HomeLatest News50 ಸಾವಿರ ಬಾಡಿಗೆ ಕಟ್ಟಿದ್ರೂ ಈಜುಕೊಳ ಉಪಯೋಗಿಸಲು ಟೈಮ್ ಇಲ್ಲ ಬೆಂಗಳೂರು ಐಟಿ ಉದ್ಯೋಗಿಯ ಲೈಫ್‌...

50 ಸಾವಿರ ಬಾಡಿಗೆ ಕಟ್ಟಿದ್ರೂ ಈಜುಕೊಳ ಉಪಯೋಗಿಸಲು ಟೈಮ್ ಇಲ್ಲ ಬೆಂಗಳೂರು ಐಟಿ ಉದ್ಯೋಗಿಯ ಲೈಫ್‌ ಸ್ಟೋರಿ ಈಗ ಫುಲ್ ವೈರಲ್

ಸಿಲಿಕಾನ್ ಸಿಟಿಯಲ್ಲಿ ಲೆವೆಲ್ ತೋರಿಸೋಕೆ ಒಂದು ಐಷಾರಾಮಿ ಫ್ಲ್ಯಾಟ್ ಇದ್ರೆ ಸಾಕು ಅನ್ಕೋತೀವಿ. ಆದ್ರೆ, ಸ್ವಿಮ್ಮಿಂಗ್ ಪೂಲ್, ಹೈ-ಟೆಕ್ ಜಿಮ್ ಇರೋ ಮನೆಗೆ 50 ಸಾವಿರ ಬಾಡಿಗೆ ಸುರಿದ್ರೂ ಒಂದು ದಿನ ಈಜೋಕೆ ಪುರುಸೊತ್ತಿಲ್ಲ ಅಂದ್ರೆ ಅದಕ್ಕಿಂತ ವ್ಯಂಗ್ಯ ಬೇಕಾ? ಬೆಂಗಳೂರಿನ ಐಟಿ ಉದ್ಯೋಗಿ ಶುಭಂ ಲೋಂಧೆ ಹಂಚಿಕೊಂಡಿರೋ ಈ ವೀಡಿಯೋ ಈಗ ಇಡೀ ನಗರದ ನಿದ್ದೆಗೆಡಿಸಿದೆ ಕೇಳೋಕೆ ಫುಲ್ ಹೈ-ಫೈ ಅನ್ಸಿದ್ರೂ ಅನುಭವಿಸೋಕೆ ಟೈಮ್ ಇಲ್ಲದ ಈ ಬೆಂಗಳೂರು ಲೈಫ್ ನಿಜಕ್ಕೂ ಗೋಲ್ಡನ್ ಕೇಜ್ (ಚಿನ್ನದ ಪಂಜರ) ಆಗಿದೆಯಾ ಅನ್ನೋ ಚರ್ಚೆ ಈಗ ಶುರುವಾಗಿದೆ

ಸೌಲಭ್ಯಗಳಿದ್ದರೂ ಸಮಯವಿಲ್ಲ

ಇನ್ಸ್ಟಾಗ್ರಾಮ್‌ನಲ್ಲಿ ವೀಡಿಯೋ ಹಂಚಿಕೊಂಡಿರುವ ನಿವಾಸಿಯೊಬ್ಬರು ತಾವು ವಾಸಿಸುವ ಅಪಾರ್ಟ್‌ಮೆಂಟ್‌ಗೆ ಪ್ರತಿ ತಿಂಗಳು ₹50,000 ಬಾಡಿಗೆ ಪಾವತಿಸುತ್ತಿದ್ದಾರೆ. ಅಲ್ಲಿ ಈಜುಕೊಳದಿಂದ ಹಿಡಿದು ಜಿಮ್‌ವರೆಗೆ ಎಲ್ಲಾ ಸೌಲಭ್ಯಗಳಿವೆ. ಆದರೆ ಆದರೆ, ಅವರ ಕೆಲಸದ ಒತ್ತಡ ಎಷ್ಟು ಹೆಚ್ಚಿದೆಯೆಂದರೆ, ಇವುಗಳನ್ನು ಬಳಸಿಕೊಳ್ಳಲು ಅವರ ಬಳಿ ಸಮಯವೇ ಇಲ್ಲವಂತೆ,ಜಿಮ್ ಇದೆ, ಪೂಲ್ ಇದೆ ಆದ್ರೆ ನನ್ನ ಹತ್ರ ಸಮಯ ಇಲ್ಲ (ಬಸ್ ಮೇರೆ ಪಾಸ್ ಟೈಮ್ ನಹಿ ಹೈ) ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಐಟಿ ಲೈಫ್ ಅಂದ್ರೆ ಕೇವಲ ಇಲಿ ಓಟವೇ (Rat Race)?

ಅವರು ಹೇಳುವ ಪ್ರಕಾರ, ಇದು ಕೇವಲ ಅವರೊಬ್ಬರ ಸಮಸ್ಯೆಯಲ್ಲ. ಅವರ ಅಪಾರ್ಟ್‌ಮೆಂಟ್‌ನ ಬಹುತೇಕ ನಿವಾಸಿಗಳ ಗೋಳು ಇದೇ ಆಗಿದೆ.

ಹಗಲಿಡೀ ಆಫೀಸ್ ಕೆಲಸ, ವಾರಾಂತ್ಯದಲ್ಲಿ ಸುಧಾರಿಸಿಕೊಳ್ಳಲು ವಿಶ್ರಾಂತಿ ಹೀಗಾಗಿ ಲಕ್ಷಾಂತರ ರೂಪಾಯಿ ಕೊಟ್ಟು ಪಡೆದ ಸೌಲಭ್ಯಗಳು ಬಿಕೋ ಎನ್ನುತ್ತಿವೆ.

ನಾವು ಎಷ್ಟೇ ಹಣ ಸಂಪಾದಿಸಿದರೂ, ಕೊನೆಗೆ ಸಮಯ ಮತ್ತು ಶಾಂತಿ ಸಿಗದ ಈ ಜೀವನ ಒಂದು Rat Race ನಂತೆ ಭಾಸವಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

https://www.instagram.com/reel/DTC9NzTj47T/?utm_source=ig_web_copy_link

4 ಲಕ್ಷ ವೀಕ್ಷಣೆ: ನೆಟ್ಟಿಗರ ರಿಯಾಕ್ಷನ್ ಹೇಗಿದೆ?

ಜನವರಿ 4 ರಂದು ಪೋಸ್ಟ್ ಆದ ಈ ವೀಡಿಯೋ ಈಗಾಗಲೇ 4 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. ನೆಟ್ಟಿಗರು ಇದಕ್ಕೆ ತರಹೇವಾರಿ ಪ್ರತಿಕ್ರಿಯೆ ನೀಡಿದ್ದಾರೆ:

ನೀವು ಹೇಳೋದು ನೂರಕ್ಕೆ ನೂರು ಸತ್ಯ ನಾನು ಮಲ್ಬೆರಿ ಟವರ್‌ನಲ್ಲಿ ₹74,000 ಬಾಡಿಗೆ ಸುರಿಯುತ್ತಿದ್ದೇನೆ. ನಿಮಗಂತೂ ಒಳ್ಳೆ ಡೀಲ್ ಸಿಕ್ಕಿದೆ ಬಿಡಿ” ಅಂತ ಒಬ್ಬರು ಸಿಲಿಕಾನ್ ಸಿಟಿಯ ಬೆಲೆ ಏರಿಕೆಯ ಬಗ್ಗೆ ವ್ಯಂಗ್ಯವಾಡಿದ್ದಾರೆ

ಈ ಸ್ವಿಮ್ಮಿಂಗ್ ಪೂಲ್, ಜಿಮ್ ಅನ್ನೋದೆಲ್ಲಾ ದೊಡ್ಡ ಮೋಸ (Scam) ಇವುಗಳ ಬದಲು ಆರಾಮವಾಗಿರೋ ವಿಶಾಲವಾದ ಮನೆ ನೋಡ್ಕೊಳ್ಳೋದು ಬೆಸ್ಟ್ ಅಂತ ಒಬ್ಬರು ರಿಯಲ್ ಎಸ್ಟೇಟ್ ದಂಧೆಯನ್ನೇ ಟೀಕಿಸಿದ್ದಾರೆ

ಅಯ್ಯೋ ಸಮಯ ಎಲ್ಲರಿಗೂ ಇರುತ್ತೆ ಸಾಹೇಬ್ರೇ ನಾವು ಅದನ್ನ ಹೇಗೆ ಬಳಸಿಕೊಳ್ತೀವಿ ಅನ್ನೋದು ಮುಖ್ಯ ಅಷ್ಟೇ ಅಂತ ಇನ್ನು ಕೆಲವರು ಉದ್ಯೋಗಿಗೆ ಪ್ರಿಯಾರಿಟಿ ಪಾಠ ಮಾಡಿದ್ದಾರೆ

ಇಲ್ಲಿ ಇಷ್ಟೊಂದು ಕಷ್ಟ ಪಡೋದಕ್ಕಿಂತ ವಿದೇಶಕ್ಕೆ ಹೋಗಿ ಸೆಟಲ್ ಆಗಿಬಿಡಿ. ಅಲ್ಲಿ ಕೆಲಸಕ್ಕೂ ಬೆಲೆ ಇರುತ್ತೆ, ವೈಯಕ್ತಿಕ ಜೀವನಕ್ಕೂ ನೆಮ್ಮದಿ ಇರುತ್ತೆ ಅಂತ ಕೆಲವರು ಫಾರಿನ್ ಸಲಹೆ ಕೊಟ್ಟಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular