ಬೆಂಗಳೂರು: ಕಳೆದ ಕೆಲವು ದಿನಗಳಿಂದ ಗಗನಕ್ಕೇರುತ್ತಿದ್ದ ಚಿನ್ನದ ಬೆಲೆ ಕಂಡು ಕಂಗಾಲಾಗಿದ್ದ ಗ್ರಾಹಕರಿಗೆ ಇಂದು ಸಿಹಿ ಸುದ್ದಿ ಸಿಕ್ಕಿದೆ. ಸತತ ಏರಿಕೆಯ ಹಾದಿಯಲ್ಲಿದ್ದ ಹಳದಿ ಲೋಹದ ಬೆಲೆಯಲ್ಲಿ ಇಂದು (ಫೆಬ್ರವರಿ 12) ಗಮನಾರ್ಹ ಕುಸಿತ ಕಂಡುಬಂದಿದೆ.ನೀವು ಇಂದು ಒಡವೆ ಖರೀದಿಸುವ ಪ್ಲಾನ್ ಮಾಡಿದ್ದರೆ, ಮಾರುಕಟ್ಟೆಯ ಇಂದಿನ ದರ ಪಟ್ಟಿ ಇಲ್ಲಿದೆ ನೋಡಿ.
ಇಂದಿನ ಚಿನ್ನದ ದರ ಇಂತಿವೆ (24 ಕ್ಯಾರೆಟ್):ಒಂದೇ ದಿನದಲ್ಲಿ ಪ್ರತಿ ಗ್ರಾಂ ಚಿನ್ನದ ಬೆಲೆಯಲ್ಲಿ ₹120 ರೂಪಾಯಿಗಳಷ್ಟು ಇಳಿಕೆಯಾಗಿದೆ.ಪ್ರಮಾಣಇಂದಿನ ಬೆಲೆ (₹)ನಿನ್ನೆಯ ಬೆಲೆ (₹)ವ್ಯತ್ಯಾಸ
1 ಗ್ರಾಂ₹15,840₹15,960₹120 ಇಳಿಕೆ
8 ಗ್ರಾಂ₹1,26,720₹1,27,680₹960 ಇಳಿಕೆ
10 ಗ್ರಾಂ₹1,58,400₹1,59,600₹1,200 ಇಳಿಕೆ
100 ಗ್ರಾಂ₹15,84,000₹15,96,000₹12,000 ಇಳಿಕೆ
ಫೆಬ್ರವರಿ 7 ರಿಂದ ನಿರಂತರವಾಗಿ ಏರಿಕೆಯಾಗುತ್ತಿದ್ದ ಚಿನ್ನದ ದರ ಇಂದು ದಿಢೀರ್ ಕುಸಿತ ಕಂಡಿದೆ.ನಿನ್ನೆ ಪ್ರತಿ ಗ್ರಾಂಗೆ ₹14,630 ಇದ್ದ 22 ಕ್ಯಾರೆಟ್ ಚಿನ್ನದ ದರದಲ್ಲೂ ಇಂದಿನ ಕುಸಿತದ ನಂತರ ಬದಲಾವಣೆಯಾಗಿದೆ.ಚಿನ್ನದ ಬೆಲೆ ಇಳಿಕೆಯಾಗಿದ್ದರೆ, ಇತ್ತ ಬೆಳ್ಳಿ ಬೆಲೆಯಲ್ಲಿ ಮಾತ್ರ ಕೊಂಚ ಏರಿಕೆ ಕಂಡುಬಂದಿರುವುದು ಆಭರಣ ಪ್ರಿಯರಿಗೆ ಅಚ್ಚರಿ ಮೂಡಿಸಿದೆ.ಬೆಳ್ಳಿ ಬೆಲೆಗಳು, ಇಂದು ಗುರುವಾರ ಪ್ರತಿ ಕೆಜಿಗೆ ₹5000 ಏರಿಕೆಯಾಗಿದೆ.₹2.95ಲಕ್ಷಕ್ಕೆ ತಲುಪಿದೆ.
ಭಾರತದ ವಿವಿಧ ನಗರಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (ಪ್ರತಿ ಗ್ರಾಂ)
ಚೆನ್ನೈ – ₹15,928
ಮುಂಬೈ – ₹15,840
ದೆಹಲಿ – ₹15,855
ಕೋಲ್ಕತ್ತಾ – ₹15,840
ಬೆಂಗಳೂರು – ₹15,840
ಹೈದರಾಬಾದ್ – ₹15,840
ಕೇರಳ – ₹15,840
ಪುಣೆ – ₹15,840
ವಡೋದರಾ – ₹15,845
ಅಹಮದಾಬಾದ್ – ₹15,845

