HomeLatest NewsSHOCKING : ಮಗಳ ಮೇಲೆಯೇ ತಂದೆಯಿಂದ ರಾಕ್ಷಸಿ ಕೃತ್ಯ : 17 ಮಂದಿಯ DNA ಪರೀಕ್ಷೆ...

SHOCKING : ಮಗಳ ಮೇಲೆಯೇ ತಂದೆಯಿಂದ ರಾಕ್ಷಸಿ ಕೃತ್ಯ : 17 ಮಂದಿಯ DNA ಪರೀಕ್ಷೆ ಬಳಿಕ ಬಯಲಾಯ್ತು ಘೋರ ಸತ್ಯ !

ಮಾಯಾನಗರಿ ಮುಂಬೈನ ದಕ್ಷಿಣ ಭಾಗದ ಪ್ರತಿಷ್ಠಿತ ವಲಯವೊಂದರಲ್ಲಿ ಮಾನವೀಯತೆ ಮಣ್ಣುಪಾಲಾದ ಘಟನೆಯೊಂದು ವರದಿಯಾಗಿದೆ. ಮಾತು ಬಾರದ, ಸರಿಯಾಗಿ ನಡೆದಾಡಲಾಗದ 20 ವರ್ಷದ ಅಸಹಾಯಕ ಯುವತಿಯನ್ನು ಸ್ವಂತ ತಂದೆಯೇ ಕಾಮದ ಬಲಿಪಶುವನ್ನಾಗಿಸಿಕೊಂಡ ನೀಚ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ.

ಕಳೆದ ವರ್ಷ ಅತಿಯಾದ ಹೊಟ್ಟೆನೋವಿನಿಂದ ಬಳಲುತ್ತಿದ್ದ ಯುವತಿಯನ್ನು ಸಂಬಂಧಿಕರು ಮುಂಬೈನ ಕಾಮಾ ಆಸ್ಪತ್ರೆಗೆ ದಾಖಲಿಸಿದ್ದರು. ತಪಾಸಣೆ ನಡೆಸಿದ ವೈದ್ಯರಿಗೆ ಎದುರಾದದ್ದು ಅನಿರೀಕ್ಷಿತ ಸತ್ಯ. ಆಕೆ ಐದು ತಿಂಗಳ ಗರ್ಭಿಣಿ ಎಂಬುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಾಗ ವೈದ್ಯರೇ ಹೌಹಾರಿದ್ದರು. ಮಗಳ ರಕ್ಷಣೆ ಮಾಡಬೇಕಾದವರು ಆಕೆಯನ್ನು ಈ ಸ್ಥಿತಿಗೆ ತಂದವರು ಯಾರು ಎಂಬ ಪ್ರಶ್ನೆ ಇಡೀ ಆಸ್ಪತ್ರೆ ಮಂಡಳಿಯನ್ನು ಕಾಡಿತ್ತು.

ಪೊಲೀಸ್ ತನಿಖೆಯ ಸವಾಲು ಹಾಗೂ DNA ಬೆನ್ನತ್ತಿದ ತಂಡ
ಯುವತಿಯು ಕಿವುಡು ಹಾಗೂ ಮೂಕಳಾಗಿದ್ದರಿಂದ ಆಕೆಗೆ ನಡೆದ ಅನ್ಯಾಯವನ್ನು ವಿವರಿಸಲು ಸಾಧ್ಯವಿರಲಿಲ್ಲ. ಪೊಲೀಸರು ಸನ್ನೆಗಳ ಮೂಲಕ ಆಕೆಯನ್ನ ವಿಚಾರಿಸಿದಾಗ ಸರಿಸುಮಾರು 16ಕ್ಕೂ ಹೆಚ್ಚು ಜನ ಆಕೆಯ ಮೇಲೆ ದೌರ್ಜನ್ಯ ಎಸಗಿರುವ ಸುಳಿವು ಸಿಕ್ಕಿತು. ಗರ್ಭಕ್ಕೆ ಕಾರಣರಾದ ‘ಮೃಗ’ ಯಾರು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ವೈಜ್ಞಾನಿಕ ಹಾದಿ ಹಿಡಿದರು.
ಸಂಶಯವಿದ್ದ 16 ಮಂದಿ ಕಾಮುಕರ ಹಾಗೂ ಯುವತಿಯ ತಂದೆಯೂ ಸೇರಿದಂತೆ ಒಟ್ಟು 17 ಜನರ ರಕ್ತ ಹಾಗೂ DNA ಮಾದರಿಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಯಿತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಕ್ಷಕನೇ ಭಕ್ಷಕನಾದ ಕಟು ಸತ್ಯ

ದಿನಗಳ ನಂತರ ಬಂದ DNA ವರದಿಯು ತನಿಖಾಧಿಕಾರಿಗಳ ಕಣ್ಣು ಕೆಂಪಾಗಿಸಿತು. ಎಲ್ಲಾ ಶಂಕಿತರ ವರದಿ ನೆಗೆಟಿವ್ ಬಂದಿದ್ದರೂ, ಯುವತಿಯ ಸ್ವಂತ ತಂದೆಯ DNA ಮಾತ್ರ ಹುಟ್ಟಲಿರುವ ಮಗುವಿನ ಜೀನ್ಸ್ಗೆ 100% ಹೊಂದಿಕೆಯಾಗಿತ್ತು. “ಮಗಳಿಗೊಂದು ಆಸರೆಯಾಗಬೇಕಾದ ಕೈಗಳೇ ಆಕೆಯ ಬಾಳನ್ನು ಕಮರಿಸಿದ್ದವು” ಎಂಬುದು ಸಾಬೀತಾಯಿತು.ಈ ಹೇಯ ಕೃತ್ಯವು 2024ರ ಮಾರ್ಚ್ ಮತ್ತು ಸೆಪ್ಟೆಂಬರ್ ನಡುವೆ ನಡೆದಿದೆ ಎಂದು ಅಂದಾಜಿಸಲಾಗಿದೆ. ಪ್ರಸ್ತುತ ಆರೋಪಿ ತಂದೆಯನ್ನು ಮುಂಬೈ ಪೊಲೀಸರು ಬಂಧಿಸಿದ್ದು, ಅಸಹಾಯಕ ಯುವತಿಯನ್ನು ಸರ್ಕಾರಿ ಆಶ್ರಯ ತಾಣಕ್ಕೆ ಸ್ಥಳಾಂತರಿಸಲಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular