HomeLatest Newsಸಾರ್ವಕಾಲಿಕ ದಾಖಲೆ ಬರೆದ ಕೆ.ಎಸ್.ಡಿ.ಎಲ್.: 4894 ಟನ್ ಸೋಪು, ಮಾರ್ಜಕ, ಕಾಸ್ಮೆಟಿಕ್ಸ್ ಉತ್ಪಾದನೆ

ಸಾರ್ವಕಾಲಿಕ ದಾಖಲೆ ಬರೆದ ಕೆ.ಎಸ್.ಡಿ.ಎಲ್.: 4894 ಟನ್ ಸೋಪು, ಮಾರ್ಜಕ, ಕಾಸ್ಮೆಟಿಕ್ಸ್ ಉತ್ಪಾದನೆ

ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ(ಕೆ.ಎಸ್.ಡಿ.ಎಲ್.) ಈ ವರ್ಷ ಜನವರಿಯಲ್ಲಿ ಒಟ್ಟು 4894 ಟನ್ ಸೋಪು ಉತ್ಪನ್ನ ಉತ್ಪಾದಿಸಿದ್ದು, ಇದು ಸಾರ್ವಕಾಲಿಕ ದಾಖಲೆಯಾಗಿದೆ ಎಂದು ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.

ಈ ಹಿಂದೆ 2025 ಡಿಸೆಂಬರ್ ನಲ್ಲಿ 4735 ಮೆಟ್ರಿಕ್ ಟನ್ ಉತ್ಪಾದನೆ ಅತಿ ಹೆಚ್ಚಿನ ಉತ್ಪಾದನೆಯಾಗಿತ್ತು. ಇದೀಗ ಜನವರಿ ತಿಂಗಳಲ್ಲಿ ಸಾಬೂನು ವಿಭಾಗದಲ್ಲಿ 3798 ಟನ್, ಮಾರ್ಜಕಗಳ ವಿಭಾಗದಲ್ಲಿ 941 ಟನ್ ಮತ್ತು ಕಾಸ್ಮೆಟಿಕ್ ವಿಭಾಗದಲ್ಲಿ 155 ಟನ್ ಉತ್ಪಾದನೆ ಸೇರಿ ಒಟ್ಟು 4894 ಟನ್ ಉತ್ಪಾದನೆ ಮಾಡಲಾಗಿದ್ದು, ಇದುವರೆಗೆ ಹೆಚ್ಚಿನ ಉತ್ಪಾದನೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

2020ರಿಂದ 2025ರವರೆಗೆ ಹಂತ ಹಂತವಾಗಿ ದಾಖಲೆ ಮುರಿದು, ಈಗ ಹೊಸ ಶಿಖರ ತಲುಪಿದೆ.  ನಮ್ಮ ಸರ್ಕಾರದ ಸುಧಾರಿತ ಕ್ರಮಗಳು, ಉತ್ತಮ ನಿರ್ವಹಣೆ, ಮಾರುಕಟ್ಟೆ ವಿಸ್ತರಣೆ, ಬ್ರ್ಯಾಂಡ್ ಬಲಪಡಿಕೆ ಮತ್ತು 3 ಶಿಫ್ಟ್ ಗಳಲ್ಲಿ ನಿರಂತರ ಕಾಯಕ, ಗುಣಮಟ್ಟ ಆಧಾರಿತ ಉತ್ಪಾದನೆ ಈ ಎಲ್ಲವುಗಳ ಪ್ರತಿಫಲವಿದು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅತ್ಯಂತ ಮಹತ್ವದ ಅಂಶವೇನೆಂದರೆ -ಯಾವುದೇ ಹೊಸ ಯಂತ್ರೋಪಕರಣ, ಹೆಚ್ಚುವರಿ ಸಿಬ್ಬಂದಿ ಇಲ್ಲದೆ, ಈಗಿರುವ ಮೂಲಸೌಕರ್ಯದಲ್ಲೇ ಈ ಸಾಧನೆ ಮಾಡಿದೆ. 2030ರೊಳಗೆ ವಾರ್ಷಿಕ ₹5,000 ಕೋಟಿ ಟರ್ನ್ಓವರ್ ಗುರಿ ಹೊಂದಿದ್ದು ಈ ಗುರಿ ಸಾಧನೆಯತ್ತ ಭರವಸೆಯ ಹೆಜ್ಜೆಗಳನ್ನು ಇರಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular