HomeLatest NewsBREAKING : ಮೈಸೂರು ದಸರಾದ ಹೆಸರಾಂತ ಕುಸ್ತಿಪಟು 'ಟೈಗರ್ ಬಾಲಾಜಿ ಜೆಟ್ಟಿ' ನಿಧನ

BREAKING : ಮೈಸೂರು ದಸರಾದ ಹೆಸರಾಂತ ಕುಸ್ತಿಪಟು ‘ಟೈಗರ್ ಬಾಲಾಜಿ ಜೆಟ್ಟಿ’ ನಿಧನ

ಮೈಸೂರು : ಮೈಸೂರು ನಗರದ ಹೆಸರಾಂತ ಕುಸ್ತಿಪಟು ಟೈಗರ್ ಬಾಲಾಜಿ ಜೆಟ್ಟಿ (67) ನಿಧನರಾಗಿದ್ದಾರೆ. ಮೈಸೂರು ನಗರದ ಸುಣ್ಣದಕೇರಿ ನಿವಾಸಿಯಾಗಿರುವ ಇವರು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸಿ ಅಪಾರವಾದ ಖ್ಯಾತಿ ಗಳಿಸಿದ್ದರು.

ಅಖಾಡದಲ್ಲಿ ಅವರ ಆಕ್ರಮಣಕಾರಿ ಶೈಲಿ ಮತ್ತು ಚಿರತೆಯಂತಹ ವೇಗವನ್ನು ನೋಡಿ ಅಭಿಮಾನಿಗಳು ಅವರಿಗೆ ‘ಟೈಗರ್’ ಎಂಬ ಬಿರುದನ್ನು ನೀಡಿದ್ದರು. ಮೈಸೂರು ನಗರದ ಸುಣ್ಣದಕೇರಿ ನಿವಾಸಿಯಾಗಿರುವ ಇವರು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸಿ ಅಪಾರವಾದ ಖ್ಯಾತಿ ಗಳಿಸಿದ್ದರು. ಇವರು ಮೈಸೂರು ಅರಮನೆಯಲ್ಲಿ ನಾಡಹಬ್ಬ ದಸರಾ ಉತ್ಸವದ ಕೊನೆಯ ದಿನ ನಡೆಯುವ ವಜ್ರಮುಷ್ಠಿ ಕಾಳಗಕ್ಕೆ ಮೈಸೂರಿನ ಉಸ್ತಾದ್ ಆಗಿ ಪೈಲ್ವಾರನ್ನು ತರಬೇತಿಗೊಳಿಸುತ್ತಿದ್ದರು.

ವಯೋಸಹಜ ಕಾಯಿಲೆ ಹಾಗೂ ಅನಾರೋಗ್ಯದ ಹಿನ್ನೆಲೆ ಬಾಲಾಜಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅವರು ವಿಧಿವಶರಾಗಿದ್ದಾರೆ. ಟೈಗರ್ ಬಾಲಾಜಿ ನಿಧನಕ್ಕೆ ಕುಸ್ತಿ ಪಟುಗಳು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೈಸೂರು ದಸರಾ ಸಂದರ್ಭದಲ್ಲಿ ನಡೆಯುವ ಕುಸ್ತಿಗಳಲ್ಲಿ ಬಾಲಾಜಿ ಜೆಟ್ಟಿ ಅವರ ಹೆಸರು ಅಖಾಡದಲ್ಲಿ ಕೇಳಿಬಂದರೆ ಸಾಕು, ಇಡೀ ಗ್ಯಾಲರಿ ಸಂಭ್ರಮದಿಂದ ಕುಣಿಯುತ್ತಿತ್ತು. ಅಂದಿನ ಕಾಲದ ಘಟಾನುಘಟಿ ಕುಸ್ತಿಪಟುಗಳಿಗೆ ಅವರು ಕಠಿಣ ಸವಾಲು ನೀಡುತ್ತಿದ್ದರು. ತಮ್ಮ ಮತ್ತು ದೈಹಿಕ ದಾರ್ಢ್ಯತೆಯಿಂದಾಗಿ ಮೈಸೂರಿನ ಅಂದಿನ ಕಾಲದ ಅನೇಕ ಯುವಕರಿಗೆ ಅವರು ‘ರೋಲ್ ಮಾಡೆಲ್’ ಆಗಿದ್ದರು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular