ಬೆಂಗಳೂರು: ಶರಣಾಗಿರುವ ನಕ್ಷಲರ ಮೇಲಿನ ಪ್ರಕರಣಗಳನ್ನು ಶೀಘ್ರವೇ ಇತ್ಯರ್ಥಪಡಿಸಲು ಮೂವರು ಪ್ರಾಸಿಕ್ಯೂಟರ್ ಗಳನ್ನು ನೇಮಿಸಲು ತೀರ್ಮಾನಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.
ನಕ್ಸಲ್ ಪುನರ್ವಸತಿ ಬಗ್ಗೆ ಮಂಗಳವಾರ ನಡೆದ ಸಭೆ ಕುರಿತು ಅವರು ಮಾತನಾಡಿ, ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿಯಲ್ಲಿ ಪ್ರಾಸಿಕ್ಯೂಟರ್ ಗಳನ್ನು ನೇಮಿಸಲು ನಿರ್ಧರಿಸಲಾಗಿದೆ. ಈಗ ನಾವು ಸರ್ಕಾರಿ ಅಭಿಯೋಜಕರನ್ನು ನೇಮಿಸಿ ಕೇಸುಗಳನ್ನು ಬೇಗ ಇತ್ಯರ್ಥಪಡಿಸಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದ್ದಾರೆ.
ಕೆನಡಾದಲ್ಲಿ ನೆಲಮಂಗಲದ ಚಂದನ್ ಕುಮಾರ್ ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಮೂರ್ನಾಲ್ಕು ದಿನದಲ್ಲಿ ಭಾರತಕ್ಕೆ ಪಾರ್ಥಿವ ಶರೀರ ಬರುತ್ತದೆ ಎಂದು ಮಾಹಿತಿ ನೀಡಿದ್ದಾರೆ.

