HomeLatest Newsಪೊಲೀಸ್ ಸ್ಯಾಲರಿ ಪ್ಯಾಕೇಜ್ ಯೋಜನೆಯಡಿ ಮೃತರ ಕುಟುಂಬದವರಿಗೆ 70 ಲಕ್ಷ ರೂ. ಚೆಕ್ ಹಸ್ತಾಂತರ

ಪೊಲೀಸ್ ಸ್ಯಾಲರಿ ಪ್ಯಾಕೇಜ್ ಯೋಜನೆಯಡಿ ಮೃತರ ಕುಟುಂಬದವರಿಗೆ 70 ಲಕ್ಷ ರೂ. ಚೆಕ್ ಹಸ್ತಾಂತರ

ಧಾರವಾಡ: ಡಿ.ಎ.ಆರ್. ಪೊಲೀಸ್ ಸಿಬ್ಬಂದಿ ದಿ. ಯಲ್ಲಪ್ಪ ಅವರ ಕುಟುಂಬದವರಿಗೆ ಪೊಲೀಸ್ ಸ್ಯಾಲರಿ ಪ್ಯಾಕೇಜ್ ಯೋಜನೆಯ ಅಡಿಯಲ್ಲಿ ಮೃತ ಕುಟುಂಬದವರಿಗೆ ರೂ. 70 ಲಕ್ಷ ಮೊತ್ತ ಚೆಕ್ಕ ಹಸ್ತಾಂತರ ಮಾಡಲಾಗಿದೆ.

ಜೂನ್ 21, 2025 ರಂದು ರಾತ್ರಿ ಹುಬ್ಬಳ್ಳಿ-ಧಾರವಾಡ ಬೈಪಾಸ ರಸ್ತೆ ಮೇಲೆ ಇಟಿಗಟ್ಟಿ ಮೈಕ್ರೋಫಿನಿಷ್ ಪ್ಯಾಕ್ಟರಿ ಹತ್ತೀರ ಡಿ.ಎ.ಆರ್. ಪೊಲೀಸ್ ಸಿಬ್ಬಂದಿ ಯಲ್ಲಪ್ಪ ಕುಂಬಾರ(52) ಇವರು ಕರ್ತವ್ಯದ ನಿಮಿತ್ಯ ಧಾರವಾಡಕ್ಕೆ ತಮ್ಮ ಮೋಟಾರ್ ಸೈಕಲ್ ಮೇಲೆ ಹುಬ್ಬಳ್ಳಿ ಕಡೆಯಿಂದ ಧಾರವಾಡ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದರು.

ಫೆಬ್ರವರಿ 6 ರಂದು ಧಾರವಾಡ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಪರೇಡ್ ನಲ್ಲಿ ದಿ. ಯಲ್ಲಪ್ಪ ಅವರ ಕುಟುಂಬದವರಿಗೆ ಬ್ಯಾಂಕ್ ಆಪ್ ಬರೋಡಾ, ನಾರಾಯಣಪುರ ರಸ್ತೆ, ಧಾರವಾಡ ಅವರ ವತಿಯಿಂದ ಪೊಲೀಸ್ ಸ್ಯಾಲರಿ ಪ್ಯಾಕೇಜ್ ಯೋಜನೆಯ ಅಡಿಯಲ್ಲಿ ಮೃತ ಕುಟುಂಬದವರಿಗೆ ರೂ. 70,00,000 ಗಳ ಚೆಕ್ ಅನ್ನು ಹಸ್ತಾಂತರಿಸಲಾಯಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಸಂದರ್ಭದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಏರ್ ಕಮಾಂಡರ್(ನಿವೃತ್ತ). ತರುಣ್ ಕುಮಾರ್ ಸಿನ್ಹಾ ಡಿಜಿಎಂ(ರಕ್ಷಣಾ ಬ್ಯಾಂಕಿಂಗ್ ಮುಖ್ಯಸ್ಥರು), ಬ್ಯಾಂಕ್ ಆಫ್ ಬರೋಡಾ., ಅಮರೇಶ್ ಗೌಡ, ಎಜಿಎಂ ಮತ್ತು ಡಿಆರ್‍ಎಂ ಹುಬ್ಬಳ್ಳಿ, ಚಿನ್ನರಾವ್, ಮುಖ್ಯ ವ್ಯವಸ್ಥಾಪಕರು ಮತ್ತು ಪ್ರಾದೇಶಿಕ ವ್ಯವಹಾರ ಅಭಿವೃದ್ಧಿ ವ್ಯವಸ್ಥಾಪಕರು, ಹುಬ್ಬಳ್ಳಿ, ಮಲ್ಲಿಕಾರ್ಜುನ ಗೌಡ ಗೌಡರ, ಮುಖ್ಯ ವ್ಯವಸ್ಥಾಪಕರು ಮತ್ತು ಶಾಖಾ ಮುಖ್ಯಸ್ಥರು, ಧಾರವಾಡ ಮುಖ್ಯ ಶಾಖೆ, ಸುಶೀಲ್ ಕುಮಾರ್ ತ್ರಿಪಾಠಿ, ಮುಖ್ಯ ವ್ಯವಸ್ಥಾಪಕರು ಮತ್ತು ಶಾಖಾ ಮುಖ್ಯಸ್ಥರು, ಹುಬ್ಬಳ್ಳಿ ಎಂಎಸ್‍ಎಂಇ ಶಾಖೆ., ವಿಕ್ರಮ್ ಎಂ, ಹಿರಿಯ ವ್ಯವಸ್ಥಾಪಕರು ಮತ್ತು ಶಾಖಾ ಮುಖ್ಯಸ್ಥರು, ಧಾರವಾಡ ಮಾಳಮಡ್ಡಿ ಶಾಖೆ, ಡಿ.ಎಸ್. ಧನಗರ್ ಡಿ.ಎ.ಆರ್. ಡಿ.ಎಸ್.ಪಿ ಧಾರವಾಡ ಅವರು ಹಾಗೂ ಮತ್ತು ಜಿಲ್ಲಾ ಮಟ್ಟದ ಪೆÇಲೀಸ್ ಅಧಿಕಾರಿಯವರು ಹಾಜರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular