HomeLatest NewsSHOCKING : ರೈಲ್ವೆ ಹಳಿ ಮೇಲೆ ಮರದ ದಿಮ್ಮಿಗೆ ಡಿಕ್ಕಿ ಹೊಡೆದ ರೈಲು : ಗಾಳಿಯಲ್ಲಿ...

SHOCKING : ರೈಲ್ವೆ ಹಳಿ ಮೇಲೆ ಮರದ ದಿಮ್ಮಿಗೆ ಡಿಕ್ಕಿ ಹೊಡೆದ ರೈಲು : ಗಾಳಿಯಲ್ಲಿ ಹಾರಿ ಬಿದ್ದ ಮಹಿಳೆ | WATCH VIDEO


ಬಿಹಾರ ಬಿಹಾರದ ಪಹಾರ್ಪುರ ರೈಲ್ವೆ ನಿಲ್ದಾಣದಲ್ಲಿ ನಡೆದ ಭೀಕರ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ವೇಗವಾಗಿ ಬಂದ ರೈಲು ಹಳಿಯ ಪಕ್ಕದಲ್ಲಿದ್ದ ಮರದ ದಿಮ್ಮಿಗಳಿಗೆ ಡಿಕ್ಕಿ ಹೊಡೆದಾಗ, ಅವು ಗಾಳಿಯಲ್ಲಿ ಹಾರಿಬಂದು ಹಳಿ ದಾಟುತ್ತಿದ್ದ ಮಹಿಳೆಗೆ ಬಲವಾಗಿ ಬಡಿದಿವೆ.

ವರದಿಗಳ ಪ್ರಕಾರ, ಪ್ಯಾಸೆಂಜರ್ ರೈಲೊಂದರಿಂದ ಅಕ್ರಮವಾಗಿ ಮರದ ದಿಮ್ಮಿಗಳನ್ನು ಸಾಗಿಸಿ ಹಳಿಗಳ ಮಧ್ಯೆ ಇಳಿಸಲಾಗಿತ್ತು. ಅದೇ ಸಮಯದಲ್ಲಿ ಮಹಿಳೆಯೊಬ್ಬರು ಹಳಿಗಳನ್ನು ದಾಟುತ್ತಿದ್ದರು. ದುರದೃಷ್ಟವಶಾತ್, ಎದುರು ದಿಕ್ಕಿನಿಂದ ವೇಗವಾಗಿ ಬಂದ ರೈಲು ಹಳಿಗಳ ನಡುವೆ ಇದ್ದ ಮರದ ದಿಮ್ಮಿಗಳಿಗೆ ಡಿಕ್ಕಿ ಹೊಡೆದಿದೆ. ಈ ರಭಸಕ್ಕೆ ಮರದ ತುಂಡುಗಳು ಚಿಮ್ಮಿ ಮಹಿಳೆಗೆ ಬಡಿದ ಪರಿಣಾಮ ಅವರು ತೀವ್ರವಾಗಿ ಗಾಯಗೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವಿಡಿಯೋ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಾಮಾಜಿಕ ಜಾಲತಾಣ ‘X’ ನಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಮಹಿಳೆ ಹಳಿಗಳನ್ನು ವೇಗವಾಗಿ ದಾಟಲು ಪ್ರಯತ್ನಿಸುವುದನ್ನು ಕಾಣಬಹುದು. ಅವರು ಇನ್ನೇನು ಹಳಿ ದಾಟಿ ಮುಗಿಸಬೇಕು ಎನ್ನುವಷ್ಟರಲ್ಲಿ ರೈಲು ಡಿಕ್ಕಿಯಾದ ಮರದ ತುಂಡು ಅವರಿಗೆ ಬಡಿದು ಅವರು ಗಾಳಿಯಲ್ಲಿ ಹಾರಿ ಬೀಳುತ್ತಾರೆ. ಈ ವಿಡಿಯೋವನ್ನು ರೈಲ್ವೆ ಸಚಿವಾಲಯಕ್ಕೆ ಟ್ಯಾಗ್ ಮಾಡಿರುವ ಬಳಕೆದಾರರು, ರೈಲ್ವೆ ಸುರಕ್ಷತಾ ನಿಯಮಗಳ ಉಲ್ಲಂಘನೆ ಮತ್ತು ಇಲಾಖೆಯ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಕಿಡಿಕಾರಿದ್ದಾರೆ.

ವೈರಲ್ ವೀಡಿಯೋಗೆ ನೆಟ್ಟಿಗರು ಏನಂದ್ರು..?

“ಹಳಿಗಳ ಮೇಲೆ ಮರ ಇಟ್ಟಿದ್ದು ತಪ್ಪು ಸರಿ, ಆದರೆ ರೈಲು ಬರುವಾಗ ಹಳಿ ದಾಟುತ್ತಿದ್ದ ಮಹಿಳೆಯದ್ದೂ ದೊಡ್ಡ ತಪ್ಪು. ಜನರಿಗೆ ತಮ್ಮ ಪ್ರಾಣದ ಬಗ್ಗೆ ಅರಿವೇ ಇಲ್ಲವೇ?” ಎಂದು ಒಬ್ಬರು ಪ್ರಶ್ನಿಸಿದ್ದಾರೆ.”ರೈಲ್ವೆ ಹಳಿಗಳ ನಡುವೆ ಮರದ ದಿಮ್ಮಿಗಳನ್ನು ಇಡಲು ಹೇಗೆ ಸಾಧ್ಯ? ಇದು ಸಂಪೂರ್ಣವಾಗಿ ರೈಲ್ವೆ ಇಲಾಖೆಯ ವೈಫಲ್ಯ” ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಅಕ್ರಮವಾಗಿ ಮರ ಸಾಗಾಟ ಮಾಡುತ್ತಿರುವುದು ಒಂದು ಅಪರಾಧವಾದರೆ, ಹಳಿಗಳ ಮೇಲೆ ಓಡಾಡುವುದು ಮತ್ತೊಂದು ತಪ್ಪು.ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.

View this post on Instagram

A post shared by Truth On Track (@truth_on_track)

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular