ಧಾರವಾಡ: ಡಿ.ಎ.ಆರ್. ಪೊಲೀಸ್ ಸಿಬ್ಬಂದಿ ದಿ. ಯಲ್ಲಪ್ಪ ಅವರ ಕುಟುಂಬದವರಿಗೆ ಪೊಲೀಸ್ ಸ್ಯಾಲರಿ ಪ್ಯಾಕೇಜ್ ಯೋಜನೆಯ ಅಡಿಯಲ್ಲಿ ಮೃತ ಕುಟುಂಬದವರಿಗೆ ರೂ. 70 ಲಕ್ಷ ಮೊತ್ತ ಚೆಕ್ಕ ಹಸ್ತಾಂತರ ಮಾಡಲಾಗಿದೆ.
ಜೂನ್ 21, 2025 ರಂದು ರಾತ್ರಿ ಹುಬ್ಬಳ್ಳಿ-ಧಾರವಾಡ ಬೈಪಾಸ ರಸ್ತೆ ಮೇಲೆ ಇಟಿಗಟ್ಟಿ ಮೈಕ್ರೋಫಿನಿಷ್ ಪ್ಯಾಕ್ಟರಿ ಹತ್ತೀರ ಡಿ.ಎ.ಆರ್. ಪೊಲೀಸ್ ಸಿಬ್ಬಂದಿ ಯಲ್ಲಪ್ಪ ಕುಂಬಾರ(52) ಇವರು ಕರ್ತವ್ಯದ ನಿಮಿತ್ಯ ಧಾರವಾಡಕ್ಕೆ ತಮ್ಮ ಮೋಟಾರ್ ಸೈಕಲ್ ಮೇಲೆ ಹುಬ್ಬಳ್ಳಿ ಕಡೆಯಿಂದ ಧಾರವಾಡ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದಾಗ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದರು.
ಫೆಬ್ರವರಿ 6 ರಂದು ಧಾರವಾಡ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಪರೇಡ್ ನಲ್ಲಿ ದಿ. ಯಲ್ಲಪ್ಪ ಅವರ ಕುಟುಂಬದವರಿಗೆ ಬ್ಯಾಂಕ್ ಆಪ್ ಬರೋಡಾ, ನಾರಾಯಣಪುರ ರಸ್ತೆ, ಧಾರವಾಡ ಅವರ ವತಿಯಿಂದ ಪೊಲೀಸ್ ಸ್ಯಾಲರಿ ಪ್ಯಾಕೇಜ್ ಯೋಜನೆಯ ಅಡಿಯಲ್ಲಿ ಮೃತ ಕುಟುಂಬದವರಿಗೆ ರೂ. 70,00,000 ಗಳ ಚೆಕ್ ಅನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಏರ್ ಕಮಾಂಡರ್(ನಿವೃತ್ತ). ತರುಣ್ ಕುಮಾರ್ ಸಿನ್ಹಾ ಡಿಜಿಎಂ(ರಕ್ಷಣಾ ಬ್ಯಾಂಕಿಂಗ್ ಮುಖ್ಯಸ್ಥರು), ಬ್ಯಾಂಕ್ ಆಫ್ ಬರೋಡಾ., ಅಮರೇಶ್ ಗೌಡ, ಎಜಿಎಂ ಮತ್ತು ಡಿಆರ್ಎಂ ಹುಬ್ಬಳ್ಳಿ, ಚಿನ್ನರಾವ್, ಮುಖ್ಯ ವ್ಯವಸ್ಥಾಪಕರು ಮತ್ತು ಪ್ರಾದೇಶಿಕ ವ್ಯವಹಾರ ಅಭಿವೃದ್ಧಿ ವ್ಯವಸ್ಥಾಪಕರು, ಹುಬ್ಬಳ್ಳಿ, ಮಲ್ಲಿಕಾರ್ಜುನ ಗೌಡ ಗೌಡರ, ಮುಖ್ಯ ವ್ಯವಸ್ಥಾಪಕರು ಮತ್ತು ಶಾಖಾ ಮುಖ್ಯಸ್ಥರು, ಧಾರವಾಡ ಮುಖ್ಯ ಶಾಖೆ, ಸುಶೀಲ್ ಕುಮಾರ್ ತ್ರಿಪಾಠಿ, ಮುಖ್ಯ ವ್ಯವಸ್ಥಾಪಕರು ಮತ್ತು ಶಾಖಾ ಮುಖ್ಯಸ್ಥರು, ಹುಬ್ಬಳ್ಳಿ ಎಂಎಸ್ಎಂಇ ಶಾಖೆ., ವಿಕ್ರಮ್ ಎಂ, ಹಿರಿಯ ವ್ಯವಸ್ಥಾಪಕರು ಮತ್ತು ಶಾಖಾ ಮುಖ್ಯಸ್ಥರು, ಧಾರವಾಡ ಮಾಳಮಡ್ಡಿ ಶಾಖೆ, ಡಿ.ಎಸ್. ಧನಗರ್ ಡಿ.ಎ.ಆರ್. ಡಿ.ಎಸ್.ಪಿ ಧಾರವಾಡ ಅವರು ಹಾಗೂ ಮತ್ತು ಜಿಲ್ಲಾ ಮಟ್ಟದ ಪೆÇಲೀಸ್ ಅಧಿಕಾರಿಯವರು ಹಾಜರಿದ್ದರು.

