HomeBusinessGood News: ಅಮೆರಿಕ-ಭಾರತ ವ್ಯಾಪಾರ ಒಪ್ಪಂದ, ಷೇರು ಮಾರುಕಟ್ಟೆ ಜಿಗಿತ

Good News: ಅಮೆರಿಕ-ಭಾರತ ವ್ಯಾಪಾರ ಒಪ್ಪಂದ, ಷೇರು ಮಾರುಕಟ್ಟೆ ಜಿಗಿತ

ಕೇಂದ್ರ ಬಜೆಟ್ 2026ರ ಬಳಿಕ ಹೂಡಿಕೆದಾರರಿಗೆ ಗುಡ್‌ನ್ಯೂಸ್ ಸಿಕ್ಕಿದೆ. ಭಾರತ-ಅಮೆರಿಕಾ ವ್ಯಾಪಾರ ಒಪ್ಪಂದದ ನಂತರ ಗಿಫ್ಟ್ ನಿಫ್ಟಿ ಏರುಗತಿಯಲ್ಲಿ ಸಾಗುವ ಮುನ್ಸೂಚನೆ ನೀಡಿದೆ. 25,900ಕ್ಕಿಂತ ಹೆಚ್ಚಿನ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತುಕತೆ ನಡೆಸಿದ್ದರು. ಈ ಕುರಿತು ಟ್ರಂಪ್ ಮಾಹಿತಿ ಹಂಚಿಕೊಂಡಿದ್ದು, ಅಮೆರಿಕ-ಭಾರತ ವ್ಯಾಪಾರ ಒಪ್ಪಂದ ಘೋಷಣೆ ಮಾಡಿದ್ದಾರೆ.

ಈ ಬಳಿಕ ಮಂಗಳವಾರ ನಿಫ್ಟಿ ಕಾರ್ಯಕ್ಷಮತೆಯ ಆರಂಭಿಕ ಸೂಚಕವಾದ ಗಿಫ್ಟ್ ನಿಫ್ಟಿ ಬೆಳಗ್ಗೆ 6:30ರ ವೇಳೆಗೆ 25,919.50 ಮಟ್ಟದಲ್ಲಿ ವಹಿವಾಟು ನಡೆಸುತ್ತಿದ್ದು, ಮಾರುಕಟ್ಟೆಯು ಬಹಳ ದಿನಗಳ ಬಳಿಕ ಏರಿಕೆಯೊಂದಿಗೆ ಆರಂಭವಾಗುವ ಮುನ್ಸೂಚನೆ ಸಿಕ್ಕಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭಾರತ-ಅಮೆರಿಕಾ ನಡುವಿನ ವ್ಯಾಪಾರ ಒಪ್ಪಂದದ ನಂತರ, ಅಮೆರಿಕವು ಭಾರತದ ಆಮದುಗಳ ಮೇಲೆ ವಿಧಿಸಿದ್ದ ಪರಸ್ಪರ ಸುಂಕಗಳನ್ನು ಕಡಿತಗೊಳಿಸಿದ ಬೆನ್ನಲ್ಲೇ ಬುಧವಾರ ಬೆಳಿಗ್ಗೆ 6:30ರ ವೇಳೆಗೆ ಗಿಫ್ಟ್ ನಿಫ್ಟಿ 25,919.50 ಮಟ್ಟದಲ್ಲಿ ವಹಿವಾಟು ನಡೆಸುತ್ತಿದ್ದು, ನಿಫ್ಟಿ 50 ಸೂಚ್ಯಂಕವು ಬಹಳ ದಿನಗಳ ಬಳಿಕ ಏರಿಕೆಯೊಂದಿಗೆ ಆರಂಭವಾಗುವ ಮುನ್ಸೂಚನೆ ನೀಡಿದೆ.

ಭಾರತ ಮತ್ತು ಅಮೆರಿಕಾ ನಡುವಿನ ವ್ಯಾಪಾರ ಒಪ್ಪಂದವನ್ನು ಮಾರುಕಟ್ಟೆಗಳು ಸೂಕ್ಷ್ಮವಾಗಿ ಗಮನಿಸುತ್ತಿವೆ. ಈ ಒಪ್ಪಂದದ ಅಡಿಯಲ್ಲಿ ಭಾರತೀಯ ಆಮದುಗಳ ಮೇಲಿನ ಪರಸ್ಪರ ಸುಂಕವನ್ನು ಶೇ.25 ರಿಂದ ಶೇ. 18ಕ್ಕೆ ಇಳಿಸಲಾಗಿದೆ.

ಈ ಬದಲಾವಣೆಯು ತಕ್ಷಣದಿಂದಲೇ ಜಾರಿಗೆ ಬರಲಿದೆ. ಈ ಹಿಂದೆ, ರಷ್ಯಾ ತೈಲ ಖರೀದಿಗೆ ಸಂಬಂಧಿಸಿದಂತೆ ಶೇ. 25ರಷ್ಟು ದಂಡವೂ ಸೇರಿದಂತೆ ಭಾರತವು ಒಟ್ಟು ಶೇ. 50ರಷ್ಟು ಸುಂಕವನ್ನು ಎದುರಿಸಿತ್ತು. ಪ್ರಸ್ತುತ ಒಟ್ಟಾರೆ ಸುಂಕದ ದರವು ಶೇ. 18ರಷ್ಟಿದೆ ಎಂದು ಅಮೆರಿಕಾ ರಾಯಭಾರ ಕಚೇರಿ ಖಚಿತಪಡಿಸಿದೆ.

ಭಾನುವಾರ ಕೇಂದ್ರ ಬಜೆಟ್ 2026ರ ಮಂಡನೆ ಬಳಿಕ ಷೇರು ಮಾರುಕಟ್ಟೆ ಕುಸಿತ ಕಂಡಿತ್ತು. ಸೋಮವಾರದಂದು ಕುಸಿತದೊಂದಿಗೆ ಆರಂಭವಾಗಿದ್ದ ಭಾರತೀಯ ಷೇರು ಮಾರುಕಟ್ಟೆಗಳು, ದಿನದ ಅಂತ್ಯಕ್ಕೆ ಏರಿಕೆ ಕಂಡು ಸ್ಥಿರಗೊಂಡಿದ್ದವು.

ನಿಫ್ಟಿ ಮತ್ತು ಸೆನ್ಸೆಕ್ಸ್ ದಿನದ ವಹಿವಾಟಿನಲ್ಲಿ ಸುಮಾರು ಶೇ. 0.60 ರಷ್ಟು ಕುಸಿದಿದ್ದರೂ, ನಂತರ ಶೇ. 1 ಕ್ಕಿಂತ ಹೆಚ್ಚು ಚೇತರಿಕೆ ಕಂಡು ಲಾಭದಲ್ಲಿ ಮುಕ್ತಾಯಗೊಂಡವು. ಈ ಮೂಲಕ ಸತತ ಎರಡು ದಿನಗಳ ಕುಸಿತಕ್ಕೆ ನಿಂತು ಹೋಗಿತ್ತು.

ನಿಫ್ಟಿ 262.95 ಅಂಕಗಳ (ಶೇ. 1.06) ಏರಿಕೆಯೊಂದಿಗೆ 25,088.40 ಮಟ್ಟದಲ್ಲಿ ಮತ್ತು ಸೆನ್ಸೆಕ್ಸ್ 909.11 ಅಂಕಗಳ (ಶೇ. 1.13) ಏರಿಕೆಯೊಂದಿಗೆ 81,632.05 ಮಟ್ಟದಲ್ಲಿ ವಹಿವಾಟು ಮುಗಿಸಿದ್ದವು.

ಈಗಿನ ಬದಲಾವಣೆಯು 2025ರ ಆರಂಭದಲ್ಲಿ ಆರಂಭವಾದ ಮಾತುಕತೆಗಳ ಫಲಿತಾಂಶವಾಗಿದೆ. ಆಗಸ್ಟ್‌ನಲ್ಲಿ ಭಾರತೀಯ ಆಮದುಗಳ ಮೇಲೆ ಅಮೆರಿಕವು ಶೇ. 50ರಷ್ಟು ಹೆಚ್ಚಿನ ಸುಂಕ ವಿಧಿಸಿದ ಕಾರಣ ಈ ಮಾತುಕತೆಗಳಿಗೆ ಅನುಮೋದನೆ ಸಿಗುವ ಕುರಿತು ಅನುಮಾನ ವ್ಯಕ್ತವಾಗಿತ್ತು.

ಆದರೆ ಅಕ್ಟೋಬರ್‌ನಲ್ಲಿ ಮತ್ತೆ ಮಾತುಕತೆ ಪುನರಾರಂಭಗೊಂಡವು. ಇಂದಿನ ಮಾರುಕಟ್ಟೆಯು ಪ್ರಮುಖವಾಗಿ ಸುಂಕದ ದರಗಳು, ವ್ಯಾಪಾರ ಬದ್ಧತೆಗಳು ಮತ್ತು ತೈಲ ಸಂಬಂಧಿತ ಕ್ರಮಗಳ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನರೇಂದ್ರ ಮೋದಿ ಜೊತೆ ಸೋಮವಾರ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು. ಈ ಭಾರತ-ಅಮೆರಿಕ ವ್ಯಾಪಾರ ಒಪ್ಪಂದವನ್ನು ಘೋಷಣೆ ಮಾಡಿದ್ದಾರೆ.

ಅಮೆರಿಕದ ವಿರುದ್ಧ ಭಾರತ ವಿಧಿಸಿರುವ ಸುಂಕಗಳು ಮತ್ತು ಸುಂಕೇತರ ಅಡೆತಡೆಗಳನ್ನು ಶೂನ್ಯಕ್ಕೆ ಇಳಿಸಲು ಭಾರತ ಮುಂದಾಗಲಿದೆ ಎಂದು ಟ್ರಂಪ್ ತಿಳಿಸಿದ್ದಾರೆ. ಅಲ್ಲದೆ, ಸುಮಾರು 500 ಬಿಲಿಯನ್ ಡಾಲರ್ ಮೌಲ್ಯದ ಅಮೆರಿಕದ ಇಂಧನ, ತಂತ್ರಜ್ಞಾನ, ಕೃಷಿ, ಕಲ್ಲಿದ್ದಲು ಮತ್ತು ಇತರ ಉತ್ಪನ್ನಗಳನ್ನು ಒಳಗೊಂಡಂತೆ ಹೆಚ್ಚಿನ ಮಟ್ಟದಲ್ಲಿ ಬೈ ಅಮೇರಿಕನ್ (Buy American) ನೀತಿಗೆ ಮೋದಿಯವರು ಬದ್ಧರಾಗಿದ್ದಾರೆ ಎಂದು ಹೇಳಿದ್ದಾರೆ.

ಭಾರತವು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಿ, ಅಮೆರಿಕ ಮತ್ತು ಸಂಭಾವ್ಯವಾಗಿ ವೆನೆಜುವೆಲಾದಿಂದ ಹೆಚ್ಚಿನ ತೈಲ ಖರೀದಿಸಲು ಮೋದಿ ಒಪ್ಪಿಕೊಂಡಿದ್ದಾರೆ ಎಂದು ಟ್ರಂಪ್ ತಿಳಿಸಿದ್ದಾರೆ.

ಇದಲ್ಲದೆ ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವ ಬಗ್ಗೆಯೂ ಇಬ್ಬರೂ ನಾಯಕರು ಚರ್ಚಿಸಿದ್ದಾರೆ. ಟ್ರಂಪ್ ಜೊತೆಗಿನ ಮಾತುಕತೆ ಕುರಿತು ಮೋದಿ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಖಿದ್ದು, ಈ ಒಪ್ಪಂದವನ್ನು ಖಚಿತಪಡಿಸಿದ್ದಾರೆ.

ಮೇಡ್ ಇನ್ ಇಂಡಿಯಾ ಉತ್ಪನ್ನಗಳ ಮೇಲಿನ ಸುಂಕವು ಶೇ. 18ಕ್ಕೆ ಇಳಿಕೆಯಾಗಲಿದೆ. ಈ ಘೋಷಣೆಗಾಗಿ ಟ್ರಂಪ್ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಉಭಯ ದೇಶಗಳ ನಡುವಿನ ಈ ಒಪ್ಪಂದ, ಸಹಕಾರವು ಜನರಿಗೆ ಪ್ರಯೋಜನ ನೀಡಲಿದೆ ಮತ್ತು ಸಹಕಾರದ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ ಎಂದು ತಿಳಿಸಿದ್ದಾರೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular