ಕೃಷಿ ಜಮೀನುಗಳ ಮೂಲ ಮಾಲೀಕರು ಮೃತರಾಗಿದ್ದಲ್ಲಿ, ಅವರ ವಾರಸುದಾರರಿಗೆ ಆಸ್ತಿಯನ್ನು ವರ್ಗಾಯಿಸಲು ಪೌತಿ ಖಾತೆ ಆಂದೋಲನ ಎಂಬ ವಿಶೇಷ ಅಭಿಯಾನವನ್ನು ರಾಜ್ಯ ಸರ್ಕಾರವು ಹಮ್ಮಿಕೊಂಡಿದೆ.
ಇದರಿಂದಾಗಿ ಜನಸಾಮಾನ್ಯರು ಕಚೇರಿಗಳಿಗೆ ಅಲೆದಾಡಬೇಕಿಲ್ಲ, ಅರ್ಜಿ ಹಾಕಬೇಕಾಗಿಲ್ಲ. ನಿಮ್ಮ ಪೂರ್ವಜರ ಹೆಸರಲ್ಲಿರುವ ದಾಖಲೆಗಳನ್ನು ಯಾವುದೇ ತೊಂದರೆಯಿಲ್ಲದೆ ವಾರಸುದಾರರ ಹೆಸರಿಗೆ ಮಾಡಿಸಿಕೊಳ್ಳಬಹುದು. ಈಗಾಗಲೇ ರಾಜ್ಯದಲ್ಲಿ 14.50 ಲಕ್ಷಕ್ಕೂ ಹೆಚ್ಚು ಸರ್ವೇ ನಂಬರ್ಗಳ ಪೌತಿ ಖಾತೆ ಸಂಪೂರ್ಣಗೊಂಡಿದೆ.
ಈಗಲೇ ನಿಮ್ಮ ಗ್ರಾಮ ಲೆಕ್ಕಿಗರನ್ನು (ವಿಎ) ಸಂಪರ್ಕಿಸಿ. ಭೂಮಿಯ ವಾರಸುದಾರಿಕೆಯ ಅಧಿಕೃತ ಹಕ್ಕು ಪಡೆದುಕೊಳ್ಳಿ ಎಂದು ತಿಳಿಸಲಾಗಿದೆ.

