HomeLatest Newsಸಾಲ ವಸೂಲಾತಿ ದೌರ್ಜನ್ಯಕ್ಕೆ 'RBI 'ಬ್ರೇಕ್ : ವಂಚನೆಗೊಳಗಾದವರಿಗೆ 25,000 ವರೆಗೆ ಪರಿಹಾರ !

ಸಾಲ ವಸೂಲಾತಿ ದೌರ್ಜನ್ಯಕ್ಕೆ ‘RBI ‘ಬ್ರೇಕ್ : ವಂಚನೆಗೊಳಗಾದವರಿಗೆ 25,000 ವರೆಗೆ ಪರಿಹಾರ !

ನವದೆಹಲಿ  : ದೇಶದಲ್ಲಿ ವೇಗವಾಗಿ ಬೆಳೆಯುತ್ತಿರುವ ಆನ್’ಲೈನ್  ಬ್ಯಾಂಕಿಂಗ್ ಮತ್ತು ಡಿಜಿಟಲ್ ವಹಿವಾಟಿನ ಯುಗದಲ್ಲಿ ಗ್ರಾಹಕರ ಹಿತಾಸಕ್ತಿ ಕಾಪಾಡುವುದು ಬಹಳ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಹತ್ವದ ಹೆಜ್ಜೆಗಳನ್ನು ಇಡಲು ಸಜ್ಜಾಗಿದೆ. ಹಣಕಾಸು ನೀತಿ (Monetary Policy) ಪ್ರಕಟಿಸುವ ಸಂದರ್ಭದಲ್ಲಿ ಆರ್ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಮೂರು ದೊಡ್ಡ ಘೋಷಣೆಗಳನ್ನು ಮಾಡಿದ್ದಾರೆ.

ಹಣಕಾಸು ಉತ್ಪನ್ನಗಳ ತಪ್ಪು ಮಾರಾಟ (Mis-selling), ಸಾಲ ವಸೂಲಾತಿಗೆ ಸಂಬಂಧಿಸಿದ ದೂರುಗಳು ಮತ್ತು ಅನಧಿಕೃತ ಡಿಜಿಟಲ್ ವಹಿವಾಟುಗಳ ವಿರುದ್ಧ ಕಟ್ಟುನಿಟ್ಟಿನ ನಿಯಮಗಳನ್ನು ತರಲು RBI ಪ್ರಸ್ತಾಪಿಸಿದೆ.

RBI ನ 3 ಪ್ರಮುಖ ಘೋಷಣೆಗಳು:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

1.            ತಪ್ಪು ಮಾರಾಟಕ್ಕೆ (Mis-selling) ಕಡಿವಾಣ: ಮೊದಲ ಕರಡು ಮಾರ್ಗಸೂಚಿಯು ಅನುಚಿತ ಮಾರಾಟ ಪದ್ಧತಿಗಳಿಗೆ ಸಂಬಂಧಿಸಿದೆ. ಬ್ಯಾಂಕ್ಗಳು ಅಥವಾ ಹಣಕಾಸು ಸಂಸ್ಥೆಗಳು ಗ್ರಾಹಕರಿಗೆ ಯಾವುದೇ ಸಾಲ, ವಿಮೆ ಅಥವಾ ಹೂಡಿಕೆಯ ಬಗ್ಗೆ ತಪ್ಪು ಮಾಹಿತಿ ನೀಡಿ ಅಥವಾ ಬಲವಂತವಾಗಿ ಮಾರಾಟ ಮಾಡಿದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.

2.            ಸಾಲ ವಸೂಲಾತಿ ಮತ್ತು ಏಜೆಂಟ್ಗಳ ನಿಯಂತ್ರಣ: ಎರಡನೇ ಕರಡು ಸಾಲ ವಸೂಲಾತಿ ಪ್ರಕ್ರಿಯೆ ಮತ್ತು ರಿಕವರಿ ಏಜೆಂಟ್ಗಳ ಪಾತ್ರದ ಮೇಲೆ ನಿಗಾ ಇಡಲಿದೆ. ಸಾಲಗಾರರನ್ನು ಬೆದರಿಸುವುದು ಅಥವಾ ಮಾನಸಿಕವಾಗಿ ಪೀಡಿಸುವುದನ್ನು ತಡೆಯಲು ಏಕರೂಪದ ನಿಯಮಗಳನ್ನು ತರಲಾಗುವುದು.

3.            ಅನಧಿಕೃತ ವಹಿವಾಟಿಗೆ ಪರಿಹಾರ: ಮೂರನೇ ಮತ್ತು ಅತ್ಯಂತ ಪ್ರಮುಖ ಪ್ರಸ್ತಾವನೆಯೆಂದರೆ, ಸಣ್ಣ ಮೌಲ್ಯದ ವಂಚನೆಯ ವಹಿವಾಟುಗಳಲ್ಲಿ (Small value fraud) ಗ್ರಾಹಕರಿಗೆ ನಷ್ಟವಾದರೆ, ಅವರಿಗೆ ಗರಿಷ್ಠ ₹25,000 ವರೆಗೆ ಪರಿಹಾರ ನೀಡಲು ಪ್ರತ್ಯೇಕ ಚೌಕಟ್ಟನ್ನು ಸಿದ್ಧಪಡಿಸಲಾಗುತ್ತಿದೆ.

ಸಾಲ ವಸೂಲಾತಿ ನಿಯಮಗಳು ಇನ್ನು ಮುಂದೆ ಕಠಿಣ

ದೇಶಾದ್ಯಂತ ಸಾಲ ವಸೂಲಾತಿಗಾಗಿ ಏಜೆಂಟ್ಗಳು ಬಳಸುವ ಅಮಾನವೀಯ ವಿಧಾನಗಳ ಬಗ್ಗೆ ಸತತ ದೂರುಗಳು ಕೇಳಿಬರುತ್ತಿದ್ದವು. ಇದಕ್ಕೆ ಪ್ರತಿಕ್ರಿಯಿಸಿರುವ ಆರ್ಬಿಐ, “ಸಾಲಗಾರರನ್ನು ಯಾವುದೇ ಪರಿಸ್ಥಿತಿಯಲ್ಲೂ ಹೆದರಿಸುವುದು, ಬೆದರಿಕೆ ಹಾಕುವುದು ಅಥವಾ ಮಾನಸಿಕ ಒತ್ತಡ ಹೇರುವುದು ಸ್ವೀಕಾರಾರ್ಹವಲ್ಲ” ಎಂದು ಸ್ಪಷ್ಟಪಡಿಸಿದೆ. ಈ ಹೊಸ ಮಾರ್ಗಸೂಚಿಗಳು ಜಾರಿಗೆ ಬಂದ ನಂತರ, ಗ್ರಾಹಕರ ವರ್ತನೆ ಮತ್ತು ಏಜೆಂಟ್ಗಳ ನೇಮಕಾತಿಯಲ್ಲಿ ಬ್ಯಾಂಕ್ಗಳ ಜವಾಬ್ದಾರಿ ಮತ್ತು ಹೊಣೆಗಾರಿಕೆ ಹೆಚ್ಚಾಗಲಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular