ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅರ್ಹ ಸಂಗೀತ, ಚಿತ್ರಕಲೆ ಹಾಗೂ, ಕ್ರಾಪ್ಟ್ ಶಿಕ್ಷಕರಿಗೆ ಪ್ರೌಢಶಾಲೆಗೆ ಬಡ್ತಿ ನೀಡುವಂತೆ ಸೂಕ್ತ ನಿರ್ದೇಶನ ನೀಡಲಾಗಿದೆ.
ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅರ್ಹ ಸಂಗೀತ, ಚಿತ್ರಕಲೆ ಹಾಗೂ ಕ್ರಾನ್ಸ್ ಶಿಕ್ಷಕರಿಗೆ ಪ್ರೌಢಶಾಲೆಗೆ ಬಡ್ತಿ ನೀಡುವಂತೆ ಸೂಕ್ತ ನಿರ್ದೇಶನ ನೀಡುವ ಬಗ್ಗೆ ಅಧ್ಯಕ್ಷರು, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಕೋರಿದ್ದಾರೆ.
ಕರ್ನಾಟಕ ರಾಜ್ಯಾದ್ಯಂತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅರ್ಹ ಸಂಗೀತ, ಚಿತ್ರಕಲಾ, ಮತ್ತು ಕ್ರಾಪ್ಟ್ ಶಿಕ್ಷಕರಿಗೆ ಸರ್ಕಾರದ ನಿಯಮಾನುಸಾರ ಪ್ರೌಢಶಾಲೆಗೆ ಬಡ್ತಿ ನೀಡಲು ಸೂಕ್ತ ನಿರ್ದೇಶನ ನೀಡಲು ಅವರು ಕೋರಿರುತ್ತಾರೆ.
ಮುಂದುವರೆದು, ಉಲ್ಲೇಖ(2)ರ ಕರ್ನಾಟಕ ರಾಜ್ಯ ಪತ್ರದ ಅಧಿಸೂಚನೆ ಸಂಖ್ಯೆ: ಇಪಿ 121 ಎಲ್‌ಬಿಪಿ 2025, ಬೆಂಗಳೂರು, ದಿನಾಂಕ : 27-03-2025 ರನ್ವಯ ಈ ಕೆಳಕಂಡ ಅಂಶಗಳನ್ನು ಪರಿಶೀಲಿಸಿ ನಿಯಮಾನುಸಾರ ಬಡ್ತಿ, ನೀಡಲು ಅಗತ್ಯ ಕ್ರಮ ವಹಿಸಲು ಸೂಚಿಸಿದೆ.
1 ರಿಂದ 5 ನೇ ತರಗತಿಗಳಿಗೆ ಪ್ರಾಥಮಿಕ ಶಾಲಾ ಸಹಾಯಕ ಮಾಸ್ಟರ್/ಮಿಸ್ಟ್ರೆಸ್ ವೃಂದದಿಂದ 6 ರಿಂದ 8 ನೇ ತರಗತಿಗಳಿಗೆ ಪ್ರಾಥಮಿಕ ಶಾಲಾ ಪದವೀಧರ ಸಹಾಯಕ ಮಾಸ್ಟರ್/ಮಿಸ್ಟ್ರೆಸ್, ಸರ್ಕಾರಿ ಪ್ರೌಢಶಾಲೆಗಳಲ್ಲಿ ಕ್ರಾಫ್ಟ್ ಟೀಚರ್ ಗ್ರೇಡ್ 1 ಸಂಗೀತ ಶಿಕ್ಷಕರು, ಚಿತ್ರಕಲಾ ಶಿಕ್ಷಕರು ಮತ್ತು ನರ್ಸರಿ ಶಾಲಾ ಶಿಕ್ಷಕರ ವೃಂದದ ಬಡ್ತಿಗಳ ಮೂಲಕ ಶೇಕಡಾ ಐವತ್ತು.
ಪರಂತು, ಕ್ರಾಫ್ಟ್ ಟೀಚರ್ ಗ್ರೇಡ್ 1, ನರ್ಸರಿ ಶಾಲಾ ಶಿಕ್ಷಕರ ವೃಂದಗಳಲ್ಲಿ ಸಾಕಷ್ಟು ಸಂಖ್ಯೆಯ ಶಿಕ್ಷಕರ ಶೇಕಡಾವಾರು ಅನುಪಾತ, ಡ್ರಾಯಿಂಗ್ ಶಿಕ್ಷಕರು ಬಡ್ತಿಗೆ ಲಭ್ಯವಿಲ್ಲದಿದ್ದರೆ, ಅಂತಹ ಸಂಖ್ಯೆಯ ಹುದ್ದೆಗಳನ್ನು 1 ರಿಂದ 5 ನೇ ತರಗತಿಗಳಿಗೆ ಪ್ರಾಥಮಿಕ ಶಾಲಾ ಸಹಾಯಕ ಮಾಸ್ಟರ್/ಮಿಸ್ಟ್ರೆಸ್ ಮತ್ತು 6 ರಿಂದ 8 ನೇ ತರಗತಿಗಳಿಗೆ ಪ್ರಾಥಮಿಕ ಶಾಲಾ ಪದವೀಧರ ಸಹಾಯಕ ಮಾಸ್ಟರ್/ಮಿಸ್ಟ್ರೆಸ್ ವೃಂದಗಳಿಂದ ಸದರಿ ಅನುಪಾತದಲ್ಲಿ ಬಡ್ತಿ ನೀಡುವ ಮೂಲಕ ಭರ್ತಿ ಮಾಡಲಾಗುತ್ತದೆ.
1 ರಿಂದ 5 ನೇ ತರಗತಿಗಳಿಗೆ ಪ್ರಾಥಮಿಕ ಶಾಲಾ ಸಹಾಯಕ ಮಾಸ್ಟರ್/ಮಿಸ್ಟ್ರೆಸ್ ಮತ್ತು 6 ರಿಂದ 8 ನೇ ತರಗತಿಗಳಿಗೆ ಪ್ರಾಥಮಿಕ ಶಾಲಾ ಪದವೀಧರ ಸಹಾಯಕ ಮಾಸ್ಟರ್/ಮಿಸ್ಟ್ರೆಸ್ ವೃಂದಗಳಿಂದ ಸಾಕಷ್ಟು ಸಂಖ್ಯೆಯ ಶಿಕ್ಷಕರ ಶೇಕಡಾವಾರು ಅನುಪಾತವು ಬಡ್ತಿಗೆ ಲಭ್ಯವಿಲ್ಲದಿದ್ದರೆ, ಅಂತಹ ಹುದ್ದೆಗಳನ್ನು ನೇರ ನೇಮಕಾತಿಯ ಮೂಲಕ ಭರ್ತಿ ಮಾಡಲಾಗುತ್ತದೆ ಎಂದು ಉರ್ದು ಮತ್ತು ಇತರೆ ಅಲ್ಪಸಂಖ್ಯಾತ ಭಾಷಾ ಶಾಲೆಗಳ ನಿರ್ದೇಶನಾಲಯ, ಆಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.


