ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡವು 2025-26ನೇ ಸಾಲಿಗೆ ಶ್ರೀ ಎಸ್. ನಿಜಲಿಂಗಪ್ಪ ನಿಧಿ ಶಿಷ್ಯವೇತನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ. ಈ ಶಿಷ್ಯವೇತನವು ಮುಂಬೈ ಕರ್ನಾಟಕದ ಜಿಲ್ಲೆಗಳಲ್ಲಿ (ಧಾರವಾಡ, ಹಾವೇರಿ, ಗದಗ, ಕಾರವಾರ, ಬೆಳಗಾವಿ, ಬಾಗಲಕೋಟ, ಬಿಜಾಪುರ) ಕಾರ್ಯನಿರ್ವಹಿಸುತ್ತಿರುವ ಪ್ರಾಥಮಿಕ ಶಾಲಾ ಶಿಕ್ಷಕರ ಮಕ್ಕಳಿಗೆ ಲಭ್ಯವಿದೆ.
2024-25ನೇ ಸಾಲಿನಲ್ಲಿ ಸ್ನಾತಕ ಪದವಿಯ ವಿವಿಧ ಕೋರ್ಸ್‌ಗಳಿಗೆ ಅಧ್ಯಯನ ಮಾಡುತ್ತಿರುವ (ಹಳೆಯ) ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಧಾರವಾಡ, ಹಾವೇರಿ, ಗದಗ, ಕಾರವಾರ, ಬೆಳಗಾವಿ, ಬಾಗಲಕೋಟ, ಬಿಜಾಪುರ ಜಿಲ್ಲೆಗಳ ಶಿಕ್ಷಕರ ಮಕ್ಕಳು ಅರ್ಜಿ ಸಲ್ಲಿಸಲು ಅರ್ಹರು.
- ಕೋರ್ಸ್‌ಗಳು: ಕಲಾ, ವಿಜ್ಞಾನ, ವಾಣಿಜ್ಯ, ತಾಂತ್ರಿಕ, ವೈದ್ಯಕೀಯ ಮತ್ತು ಆಯುರ್ವೇದ ಪದವಿಗಳಿಗೆ ಶಿಷ್ಯವೇತನ ಲಭ್ಯ.
- ಅರ್ಜಿ ಸಲ್ಲಿಸುವ ವಿಧಾನ: ಅರ್ಹ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು.
ಸೂಚನೆ
ಮುಂಬೈ ಕರ್ನಾಟಕದ ಪ್ರಾಥಮಿಕ ಶಾಲಾ ಶಿಕ್ಷಕರ ಮಕ್ಕಳು ಮಾರ್ಚ-2025 ರಲ್ಲಿ ಪಿಯುಸಿ (ಕಲಾ/ವಾಣಿಜ್ಯ/ವಿಜ್ಞಾನ) ದ್ವಿತೀಯ ವರ್ಗದ (PUC 2nd Year) ಪರೀಕ್ಷೆಯನ್ನು ಪ್ರಥಮ ಪ್ರಯತ್ನದಲ್ಲಿ (1* attempt ) ಪಾಸಾಗಿ 2025-26ನೇ ಸಾಲಿನಲ್ಲಿ ಈ ಕೆಳಕಾಣಿಸಿ ತಿಳಿಸಿದ ಪದವಿಗಳಲ್ಲಿ ಓದುತ್ತಿರಬೇಕು.
* ಅ) ಕರ್ನಾಟಕ ವಿಶ್ವವಿದ್ಯಾಲಯದ ಸಂಯೋಜಿತ ಯಾವುದೇ ಮಹಾವಿದ್ಯಾಲಯಗಳಲ್ಲಿ (ಕ.ವಿ.ವಿ. ಸಂಯೋಜನಾ ವ್ಯಾಪ್ತಿಗೆ ಒಳಪಡುವ ಜಿಲ್ಲೆಗಳು: ಧಾರವಾಡ, ಗದಗ, ಹಾಗೂ ಕಾರವಾರ) ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಷಯಗಳಲ್ಲಿ (ನಿಖಾಯ) ಪದವಿ ವರ್ಗಕ್ಕೆ ಪ್ರವೇಶ ಪಡೆದು ಓದುತ್ತಿರಬೇಕು.
ಬ) ಕರ್ನಾಟಕ ರಾಜ್ಯದ ವೈದ್ಯಕೀಯ/ತಾಂತ್ರಿಕ ವಿಶ್ವವಿದ್ಯಾಲಯಗಳ ಅಧೀನದಲ್ಲಿ ಬರುವ ವಿವಿಧ ವೈದ್ಯಕೀಯ/ತಾಂತ್ರಿಕ ಮಹಾವಿದ್ಯಾಲಯಗಳಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ವೈದ್ಯಕೀಯ ಪದವಿ/ತಾಂತ್ರಿಕ ಪದವಿಗಳಲ್ಲಿ ಪ್ರವೇಶ ಪಡೆದು ಓದುತ್ತಿರಬೇಕು. (ವೈದ್ಯಕೀಯ ಪದವಿಗಳಲ್ಲಿ ಎಂ.ಬಿ.ಬಿ.ಎಸ್. ಮತ್ತು ಬಿ.ಎ.ಎಂ.ಎಸ್. ಪದವಿಗಳೆಂದು ಪರಿಗಣಿಸತಕ್ಕದ್ದು).
9. ಈ ಶಿಷ್ಯವೇತನಗಳನ್ನು ಸ್ನಾತಕ ಪದವಿಯ ಪ್ರಥಮ ವರ್ಷದಿಂದ (ಪಿ.ಯು.ಸಿ ದ್ವಿತೀಯ ವರ್ಷದ ಅಂಕಪಟ್ಟಿ ಪರಿಶೀಲಿಸಿ) ನೀಡಲಾಗುವದು ಮತ್ತು ವಿದ್ಯಾರ್ಥಿ/ ವಿದ್ಯಾರ್ಥಿನಿಯರ ತೃಪ್ತಿಕರವಾದ ಅಧ್ಯಯನವನ್ನು ಪರಿಗಣಿಸಿ ವರ್ಷದಿಂದ ವರ್ಷಕ್ಕೆ (ಗೊತ್ತುಪಡಿಸಿದ ಅವಧಿಗೆ) ವಿಸ್ತರಿಸಿ ಪಾವತಿಸುವ ಕ್ರಮ ಜರುಗಿಸಲಾಗುವದು.
(ಅ) ಈ ಪ್ರಕಟಣೆಯೊಂದಿಗೆ ಲಗತ್ತಿಸಿದ ಅರ್ಜಿ ನಮೂನೆಯಲ್ಲಿಯೇ ಮಾಹಿತಿ ತುಂಬಿ, ಪ್ರಾಚಾರ್ಯರ ಮುಖಾಂತರ ಸಲ್ಲಿಸತಕ್ಕದ್ದು.
(ಬ) ಅರ್ಜಿಯನ್ನು ದಿನಾಂಕ: 20-02-2026ರೊಳಗಾಗಿ ಶಿಷ್ಯವೇತನ ವಿಭಾಗ, ಕ.ವಿ.ವಿ. ಧಾರವಾಡಕ್ಕೆ ಸಲ್ಲಿಸತಕ್ಕದ್ದು.
(ಕ) ಅರ್ಜಿ ಜೊತೆಗೆ ಕೇಳಲಾದ ಎಲ್ಲ ದಾಖಲಾತಿಗಳನ್ನು ಅಗತ್ಯವಾಗಿ ಲಗತ್ತಿಸತಕ್ಕದ್ದು.(ಅಪೂರ್ಣ ಅರ್ಜಿಗಳನ್ನು ಪರಿಗಣಿಸಲಾಗುವದಿಲ್ಲ ಮತ್ತು ಈ ದಿಸೆಯಲ್ಲಿ ಪತ್ರ ವ್ಯವಹಾರಕ್ಕೆ ಅವಕಾಶವಿಲ್ಲ
(ಡ) ಅರ್ಹತೆಯ ಆಧಾರದ ಮೇಲೆ ಶಿಷ್ಯವೇತನ ಮಂಜೂರಾತಿ ಮಾಡಲಾಗುವುದು. ಅರ್ಜಿ ನಮೂನೆಯನ್ನು (Application Form) ವಿಶ್ವವಿದ್ಯಾಲಯದ ಅಂತರ್ಜಾಲ www.kud.ac.in ನಲ್ಲಿ ಪಡೆಯಬಹುದು. ಕಾರಣ, ಸಂಬಂಧಿಸಿದ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕೆಂದು ತಿಳಿಯಪಡಿಸಲಾಗಿದೆ.





