HomeLatest Newsಸರ್ಕಾರಿ ನೌಕರರಿಗೆ ಮುಖ್ಯ ಮಾಹಿತಿ: ಸರ್ವೋತ್ತಮ ಸೇವಾ ಪ್ರಶಸ್ತಿಗೆ ಅರ್ಜಿ: ರಾಜ್ಯಮಟ್ಟಕ್ಕೆ 50 ಸಾವಿರ ರೂ....

ಸರ್ಕಾರಿ ನೌಕರರಿಗೆ ಮುಖ್ಯ ಮಾಹಿತಿ: ಸರ್ವೋತ್ತಮ ಸೇವಾ ಪ್ರಶಸ್ತಿಗೆ ಅರ್ಜಿ: ರಾಜ್ಯಮಟ್ಟಕ್ಕೆ 50 ಸಾವಿರ ರೂ. ಬಹುಮಾನ

2026ನೇ ಸಾಲಿನ ರಾಜ್ಯ ಮಟ್ಟ ಹಾಗೂ ಶಿವಮೊಗ್ಗ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

2026ನೇ ಸಾಲಿನ ರಾಜ್ಯ ಮಟ್ಟದ ಹಾಗೂ ಶಿವಮೊಗ್ಗ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪಡೆಯಲು ರಾಜ್ಯ ಸರ್ಕಾರದ ಅರ್ಹ ಅಧಿಕಾರಿ-ನೌಕರರು ತಮ್ಮ ನಾಮನಿರ್ದೇಶನಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಬಹುದಾಗಿದೆ.

ರಾಜ್ಯ ಮಟ್ಟಕ್ಕೆ 30 ಪ್ರಶಸ್ತಿ ಹಾಗೂ ಶಿವಮೊಗ್ಗ ಜಿಲ್ಲೆಗೆ 10 ಜಿಲ್ಲಾ ಮಟ್ಟದ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ರಾಜ್ಯ ಮಟ್ಟದ ಪ್ರಶಸ್ತಿ ತಲಾ 50 ಸಾವಿರ ಹಾಗೂ ಜಿಲ್ಲಾ ಮಟ್ಟದ ಪ್ರಶಸ್ತಿ ತಲಾ 20 ಸಾವಿರ ನಗದು ಬಹುಮಾನ ಒಳಗೊಂಡಿರಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜಿಲ್ಲಾ ಮತ್ತು ರಾಜ್ಯ ಮಟ್ಟದ ಎರಡೂ ಹಂತದ ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸ ಬಯಸುವ ಅಧಿಕಾರಿ-ನೌಕರರು ಪ್ರತ್ಯೇಕ ನಾಮನಿರ್ದೇಶನ ಸಲ್ಲಿಸುವ ನೌಕರರು ಕನಿಷ್ಠ 03 ವರ್ಷಗಳ ಸೇವಾವಧಿಯನ್ನು ಪೂರೈಸಿರಬೇಕು. ಕನ್ನಡ ಹಾಗೂ ಆಂಗ್ಲ ಎರಡೂ ಭಾಷೆಯಲ್ಲಿ ಅರ್ಜಿ ಸಲ್ಲಿಸಬಹುದಾಗಿದ್ದು, ಕನ್ನಡದಲ್ಲಿ ಸಲ್ಲಿಸುವವರು ನುಡಿ 6.0 ಆವೃತ್ತಿಯನ್ನು ಮಾತ್ರ ಬಳಸಬೇಕು.

ಆಸಕ್ತರು ತಮ್ಮ ಪ್ರಸ್ತಾವನೆಯನ್ನು kttps://dparkarnataka.gov.in, kttps://sarvothamaavards.karnataka.gov.in ಮುಖಾಂತರ ಫೆಬ್ರವರಿ 25ರ ಒಳಗಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಶಿವಮೊಗ್ಗ ಜಿಲ್ಲಾ ಸಂಘದ ಜಿಲ್ಲಾಧ್ಯಕ್ಷ ಆರ್.ಮೋಹನ್ ಕುಮಾರ್‌ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular