HomeLatest News'ಗೋಲ್ಡ್ ಲೋನ್' ಪಡೆಯುವವರಿಗೆ 'RBI' ನಿಂದ ಸಿಹಿ ಸುದ್ದಿ: ನಿಯಮಗಳಲ್ಲಿ ಮಹತ್ವದ ಬದಲಾವಣೆ.!

‘ಗೋಲ್ಡ್ ಲೋನ್’ ಪಡೆಯುವವರಿಗೆ ‘RBI’ ನಿಂದ ಸಿಹಿ ಸುದ್ದಿ: ನಿಯಮಗಳಲ್ಲಿ ಮಹತ್ವದ ಬದಲಾವಣೆ.!

ಭಾರತೀಯ ರಿಸರ್ವ್ ಬ್ಯಾಂಕ್ (RBI) ಇತ್ತೀಚೆಗೆ ಚಿನ್ನದ ಸಾಲಗಳಿಗೆ (Gold Loan) ಸಂಬಂಧಿಸಿದಂತೆ ಮೂರು ಪ್ರಮುಖ ಹೊಸ ನಿಯಮಗಳನ್ನು ಘೋಷಿಸಿದೆ. ಹೌದು. ಈ ಬದಲಾವಣೆಗಳು ಸಾಲಗಾರರಿಗೆ ಹೆಚ್ಚಿನ ಆರ್ಥಿಕ ನಮ್ಯತೆ ಮತ್ತು ಭದ್ರತೆಯನ್ನು ಒದಗಿಸಲಿವೆ. ಅವುಗಳು ಯಾವುವು ಇಲ್ಲಿದೆ ಸಂಪೂರ್ಣ ಮಾಹಿತಿ.

ಸಾಲದ ಮಿತಿಹೆಚ್ಚಳ (LTV ಅನುಪಾತ)
ಮೊದಲನೆಯ ಪ್ರಮುಖ ಬದಲಾವಣೆಯು ‘ಲೋನ್ ಟು ವ್ಯಾಲ್ಯೂ’ (LTV) ಅನುಪಾತಕ್ಕೆ ಸಂಬಂಧಿಸಿದೆ. ಈ ಹಿಂದೆ ಬ್ಯಾಂಕುಗಳು ಚಿನ್ನದ ಮೌಲ್ಯದ ಶೇಕಡಾ 75% ರಷ್ಟು ಮಾತ್ರ ಸಾಲ ನೀಡುತ್ತಿದ್ದವು. ಈಗ ಅದನ್ನು ಶೇಕಡಾ 85% ಕ್ಕೆ ಏರಿಸಲಾಗಿದೆ.
ಸಾಲದ ಮೊತ್ತದ ಆಧಾರದ ಮೇಲೆ ವರ್ಗೀಕರಣ:

• ರೂ. 2.5 ಲಕ್ಷಕ್ಕಿಂತ ಕಡಿಮೆ ಸಾಲ: ಚಿನ್ನದ ಮೌಲ್ಯದ 85% ರಷ್ಟು ಸಾಲ ಸಿಗಲಿದೆ.
• ರೂ. 2.5 ಲಕ್ಷದಿಂದ ರೂ. 5 ಲಕ್ಷದವರೆಗೆ ಸಾಲ: ಚಿನ್ನದ ಮೌಲ್ಯದ 80% ರಷ್ಟು ಸಾಲ ಸಿಗಲಿದೆ.
• ರೂ. 5 ಲಕ್ಷಕ್ಕಿಂತ ಹೆಚ್ಚಿನ ಸಾಲ: ಹಳೆಯ ನಿಯಮದಂತೆ 75% ರಷ್ಟು ಸಾಲ ಮುಂದುವರಿಯಲಿದೆ.
ಇದರರ್ಥ ನೀವು ಒಂದು ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ಅಡವಿಟ್ಟರೆ, ಈಗ ರೂ. 85,000 ವರೆಗೆ ಸಾಲ ಪಡೆಯಬಹುದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಟಾಪ್-ಅಪ್ ಸಾಲದ ಸೌಲಭ್ಯ (Top-up Loan)
ಎರಡನೇ ಪ್ರಮುಖ ನಿಯಮದ ಪ್ರಕಾರ, ಇನ್ನು ಮುಂದೆ ಪ್ರತಿಯೊಂದು ಬ್ಯಾಂಕ್ ಚಿನ್ನದ ಸಾಲದ ಮೇಲೆ ‘ಟಾಪ್-ಅಪ್’ ಸಾಲದ ಸೌಲಭ್ಯವನ್ನು ನೀಡುವುದು ಕಡ್ಡಾಯವಾಗಿದೆ.
• ಟಾಪ್-ಅಪ್ ಲೋನ್ ಅಂದರೆ ಏನು?: ನೀವು ಈಗಾಗಲೇ ಪಡೆದಿರುವ ಚಿನ್ನದ ಸಾಲದ ಮೇಲೆ ಹೆಚ್ಚುವರಿ ಹಣವನ್ನು ಸಾಲವಾಗಿ ಪಡೆಯುವುದು.
• ಭದ್ರತೆ: ಈ ಹೆಚ್ಚುವರಿ ಸಾಲಕ್ಕೆ ನೀವು ಈ ಹಿಂದೆ ಅಡವಿಟ್ಟ ಚಿನ್ನವೇ ಸೆಕ್ಯೂರಿಟಿಯಾಗಿರುತ್ತದೆ.
• ಶರತ್ತು: ಈ ಸೌಲಭ್ಯವನ್ನು ಪಡೆಯಲು ಸಾಲಗಾರರು ಉತ್ತಮ ಸಿಬಿಲ್ ಸ್ಕೋಲ್ (CIBIL Score) ಮತ್ತು ಕ್ರೆಡಿಟ್ ಇತಿಹಾಸವನ್ನು ಹೊಂದಿರಬೇಕು.

ಚಿನ್ನ ಹಿಂತಿರುಗಿಸಲು ಕಾಲಮಿತಿ ಮತ್ತು ದಂಡ
ಮೂರನೇ ನಿಯಮವು ಸಾಲಗಾರರ ಭದ್ರತೆಗೆ ಸಂಬಂಧಿಸಿದ್ದಾಗಿದೆ. ಸಾಲವನ್ನು ಪೂರ್ಣವಾಗಿ ಮರುಪಾವತಿಸಿದ ನಂತರ ಬ್ಯಾಂಕುಗಳು ಚಿನ್ನವನ್ನು ಹಿಂತಿರುಗಿಸಲು ವಿಳಂಬ ಮಾಡುವುದನ್ನು ತಡೆಯಲು ಆರ್ಬಿಐ ಕಠಿಣ ನಿಯಮ ಜಾರಿಗೆ ತಂದಿದೆ.
• ಕಾಲಮಿತಿ: ಸಾಲದ ಮೊತ್ತ ಪಾವತಿಯಾದ 7 ಕೆಲಸದ ದಿನಗಳೊಳಗೆ ಬ್ಯಾಂಕುಗಳು ಚಿನ್ನವನ್ನು ಗ್ರಾಹಕರಿಗೆ ಹಿಂತಿರುಗಿಸಬೇಕು.
• ವಿಳಂಬಕ್ಕೆ ದಂಡ: ಒಂದು ವೇಳೆ ಬ್ಯಾಂಕ್ 7 ದಿನಗಳೊಳಗೆ ಚಿನ್ನ ನೀಡಲು ವಿಫಲವಾದರೆ, ಪ್ರತಿ ದಿನದ ವಿಳಂಬಕ್ಕೆ ರೂ. 5,000 ದಂಡವನ್ನು ಸಾಲಗಾರನಿಗೆ ನೀಡಬೇಕಾಗುತ್ತದೆ.
• ಉದಾಹರಣೆ: ಬ್ಯಾಂಕ್ ಚಿನ್ನವನ್ನು ನೀಡಲು 10 ದಿನ ತೆಗೆದುಕೊಂಡರೆ, ಹೆಚ್ಚುವರಿ 3 ದಿನಗಳಿಗೆ (3 x 5000) ಒಟ್ಟು ರೂ. 15,000 ದಂಡವನ್ನು ಬ್ಯಾಂಕ್ ಗ್ರಾಹಕನಿಗೆ ಪಾವತಿಸಬೇಕು.


    ಈ ಹೊಸ ನಿಯಮಗಳು ಚಿನ್ನದ ಮೇಲೆ ಸಾಲ ಪಡೆಯುವವರಿಗೆ ಹೆಚ್ಚಿನ ಮೊತ್ತವನ್ನು ಪಡೆಯಲು ಮತ್ತು ತಮ್ಮ ಚಿನ್ನವನ್ನು ಸುರಕ್ಷಿತವಾಗಿ, ಸಕಾಲದಲ್ಲಿ ಮರಳಿ ಪಡೆಯಲು ದಾರಿಯ ಮಾಡಿಕೊಟ್ಟಿವೆ

    .

    .

    For Latest News Updates, Join Our Whatsapp Community🚩
    ranjith
    ranjith
    Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
    RELATED ARTICLES

    LEAVE A REPLY

    Please enter your comment!
    Please enter your name here

    Most Popular