HomeEntertainmentಅಕ್ಷಯ್ ಖನ್ನಾ ಜೊತೆ ಫ್ಲರ್ಟ್ ಮಾಡಿದ್ದ ಕಂಗನಾ ರಣಾವತ್; ನಟನ ಸಕ್ಸಸ್ ನಡುವೆಯೇ ವೈರಲ್ ಆಗುತ್ತಿದೆ...

ಅಕ್ಷಯ್ ಖನ್ನಾ ಜೊತೆ ಫ್ಲರ್ಟ್ ಮಾಡಿದ್ದ ಕಂಗನಾ ರಣಾವತ್; ನಟನ ಸಕ್ಸಸ್ ನಡುವೆಯೇ ವೈರಲ್ ಆಗುತ್ತಿದೆ ಕಿರಿಕ್ ಸುಂದರಿಯ ಹಳೆಯ ವೀಡಿಯೋ

ಬಾಲಿವುಡ್‌ನ ವಿವಾದಾತ್ಮಕ ಮತ್ತು ನೇರನುಡಿಯ ನಟಿ ಕಂಗನಾ ರಣಾವತ್ ಹಾಗೂ ನಟ ಅಕ್ಷಯ್ ಖನ್ನಾ ನಡುವಿನ ಹಳೆಯ ಘಟನೆಯೊಂದರ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಕಂಗನಾ ರಣಾವತ್ ನೀಡಿದ ಹೇಳಿಕೆಯೊಂದು ಇದೀಗ ಸಿನಿಮಾ ಪ್ರೇಮಿಗಳ ನಡುವೆ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.

ಹಲವು ವರ್ಷಗಳ ಹಿಂದೆ ಕರಣ್ ಜೋಹರ್ ಅವರ ಚಾಟ್ ಶೋನಲ್ಲಿ ಭಾಗವಹಿಸಿದ್ದ ಕಂಗನಾ, ಶೂಟಿಂಗ್ ಸೆಟ್‌ನಲ್ಲಿ ಅಕ್ಷಯ್ ಖನ್ನಾ ಅವರ ವ್ಯಕ್ತಿತ್ವ ಹೇಗಿರುತ್ತದೆ ಎಂಬುದನ್ನು ಹಂಚಿಕೊಂಡಿದ್ದರು. ‘ನೋ ಪ್ರಾಬ್ಲಂ’ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಅಕ್ಷಯ್ ಖನ್ನಾ ಅವರ ಗಮನ ಸೆಳೆಯಲು ಕಂಗನಾ ಸಾಕಷ್ಟು ಪ್ರಯತ್ನ ನಡೆಸಿದ್ದರಂತೆ. ಈ ಬಗ್ಗೆ ಮಾತನಾಡುತ್ತಾ, “ನಾನು ಅಕ್ಷಯ್ ಖನ್ನಾ ಜೊತೆ ಮಾತನಾಡಲು ಪ್ರಯತ್ನಿಸಿದೆ, ಅಷ್ಟೇ ಅಲ್ಲದೆ ಅವರೊಂದಿಗೆ ಫ್ಲರ್ಟ್ ಮಾಡಲು ಕೂಡ ನೋಡಿದೆ. ಆದರೆ ಅವರು ಮಾತ್ರ ಅದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲೇ ಇಲ್ಲ. ಅವರು ಯಾರ ಜೊತೆಯೂ ಮಾತನಾಡುವುದಿಲ್ಲ, ಸದಾ ಮೌನವಾಗಿರುತ್ತಾರೆ,” ಎಂದು ಕಂಗನಾ ಬಹಿರಂಗಪಡಿಸಿದ್ದರು.

ಕಂಗನಾ ಅವರ ಈ ಮಾತುಗಳನ್ನು ಕೇಳಿ ಕಾರ್ಯಕ್ರಮದಲ್ಲಿದ್ದ ಸಂಜಯ್ ದತ್ ಮತ್ತು ಕರಣ್ ಜೋಹರ್ ಕೂಡ ಅಚ್ಚರಿ ವ್ಯಕ್ತಪಡಿಸಿದ್ದರು. ಅಕ್ಷಯ್ ಖನ್ನಾ ಬಾಲಿವುಡ್‌ನ ಪ್ರತಿಭಾವಂತ ನಟರಾಗಿದ್ದರೂ, ಅವರು ಸೆಟ್‌ನಲ್ಲಿ ತುಂಬಾ ರಿಸರ್ವ್ಡ್ ಆಗಿರುತ್ತಾರೆ ಮತ್ತು ಅನಗತ್ಯ ಮಾತುಗಳಿಗೆ ಕಿವಿಗೊಡುವುದಿಲ್ಲ ಎಂಬುದು ಈ ಮೂಲಕ ಮತ್ತೊಮ್ಮೆ ಸಾಬೀತಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು 2025ನೇ ವರ್ಷ ಅಕ್ಷಯ್ ಖನ್ನಾ ಅವರ ಪಾಲಿಗೆ ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂತಹ ವರ್ಷವಾಗಿದೆ. ಅವರು ನಟಿಸಿದ ‘ಛಾವಾ’ ಮತ್ತು ‘ಧುರಂಧರ್’ ಚಿತ್ರಗಳು ಜಾಗತಿಕವಾಗಿ 2000 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿವೆ. ಶಾರುಖ್ ಖಾನ್ ಮತ್ತು ಅಮೀರ್ ಖಾನ್ ನಂತರ ಒಂದೇ ವರ್ಷದಲ್ಲಿ ಇಷ್ಟು ದೊಡ್ಡ ಮೊತ್ತದ ಗಳಿಕೆ ತಂದುಕೊಟ್ಟ ಎರಡನೇ ಭಾರತೀಯ ನಟ ಎಂಬ ಹೆಗ್ಗಳಿಕೆಗೆ ಅಕ್ಷಯ್ ಖನ್ನಾ ಪಾತ್ರರಾಗಿದ್ದಾರೆ. ಮೂರು ದಶಕಗಳ ತಮ್ಮ ಸಿನಿ ಪಯಣದಲ್ಲಿ ಅಕ್ಷಯ್ ಖನ್ನಾ ಇದೀಗ ತಮ್ಮ ನಟನೆ ಮತ್ತು ಸ್ಟಾರ್‌ಡಮ್ ಮೂಲಕ ಬಾಲಿವುಡ್‌ನ ಅಸಲಿ ಸುಲ್ತಾನ್ ಎನಿಸಿಕೊಂಡಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular