HomeLatest NewsBIG NEWS: ವಿದ್ಯಾರ್ಥಿನಿ ಕಿಡ್ನ್ಯಾಪ್ ಯತ್ನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

BIG NEWS: ವಿದ್ಯಾರ್ಥಿನಿ ಕಿಡ್ನ್ಯಾಪ್ ಯತ್ನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದಿದೆ ಎನ್ನಲಾದ ವಿದ್ಯಾರ್ಥಿನಿ ಕಿಡ್ನ್ಯಾಪ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕಾಲೇಜಿಗೆ ಹೋಗಲೆಂದು ವಿದ್ಯಾರ್ಥಿನಿಯೇ ಕಿಡ್ನ್ಯಾಪ್ ಕಥೆ ಕಟ್ಟಿದ್ದಾಗಿ ತಿಳಿದುಬಂದಿದೆ.

ಪೊಲೀಸ್ ತನಿಖೆ ವೇಳೆ ವಿದ್ಯಾರ್ಥಿನಿ ಅಪಹರಣ ಪ್ರಕರಣದ ರಹಸ್ಯ ಬಯಲಾಗಿದೆ. ಅದೆಷ್ಟೋ ಮಕ್ಕಳಿಗೆ ಒಳ್ಲೆಯ ಕಾಲೇಜುಗಳಿಗೆ ಸೇರಿ ಉತ್ತಮ ವಿದ್ಯಾಭ್ಯಾಸವನ್ನು ಮಡಿ ಜೀವನ ರೂಪಿಸಿಕೊಳ್ಳಬೇಕೆಂಬ ಹಂಬಲವಿರುತ್ತದೆ. ಆದರೆ ಕುಟುಂಬದವರ ಒತ್ತಡ, ಕಾರಣಾಂತರಗಳಿಂದ ಕೆಲ ವಿದ್ಯಾರ್ಥಿಗಳಿಗೆ ಇದು ಸಾಧ್ಯವಾಗುವುದಿಲ್ಲ. ಇಂತದ್ದೇ ಸ್ಥಿತಿಗೆ ಸಿಲುಕಿದ ವಿದ್ಯಾರ್ಥಿನಿಯೊಬ್ಬಳು ತಾನು ಕಾಲೇಜಿಗೆ ಸೇರಬೇಕು ಎಂಬ ಆಸೆಯಿಂದ ಕಿಡ್ನ್ಯಾಪ್ ಯತ್ನದ ಕಥೆ ಕಟ್ಟಿ ಸಿಕ್ಕಿಬಿದ್ದ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಂಗಳೂರು ನಗರದಲ್ಲಿ ಕಾಲೇಜಿಗೆ ಸೇರುವ ಆಸೆಗಾಗಿ ವಿದ್ಯಾರ್ಥಿನಿ ಸ್ಕೂಟಿಯಲ್ಲಿ ಕಾಲೇಜಿಗೆ ಹೋಗುತ್ತಿದ್ದ ವೇಳೆ ತನ್ನನ್ನು ದುಷ್ಕರ್ಮಿಗಳು ಅಪಹರಿಸಲು ಯತ್ನಿಸಿದ್ದಾರೆ ಎಂದು ನಾಟಕವಾಡಿದ್ದಾಳೆ.

16 ವರ್ಷದ ಪ್ರಥಮ ಪಿಯುಸಿ ವಿದ್ಯಾರ್ಥಿನಿ, ಮೂವರು ಮಾಸ್ಕ್ ಧರಿಸಿದ್ದ ದುಷ್ಕರ್ಮಿಗಳು ತನ್ನನ್ನು ಕಾರಿನಲ್ಲಿ ಬಂದು ಚೂರಿ ತೋರಿಸಿ ಬಲವಂತವಾಗಿ ಎಳೆದು ಕಾರಲ್ಲಿ ಕೂರಿಸಲು ಯತ್ನಿಸಿದ್ದಾರೆ. ಈ ವೇಳೆ ತನ್ನ ಕೈಗೆ ಚಾಕು ತಗುಲಿದ್ದು ಗಾಯವಾಗಿದೆ ಎಂದು ಹೇಳಿದ್ದಳು. ಈ ವಿಚಾರ ಕುಟುಂಬಸ್ಥರ ಜೊತೆಗೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಹಿರಿಯ ಪೊಲೀಸ್​​ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಆದರೆ ಪೊಲೀಸರಿಗೆ ವಿದ್ಯಾರ್ಥಿನಿ ಸುಳ್ಳು ಹೇಳುತ್ತಿರಬಹುದೆಂಬ ಅನುಮಾನ. ವಿಚಾರಿಸಿದಾಗ ಕಥೆ ಕಟ್ಟಿದ್ದು ಬಯಲಾಗಿದೆ. ಕಿಡ್ನ್ಯಾಪ್​​ ನಾಟಕ ಮಾಡಿದರೆ ತನ್ನನ್ನು ಮನೆಯವರು ಮಂಗಳೂರಿ‌ನ ಕಾಲೇಜಿಗೆ ಸೇರಿಸುತ್ತಾರೆ ಎಂದು ಯುವತಿ ಪಕ್ಕಾ ಪ್ಲಾನ್ ಮಡಿಕೊಂಡು ಬ್ಲೇಡ್​​ನಲ್ಲಿ ತಾನೇ ಕೈ ಕೊಯ್ದುಕೊಂಡು ಕಥೆ ಕಟ್ಟಿದ್ದಳು. ಬ್ಯಾಗ್​​ನಲ್ಲಿರುವ ಪುಸ್ತಕಗಳನ್ನು ಮನೆಯಲ್ಲೇ ಸುಟ್ಟು ಹಾಕಿದ್ದ ವಿದ್ಯಾರ್ಥಿನಿ, ಬ್ಯಾಗ್​​ ನ್ನು ದಾರಿಯಲ್ಲಿ ಬಿಸಾಕಿದ್ದಳು. ಸ್ಕೂಟಿಯನ್ನು ನಿಲ್ಲಿಸಿ ಬ್ಲೇಡ್​​ನಿಂದ ಕೈ ಕುಯ್ದುಕೊಂಡು ನಾಟಕ ಮಾಡಿದ್ದಳು. ಮತ್ತೊಂದೆಡೆ ವಿದ್ಯಾರ್ಥಿನಿ ಸ್ಕೂಟಿಯಿಂದ ಬಿದ್ದಿರುವಂತೆ ನಟಿಸುವ ವೇಳೆ ಹಿಂಬದಿಯಿಂದ ಬಂದಿದ್ದ ಅಬ್ಬುಸಾಲಿ ಎಂಬಾತ ಕೂಡ ಘಟನೆಯ ಬಗ್ಗೆ ವಿವರಿಸಿದ್ದ. ಹಾಗಾಗಿ ವಿದ್ಯಾರ್ಥಿನಿ ಹೇಳುತ್ತಿರುವುದು ನಿಜ ಎಂದೇ ಭಾವಿಸಲಾಗಿತ್ತು. ಕುಟುಂಬದವರು ಕಂಗಾಲಾಗಿದ್ದರು. ಬೆಳ್ತಂಗಡಿ ಪೊಲೀಸರಿಗೆ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದಾರೆ. ವಿದ್ಯಾರ್ಥಿ ಹೇಳಿಕೆ ಬಗ್ಗೆ ಅನುಮಾನಗೊಂಡು ವಿಚಾರಿಸಿದಾಗ. ವಿದ್ಯಾರ್ಥಿನಿಯ ನಾಟಕ ಬಯಲಾಗಿದೆ.

ವಿದ್ಯಾರ್ಥಿನಿಯನ್ನು ವಿಚಾರಣೆ ನಡೆಸಿದಾಗ ತಾನೇ ಹೆಣೆದಿದ್ದ ಸುಳ್ಳಿನ ಕಥೆಯನ್ನು ಬಾಯ್ಬಿಟ್ಟಿದ್ದಾಳೆ. ಸದ್ಯ ಕಿಡ್ನ್ಯಾಪ್ ಯತ್ನ ಪ್ರಕರಣ ಸುಖಾಂತ್ಯಕಂಡಿದೆ.

For Latest News Updates, Join Our Whatsapp Community🚩
RELATED ARTICLES

Most Popular