HomeLatest NewsT20 World Cup 2026: ಟೂರ್ನಿ ಆರಂಭದ ಸಮಯದಲ್ಲಿ ಆಸ್ಟ್ರೇಲಿಯಾಗೆ ಆಘಾತ; ಸ್ಟಾರ್ ಆಟಗಾರ ಔಟ್!

T20 World Cup 2026: ಟೂರ್ನಿ ಆರಂಭದ ಸಮಯದಲ್ಲಿ ಆಸ್ಟ್ರೇಲಿಯಾಗೆ ಆಘಾತ; ಸ್ಟಾರ್ ಆಟಗಾರ ಔಟ್!

ನಾಳೆ ( ಫೆಬ್ರವರಿ 7 ) ಶ್ರೀಲಂಕಾದ ಕೊಲಂಬೊದಲ್ಲಿ ನಡೆಯಲಿರುವ ಪಾಕಿಸ್ತಾನ ಹಾಗೂ ನೆದರ್ಲೆಂಡ್ಸ್ ತಂಡಗಳ ನಡುವಿನ ಪಂದ್ಯದ ಮೂಲಕ 2026ರ ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ ಆರಂಭವಾಗಲಿದೆ.

ಒಟ್ಟು 20 ದೇಶಗಳು ಈ ಬಾರಿ ಕಣಕ್ಕಿಳಿಯಲಿದ್ದು, ತಲಾ ಐದು ತಂಡಗಳಂತೆ ಒಟ್ಟು ನಾಲ್ಕು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಇನ್ನು ಎಲ್ಲ ತಂಡಗಳು ಟೂರ್ನಿಗಾಗಿ ಅಭ್ಯಾಸ ಪಂದ್ಯಗಳನ್ನಾಡಿ ಕೊನೆಯ ಹಂತದ ತಾಲೀಮು ನಡೆಸಿದ್ದು, ಟ್ರೋಫಿಗಾಗಿ ಸಿದ್ಧತೆ ನಡೆಸಿಕೊಳ್ಳುತ್ತಿವೆ.

ಟೂರ್ನಿ ಆರಂಭದ ದಿನ ಹತ್ತಿರ ಬರುತ್ತಿದ್ದಂತೆ ಹಲವು ತಂಡಗಳಲ್ಲಿ ಆಟಗಾರರ ಅಲಭ್ಯತೆ ಸಮಸ್ಯೆ ತಲೆದೋರಿದೆ. ಟೀಮ್ ಇಂಡಿಯಾದಲ್ಲೂ ಸಹ ಈ ಸಮಸ್ಯೆ ಕಂಡುಬಂದಿದ್ದು, ಗಾಯಕ್ಕೊಳಗಾದ ಬೌಲರ್ ಹರ್ಷಿತ್ ರಾಣಾ ಟೂರ್ನಿಯಿಂದ ಹೊರಬೀಳುವ ಸಾಧ್ಯತೆಗಳಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಾಗೆಯೇ ಕ್ರಿಕೆಟ್ ಇತಿಹಾಸದ ಅತ್ಯಂತ ಡೇಂಜರಸ್ ತಂಡ ಎಂದೇ ಖ್ಯಾತಿಯನ್ನು ಪಡೆದಿರುವ ಐಸಿಸಿ ಈವೆಂಟ್‌ಗಳ ಸರದಾರ ಆಸ್ಟ್ರೇಲಿಯಾಗೂ ಸಹ ಈ ಸಮಸ್ಯೆ ಕಾಡತೊಡಗಿದೆ. ಟೂರ್ನಿಗೆ ಪ್ರಕಟವಾಗಿದ್ದ ತಂಡದಿಂದ ಮೊದಲಿಗೆ ಪ್ಯಾಟ್ ಕಮಿನ್ಸ್ ಹೊರಬಿದ್ದಿದ್ದರು. ಇದೀಗ ನಾಳೆ ಟೂರ್ನಿ ಆರಂಭವಾಗಲಿದೆ ಎನ್ನುವ ಸಮಯಕ್ಕೆ ತಂಡದ ಸ್ಟಾರ್ ಬೌಲರ್ ಜೋಶ್ ಹೇಜಲ್‌ವುಡ್ ಗಾಯದ ಸಮಸ್ಯೆಯಿಂದ ಇನ್ನೂ ಚೇತರಿಸಿಕೊಳ್ಳದ ಕಾರಣ ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಈ ಬಗ್ಗೆ ಆಸ್ಟ್ರೇಲಿಯಾ ಕ್ರಿಕೆಟ್ ಆಯ್ಕೆ ಸಮಿತಿಯ ಮುಖ್ಯಸ್ಥ ಟೋನಿ ಮಾತನಾಡಿದ್ದು, ‘ನಾವು ಜೋಶ್ ಹೇಜಲ್‌ವುಡ್ ಪಂದ್ಯವನ್ನಾಡುವಷ್ಟು ಫಿಟ್ ಆಗಿ ಸೂಪರ್ 8 ಹಂತದ ಪಂದ್ಯಗಳಿಗೆ ವಾಪಸ್ ಆಗಲಿದ್ದಾರೆ ಎಂದು ಊಹಿಸಿದ್ದೆವು. ಆದರೆ ಇದೀಗ ಆತ ಚೇತರಿಸಿಕೊಳ್ಳಲು ಇನ್ನೂ ಸಮಯದ ಅಗತ್ಯವಿದೆ ಎಂಬ ವರದಿ ಬಂದಿದೆ. ಆದರೆ ನಾವು ಈಗಲೇ ಬದಲಿ ಆಟಗಾರನನ್ನು ನೇಮಿಸುವುದಿಲ್ಲ. ಗ್ರೂಪ್ ಹಂತದ ಪಂದ್ಯಗಳನ್ನಾಡಲು ಅಗತ್ಯವಿರುವ ಆಟಗಾರರು ತಂಡದಲ್ಲಿದ್ದು, ಬದಲಿ ಆಟಗಾರನ ಆಯ್ಕೆಯನ್ನು ಅಗತ್ಯ ಬರುವ ಸಮಯಕ್ಕೆ ಮಾಡಲಿದ್ದೇವೆ’ ಎಂದು ತಿಳಿಸಿದ್ದಾರೆ.

For Latest News Updates, Join Our Whatsapp Community🚩
Srinivasa A Kollegala
Srinivasa A Kollegala
Srinivasa A has over 6 years of experience in journalism. He has worked as a Social Media Executive at OneIndia, Sub-Editor at MyKhel and Filmibeat Kannada, and led the digital team at Andolana newspaper as Digital Head.
RELATED ARTICLES

Most Popular