HomeLatest Newsಆರತಕ್ಷತೆಗೆ ತೆರಳುವಾಗ ವರನಿಗೆ ಚಾಕು ಇರಿತ ಕೇಸ್ ಗೆ ಟ್ವಿಸ್ಟ್: ವಧು ಸೇರಿ ಮೂವರು ಅರೆಸ್ಟ್

ಆರತಕ್ಷತೆಗೆ ತೆರಳುವಾಗ ವರನಿಗೆ ಚಾಕು ಇರಿತ ಕೇಸ್ ಗೆ ಟ್ವಿಸ್ಟ್: ವಧು ಸೇರಿ ಮೂವರು ಅರೆಸ್ಟ್

ಚಾಮರಾಜನಗರ: ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದಲ್ಲಿ ಕಲ್ಯಾಣ ಮಂದಿರಕ್ಕೆ ತೆರಳುತ್ತಿದ್ದ ವರ ರವೀಶ್ ಗೆ ಚಾಕು ಇರಿದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ.

ರವೀಶ್ ನನ್ನು ಮದುವೆಯಾಗಬೇಕಿದ್ದ ವಧು ನಯನಾ, ಪ್ರಿಯಕರ ದರ್ಶನ್ ಮತ್ತು ಓರ್ವ ಅಪ್ರಾಪ್ತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಚಾಕು ಇರಿದ ರಹಸ್ಯ ಬೆಳಕಿಗೆ ಬಂದಿದೆ. ರವೀಶ್ ಜತೆಗಿನ ಮದುವೆಯ ನಿಲ್ಲಿಸಲು ಪ್ರಿಯಕರನೊಂದಿಗೆ ಸೇರಿ ನಯನಾ ಈ ರೀತಿ ಪ್ಲಾನ್ ಮಾಡಿದ್ದಾಳೆ ಎನ್ನುವುದು ಕೊಳ್ಳೇಗಾಲ ಪೊಲೀಸರ ತನಿಖೆಯಲ್ಲಿ ಗೊತ್ತಾಗಿದೆ.

ತಮಟೆ ಹೊಡೆಯುವ ಕೆಲಸ ಮಾಡುತ್ತಿರುವ ದರ್ಶನ್ ನನ್ನು ನಯನ ಪ್ರೀತಿಸುತ್ತಿದ್ದಳು. ಆದರೆ ಮನೆಯಲ್ಲಿ ವಿಷಯ ಹೇಳಲು ಭಯಪಟ್ಟಿದ್ದಳು. ರವೀಶ್ ಜೊತೆಗಿನ ಮದುವೆಯನ್ನು ನೀನೇ ನಿಲ್ಲಿಸು ಎಂದು ಪ್ರಿಯಕರನಿಗೆ ಹೇಳಿದ್ದಳು. ಜನವರಿ 27ರಂದು ರವೀಶ್ ಕೊಳ್ಳೇಗಾಲ ಕಲ್ಯಾಣ ಮಂಟಪಕ್ಕೆ ತೆರಳುವಾಗ ಮಾರ್ಗ ಮಧ್ಯೆ ಕಾರ್ ಅಡ್ಡಗಟ್ಟಿದ ದರ್ಶನ್ ಗ್ಯಾಂಗ್ ಡ್ರ್ಯಾಗರ್, ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಿತ್ತು. ನಂತರ ರವೀಶ್ ದಾಖಲಾಗಿದ್ದ ಆಸ್ಪತ್ರೆಗೆ ಬಂದ ನಯನಾ ಮದುವೆಯಾಗುವಂತೆ ನಾಟಕ ಮಾಡಿದ್ದಳು. ರವೀಶ್ ಗೂ ಕೂಡ ಆಕೆ ಮೇಲೆ ಅನುಮಾನ ಬಂದಿದ್ದರಿಂದ ಮದುವೆಯಾಗಲು ನಿರಾಕರಿಸಿದ್ದ. ಪೊಲೀಸರ ತನಿಖೆಯಲ್ಲಿ ನಯನಾ ಕೊಲೆಗೆ ಪ್ಲಾನ್ ಮಾಡಿರುವುದು ಗೊತ್ತಾಗಿದೆ. ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular