಯದ್ ನಾಸೀರ್ ಹುಸೇನ್, ಡಾ.ಬಾಬು ಜಗಜೀವನ್‌ರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ್, ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ, ಸಿರುಗುಪ್ಪ ಶಾಸಕ ಬಿ.ಎಂ ನಾಗರಾಜ್, ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ, ಸಂಡೂರು ಶಾಸಕಿ ಈ.ಅನ್ನಪೂರ್ಣ, ವಿಧಾನ ಪರಿಷತ್ ಶಾಸಕರಾದ ಡಾ.ಚಂದ್ರಶೇಖರ ಬಿ.ಪಾಟೀಲ, ಶಶೀಲ್ ಜಿ.ನಮೋಶಿ, ವೈ.ಎಂ.ಸತೀಶ್, ಕರ್ನಾಟಕ ಸ್ಟೇಟ್ ಮಿನಿರಲ್ಸ್ ಕಾರ್ಪೋರೇಷನ್ ಲಿಮಿಟೆಡ್ ನ ಉಪಾಧ್ಯಕ್ಷ ಹೆಚ್.ಲಕ್ಷಣ್, ಕುರುಗೋಡು ಪುರಸಭೆ ಅಧ್ಯಕ್ಷ ಟಿ.ಶೇಖಣ್ಣ, ಬಳ್ಳಾರಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ, ಕುರುಗೋಡು ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಸವನಗೌಡ ಸೇರಿದಂತೆ ಇತರರು ಭಾಗವಹಿಸುವರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಶೇಷ ಗಣ್ಯ ಆಹ್ವಾನಿತರಾಗಿ ಸವದತ್ತಿ ಯಲ್ಲಮ್ಮ ಕ್ಷೇತ್ರ ಶಾಸಕ ವಿಶ್ವಾಸ್ ವಸಂತ್ ವೈದ್ಯ, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಅಧ್ಯಕ್ಷರೂ ಆದ ಮಸ್ಕಿ ಕ್ಷೇತ್ರ ಶಾಸಕ ಬಸವನಗೌಡ ತುರ್ವಿಹಾಳ್, ಬೆಳಗಾವಿ ಉತ್ತರ ಕ್ಷೇತ್ರ ಶಾಸಕ ಆಸೀಫ್ ಸೇಟ್, ಜಗಳೂರು ಕ್ಷೇತ್ರ ಶಾಸಕ ದೇವೇಂದ್ರಪ್ಪ, ಕಿತ್ತೂರು ಕ್ಷೇತ್ರ ಶಾಸಕ ಬಾಬಾ ಸಾಹೇಬ್ ಪಾಟೀಲ್, ಮಾಯಕೊಂಡ ಕ್ಷೇತ್ರ ಶಾಸಕ ಕೆ. ಎಸ್. ಬಸವಂತಪ್ಪ ಸೇರಿದಂತೆ ಇತರರು ಭಾಗವಹಿಸುವರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಕೆ.ವಿ. ತ್ರಿಲೋಕಚಂದ್ರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಮಂಜುನಾಥ, ಕಲಬುರಗಿ ಪ್ರಾದೇಶಿಕ ಆಯುಕ್ತರಾದ ಜಹೀರಾ ನಾಸೀಮ್, ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್. ಕೆ., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಕೆ.ಎಂ. ಗಾಯತ್ರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರಿಸ್ ಸುಮೇರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ ಪೆನ್ನೇಕರ್, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್. ಎನ್., ಸಹಾಯಕ ಆಯುಕ್ತ ರಾಜೇಶ್. ಹೆಚ್.ಡಿ ಸೇರಿದಂತೆ ಇತರರು ಉಪಸ್ಥಿತರಿರುವರು.

ಫೆ.15ರಂದು ವಿವಿಧ ಕಾರ್ಯಕ್ರಮಗಳು:

ಕುರುಗೋಡು ಉತ್ಸವದ ಅಂಗವಾಗಿ ಹಲವಾರು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.ಫೆ.15 ರಂದು ಬೆಳಿಗ್ಗೆ 07 ಗಂಟೆಗೆ ವದ್ದಟ್ಟಿ ಕ್ರಾಸ್‌ನಿಂದ ಕುರುಗೋಡು ಶ್ರೀ ದೊಡ್ಡ ಬಸವೇಶ್ವರ ದೇವಸ್ಥಾನದವರೆಗೆ ಮ್ಯಾರಾಥಾನ್ ಓಟ, ಬೆಳಿಗ್ಗೆ 08.30 ಗಂಟೆಗೆ ಕುರುಗೋಡಿನ ಮಿನಿ ವಿಧಾನಸೌಧದಿಂದ ಮುಖ್ಯವೃತ್ತದ ವರೆಗೆ ಎತ್ತಿನಬಂಡಿ ಪ್ರದರ್ಶನ, ಬೆಳಿಗ್ಗೆ 10 ಗಂಟೆಗೆ ಶ್ರೀ ನಾಡಗೌಡರ ಮರಿಬಸವನಗೌಡರ ಸ್ಮಾರಕ ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನದಲ್ಲಿ ಕುರುಗೋಡು ಬೈ ಸೈ (ಆಗಸದಿಂದ ಕುರುಗೋಡು), ಬೆಳಿಗ್ಗೆ 10 ಗಂಟೆಗೆ ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿಣ್ಣರ ಚಿತ್ರಕಲಾ ಉತ್ಸವ, ಬೆಳಿಗ್ಗೆ 10 ಗಂಟೆಗೆ ಶ್ರೀ ದೊಡ್ಡ ಬಸವೇಶ್ವರ ದೇವಸ್ಥಾನ ಮುಂಭಾಗ ಹವ್ಯಾಸಿ ಚಿತ್ರಕಲಾವಿದರ ಚಿತ್ರಕಲಾ ಉತ್ಸವ, ಬೆಳಿಗ್ಗೆ 10.30 ಗಂಟೆಗೆ ಶ್ರೀ ದೊಡ್ಡ ಬಸವೇಶ್ವರ ದೇವಸ್ಥಾನ ಎದುರುಗಡೆ ಹಾಗೂ ಕಂಪ್ಲಿ ರಸ್ತೆಯ ಶ್ರೀ ಸಂಕ್ಲಮ್ಮ ದೇವಸ್ಥಾನದ ಹತ್ತಿರ ರಂಗೋಲಿ ಉತ್ಸವ, ಬೆಳಿಗ್ಗೆ 11.30 ಗಂಟೆಗೆ ಬಾದನಹಟ್ಟಿ ರಸ್ತೆಯ ಪೆಟ್ರೋಲ್ ಬಂಕ್ ಎದುರುಗಡೆಯ ರಜಾಬ್ ಅಲಿಸಾಬ್ ಮತ್ತು ಸಹೋದರರ ಜಮೀನಿನಲ್ಲಿ ಕೆಸರು ಗದ್ದೆ ಓಟ (ಪುರುಷರಿಗೆ) ಮತ್ತು ಹಗ್ಗ-ಜಗ್ಗಾಟ (ಮಹಿಳೆಯರಿಗೆ), ಮಧ್ಯಾಹ್ನ 2.30 ಕ್ಕೆ ಪಟ್ಟಣದ ಸಿಂಧಿಗೇರಿ ರಸ್ತೆಯಲ್ಲಿರುವ ಶ್ರೀ ಗಾದಿಲಿಂಗೇಶ್ವರ ದೇವಸ್ಥಾನದಿಂದ ಜಾನಪದ ಮೆರವಣಿಗೆ, ಬಳಿಕ ಮಧ್ಯಾಹ್ನ 03 ಗಂಟೆಯಿಂದ ಶ್ರೀ ದೊಡ್ಡ ಬಸವೇಶ್ವರ ದೇವಸ್ಥಾನದ ಆರತಿ ವೇದಿಕೆಯಲ್ಲಿ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ನಂತರ ಸಂಜೆ 06.30 ಗಂಟೆಗೆ ಶ್ರೀ ದೊಡ್ಡ ಬಸವೇಶ್ವರ ದೇವಸ್ಥಾನದ ಆರತಿ ವೇದಿಕೆಯಲ್ಲಿ ವಾರಣಾಸಿ ಅರ್ಚಕರ ತಂಡದಿಂದ ಶಿವಬಸವ ಆರತಿ ನಡೆಯಲಿದೆ. ನಂತರ ಸಾಮೂಹಿಕ ಭರತನಾಟ್ಯ ಉತ್ಸವ ಕಾರ್ಯಕ್ರಮ, ನಂತರ ಸಾಧಕರಿಗೆ ಹಾಗೂ ನೌಕರರಿಗೆ ಸನ್ಮಾನ ಜರುಗಲಿವೆ.

*ಫೆ.16 ರಂದು ಕಾರ್ಯಕ್ರಮಗಳು:

ಕುರುಗುಡು ಪಟ್ಟಣದ ಕಂಪ್ಲಿ ರಸ್ತೆಯ ಶ್ರೀ ದೊಡ್ಡ ಬಸವೇಶ್ವರ ಮುಖ್ಯ ವೇದಿಕೆ ಮುಂಭಾಗದಲ್ಲಿ ಹಲವು ವಿವಿಧ ವಸ್ತುಪ್ರದರ್ಶನ ಮಳಿಗೆಗಳ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಶಾಸಕರು ಉದ್ಘಾಟನೆ ನೆರವೇರಿಸುವರು.

ಅಂದು ಬೆಳಿಗ್ಗೆ 10 ಗಂಟೆಗೆ ಫಲ ಪುಷ್ಪ ಪ್ರದರ್ಶನ, ಬೆಳಿಗ್ಗೆ 10.15 ಗಂಟೆಗೆ ಆಹಾರ ಮೇಳ ಪ್ರದರ್ಶನ ಮಳಿಗೆಗಳ ಉದ್ಘಾಟನೆ, ಬೆಳಿಗ್ಗೆ 10.30 ಗಂಟೆಗೆ ಮಲ್ಲಕಂಭ ಪ್ರದರ್ಶನ, ಬೆಳಿಗ್ಗೆ 11 ಗಂಟೆಗೆ ಗಾಳಿಪಟ ಉತ್ಸವ, ಮಧ್ಯಾಹ್ನ 02.30 ಕ್ಕೆ ಕವಿಗೋಷ್ಠಿ, ಮಧ್ಯಾಹ್ನ 03.15 ರಿಂದ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ 05 ಗಂಟೆಗೆ ಕೇಶ ವಿನ್ಯಾಶ, ಸಂಜೆ 5.30 ಗಂಟೆಗೆ ವಿಶೇಷ ಸಾಧಕರಿಗೆ ಸನ್ಮಾನ, ಸಂಜೆ 06 ಗಂಟೆಗೆ ಕುರುಗೋಡು ಉತ್ಸವದ ಉದ್ಘಾಟನಾ ಸಮಾರಂಭ ನೆರವೇರಲಿದೆ.

ಬಳಿಕ ರಾತ್ರಿ 07 ಗಂಟೆಗೆ ಬೆಂಗಳೂರಿನ ಜೀ ಕನ್ನಡ ಕಾಮಿಡಿ ಕಿಲಾಡಿಗಳ ತಂಡದಿಂದ ಹಾಸ್ಯ ಸಂಜೆ ಕಾರ್ಯಕ್ರಮ, ರಾತ್ರಿ 08 ಗಂಟೆಗೆ ಖ್ಯಾತ ಸಂಗೀತ ಕಲಾವಿದ ಆಲ್ ಓಕೆ (ಅಲೋಕ್ ಬಾಬು) ಮತ್ತು ಸಂಗಡಿಗರಿಂದ ಕನ್ನಡಗೀತೆಗಳ ರಸಮಂಜರಿ ಕಾರ್ಯಕ್ರಮ, ರಾತ್ರಿ 09 ಗಂಟೆಗೆ ಖ್ಯಾತ ಸಂಗೀತ ಕಲಾವಿದ ಚಂದನ್ ಶೆಟ್ಟಿ ಮತ್ತು ಸಂಗಡಿಗರಿಂದ ಕನ್ನಡಗೀತೆಗಳ ರಸಮಂಜರಿ ಕಾರ್ಯಕ್ರಮ ನಡೆಯಲಿವೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular