HomeLatest NewsBIG NEWS : 'ಒರಾಕಲ್' ಉದ್ಯೋಗಿಗಳಿಗೆ ಬಿಗ್ ಶಾಕ್ : 30,000 ನೌಕರರ ವಜಾ |Oracle...

BIG NEWS : ‘ಒರಾಕಲ್’ ಉದ್ಯೋಗಿಗಳಿಗೆ ಬಿಗ್ ಶಾಕ್ : 30,000 ನೌಕರರ ವಜಾ |Oracle Lay offs

ಐಟಿ (IT) ಕ್ಷೇತ್ರದಲ್ಲಿ ಉದ್ಯೋಗಿಗಳ ವಜಾ ಅಥವಾ ‘ಲೇ-ಆಫ್’ (Layoffs) ಪ್ರಕ್ರಿಯೆಯು 2024 ರಿಂದ 2026ರ ಆರಂಭದವರೆಗೂ ಜಾಗತಿಕವಾಗಿ ದೊಡ್ಡ ಮಟ್ಟದ ಚರ್ಚೆಯಲ್ಲಿದೆ. ಕಂಪನಿಗಳು ಈಗ AI ತಂತ್ರಜ್ಞಾನದ ಮೇಲೆ ಹೆಚ್ಚು ಹೂಡಿಕೆ ಮಾಡುತ್ತಿವೆ. ಸಾಮಾನ್ಯ ಕೆಲಸಗಳನ್ನು AI ಮೂಲಕ ಮಾಡಿಸಬಹುದಾದ್ದರಿಂದ, ಅಂತಹ ವಿಭಾಗಗಳಲ್ಲಿ ಉದ್ಯೋಗಿಗಳ ಅಗತ್ಯತೆ ಕಡಿಮೆಯಾಗುತ್ತಿದೆ. ಇದೀಗ ಟೆಕ್ ದೈತ್ಯ ಒರಾಕಿಲ್ (Oracle) ಕಂಪನಿಯು ಸುಮಾರು 20,000 ದಿಂದ 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದೆ.

ಹೌದು. ಅಮೆರಿಕದ ಬ್ಯಾಂಕ್ಗಳು AI ಡೇಟಾ ಸೆಂಟರ್ ವಿಸ್ತರಣೆಗೆ ಧನಸಹಾಯ ನೀಡಲು ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ, ಟೆಕ್ ದೈತ್ಯ ಒರಾಕಿಲ್ (Oracle) ತನ್ನ ಕಾರ್ಯತಂತ್ರವನ್ನು ಬದಲಿಸುತ್ತಿದೆ. ಈ ಪ್ರಕ್ರಿಯೆಯ ಭಾಗವಾಗಿ ಕಂಪನಿಯು ಸುಮಾರು 20,000 ದಿಂದ 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದೆ ಎಂದು ವರದಿಗಳು ತಿಳಿಸಿದೆ.

ಬೃಹತ್ AI ಮೂಲಸೌಕರ್ಯ ವಿಸ್ತರಣೆಗೆ ಅಗತ್ಯವಿರುವ ಹಣವನ್ನು ಕ್ರೋಢೀಕರಿಸಲು ಒರಾಕಿಲ್ ಈ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಉದ್ಯೋಗ ಕಡಿತದ ಮೂಲಕ ಕಂಪನಿಯು ಅಂದಾಜು 8 ರಿಂದ 10 ಬಿಲಿಯನ್ ಡಾಲರ್ ನಗದು ಉಳಿತಾಯ ಮಾಡಲು ಯೋಜಿಸಿದೆ. ಅಷ್ಟೇ ಅಲ್ಲದೆ, 2022 ರಲ್ಲಿ 28.3 ಬಿಲಿಯನ್ ಡಾಲರ್ಗೆ ಖರೀದಿಸಿದ್ದ ಆರೋಗ್ಯ ರಕ್ಷಣಾ ಸಾಫ್ಟ್ವೇರ್ ಘಟಕ ‘ಸೆರ್ನರ್’ (Cerner) ಅನ್ನು ಮಾರಾಟ ಮಾಡಲು ಸಹ ಕಂಪನಿ ಚಿಂತನೆ ನಡೆಸುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವರದಿಯ ಪ್ರಕಾರ, ಒರಾಕಿಲ್ನ ಡೇಟಾ ಸೆಂಟರ್ ಯೋಜನೆಗಳಿಗೆ ಸಾಲ ನೀಡಲು ಅಮೆರಿಕದ ಬ್ಯಾಂಕ್ಗಳು ಆಸಕ್ತಿ ತೋರುತ್ತಿಲ್ಲ. ಒಟ್ಟು 156 ಬಿಲಿಯನ್ ಡಾಲರ್ ವೆಚ್ಚದ ಈ ಬೃಹತ್ ಯೋಜನೆಗಳನ್ನು ಒರಾಕಿಲ್ ಒಬ್ಬಂಟಿಯಾಗಿ ನಿಭಾಯಿಸಬಲ್ಲದೇ ಎಂಬ ಸಂಶಯ ಹೂಡಿಕೆದಾರರಲ್ಲಿ ಮೂಡಿದೆ. ಇದರಿಂದಾಗಿ ಸಾಲದ ಮೇಲಿನ ಬಡ್ಡಿ ದರಗಳು ದುಪ್ಪಟ್ಟಾಗಿದ್ದು, ಅನೇಕ ಒಪ್ಪಂದಗಳು ಸ್ಥಗಿತಗೊಂಡಿವೆ. ಅಮೆರಿಕದ ಬ್ಯಾಂಕ್ಗಳು ಹಿಂದೆ ಸರಿದ ಜಾಗದಲ್ಲಿ ಏಷ್ಯಾದ ಬ್ಯಾಂಕ್ಗಳು ಹೆಚ್ಚಿನ ಬಡ್ಡಿದರಕ್ಕೆ ಸಾಲ ನೀಡಲು ಮುಂದೆ ಬಂದಿವೆ. ಪರಿಸ್ಥಿತಿಯನ್ನು ನಿಭಾಯಿಸಲು ಒರಾಕಿಲ್ ಹೊಸ ಗ್ರಾಹಕರಿಂದ ಶೇ. 40 ರಷ್ಟು ಮುಂಗಡ ಹಣ ಕೇಳುತ್ತಿದೆ ಮತ್ತು ‘ನಿಮ್ಮ ಸ್ವಂತ ಚಿಪ್ ತನ್ನಿ’ (BYOC) ಎಂಬ ಹೊಸ ಮಾದರಿಯನ್ನು ಪರಿಚಯಿಸಲು ಮುಂದಾಗಿದೆ.

AI ಸ್ಪೆಷಲಿಸ್ಟ್’ಗಳಿಗಾಗಿ ಲಕ್ಷಾಂತರ ರೂಪಾಯಿ ಸಂಬಳ

ಭಾರತದ ಪ್ರಮುಖ ಐಟಿ ಕಂಪನಿಗಳಾದ TCS, Infosys, ಮತ್ತು Wipro ಕೂಡ ತಮ್ಮ ನೇಮಕಾತಿ ಪ್ರಕ್ರಿಯೆಯನ್ನು ಗಣನೀಯವಾಗಿ ಕಡಿಮೆ ಮಾಡಿವೆ. ಕೇವಲ ಕೋಡಿಂಗ್ ಬಲ್ಲವರಿಗಿಂತ AI, ಮೆಷಿನ್ ಲರ್ನಿಂಗ್ ಮತ್ತು ಡೇಟಾ ಸೈನ್ಸ್ ಬಲ್ಲವರಿಗೆ ಮಾತ್ರ ಹೆಚ್ಚಿನ ಆದ್ಯತೆ ಸಿಗುತ್ತಿದೆ. ಕಂಪನಿಗಳು ಒಂದು ಕಡೆ ಉದ್ಯೋಗಿಗಳನ್ನು ವಜಾ ಮಾಡುತ್ತಿದ್ದರೆ, ಮತ್ತೊಂದು ಕಡೆ ‘AI ಸ್ಪೆಷಲಿಸ್ಟ್’ಗಳಿಗಾಗಿ ಲಕ್ಷಾಂತರ ರೂಪಾಯಿ ಸಂಬಳ ನೀಡಿ ನೇಮಕಾತಿ ಮಾಡಿಕೊಳ್ಳುತ್ತಿವೆ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular