HomeLatest Newsಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ FAQ ಗುಣಮಟ್ಟದ ಕಡಲೆಕಾಳು ಉತ್ಪನ್ನ ಖರೀದಿ ಆರಂಭ

ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ FAQ ಗುಣಮಟ್ಟದ ಕಡಲೆಕಾಳು ಉತ್ಪನ್ನ ಖರೀದಿ ಆರಂಭ

ಧಾರವಾಡ : 2025-26 ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ. ಗುಣಮಟ್ಟದ ಕಡಲೆಕಾಳು ಉತ್ಪನ್ನವನ್ನು ಪ್ರತಿ ಕ್ವಿಂಟಾಲ್ಗೆ ರೂ. 5,875 ರಂತೆ ಧಾರವಾಡ ಜಿಲ್ಲೆಯ ರೈತರಿಂದ ಮಾತ್ರ ಖರೀದಿಸಲು ಸರ್ಕಾರದಿಂದ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ಜಿಲ್ಲೆಯ ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾ ಟಾಸ್ಕ್ಪೋರ್ಸ್ ಸಮಿತಿಯ ಅಧ್ಯಕ್ಷರು ಆಗಿರುವ ಪ್ರಭಾರ ಜಿಲ್ಲಾಧಿಕಾರಿ ಭುವನೇಶ ಪಾಟೀಲ ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ. ಗುಣಮಟ್ಟದ ಕಡಲೆಕಾಳು ಉತ್ಪನ್ನವನ್ನು ಖರೀದಿಸಲು ರೈತರ ನೋಂದಣಿಯು 80 ದಿನಗಳವರೆಗೆ ಅಂದರೆ ಜನವರಿ 29, 2026 ರಿಂದ ಏಪ್ರಿಲ್ 18, 2026 ರವರೆಗೆ ಹಾಗೂ ಉತ್ಪನ್ನ ಖರೀದಿಸಲು 90 ದಿನಗಳವರೆಗೆ ಅಂದರೆ ಜನವರಿ 29, 2026 ರಿಂದ ಏಪ್ರಿಲ್ 28, 2026 ರವರೆಗೆ ಅವಧಿಯನ್ನು ನಿಗದಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಕಡಲೆಕಾಳು ಖರೀದಿ ಕೇಂದ್ರಗಳ ವಿವರ: ಧಾರವಾಡ ತಾಲೂಕಿನ ಟಿ.ಎ.ಪಿ.ಸಿ.ಎಮ್.ಎಸ್ (ದೂ:9916259625), ಉಪ್ಪಿನಬೇಟಗೇರಿ ಪಿ.ಕೆ.ಪಿ.ಎಸ್ (ದೂ.:9620048221), ಹುಬ್ಬಳ್ಳಿ ತಾಲೂಕಿನ ಹುಬ್ಬಳ್ಳಿ ಟಿ.ಎ.ಪಿ.ಸಿ.ಎಮ್.ಎಸ್ (ದೂ: 6360506861), ಕೋಳಿವಾಡ ಪಿ.ಕೆ.ಪಿ.ಎಸ್ ಕೋಳಿವಾಡ ನಂ-1(ದೂ: 9945846878), ಹೆಬಸೂರ ಪಿ.ಕೆ.ಪಿ.ಎಸ್ (ದೂ: 9945894870), ನೂಲ್ವಿ ಪಿ.ಕೆ.ಪಿ.ಎಸ್ (ದೂ: 9900896952), ಹಳೇ ಹುಬ್ಬಳ್ಳಿ ಪಿ.ಕೆ.ಪಿ.ಎಸ್ (ದೂ: 9448424876), ನವಲಗುಂದ ತಾಲೂಕಿನ ಹೆಬ್ಬಾಳ ಪಿ.ಕೆ.ಪಿ.ಎಸ್ (ದೂ. 9449065613), ತಿರ್ಲಾಪೂರ ಪಿ.ಕೆ.ಪಿ.ಎಸ್ (ದೂ: 8494801475), ಆರೇಕುರಹಟ್ಟಿ ಪಿ.ಕೆ.ಪಿ.ಎಸ್ (ದೂ. 9845822903), ಶಿರೂರ ಮೊರಬಶಿರೂರ ಎಫ್.ಪಿ.ಓ (ದೂ:9380871883), ಮೊರಬ ಕೆ.ಎಸ್.ಎಫ್.ಪಿ.ಓ (ದೂ: 9620107330), ಮೊರಬ ಪಿ.ಕೆ.ಪಿ.ಎಸ್ (ದೂ: 7204821271), ಹಾಳಕುಸುಗಲ್ ಪಿ.ಕೆ.ಪಿ.ಎಸ್ (ದೂ: 8123836380), ನವಲಗುಂದ ಪಿ.ಕೆ.ಪಿ.ಎಸ್ (ದೂ: 9886491644), ಬೆಳವಟಗಿ ಪಿ.ಕೆ.ಪಿ.ಎಸ್ (ದೂ:6363463089), ನವಲಗುಂದ ಟಿ.ಎ.ಪಿ.ಸಿ.ಎಮ್.ಎಸ್ ಅಣ್ಣಿಗೇರಿ (ದೂ: 8861008191), ಅಣ್ಣಿಗೇರಿ ತಾಲೂಕಿನ ಅಣ್ಣಿಗೇರಿ ಪಿ.ಕೆ.ಪಿ.ಎಸ್ (ದೂ: 7760184669), ಅಣ್ಣಿಗೇರಿ ತಾಲೂಕು ಫಾರ್ಮರ್ ಪ್ರೋಡ್ಯೂಸರ್ ಕಂಪನಿ ಲಿಮಿಟೆಡ್ ಅಣ್ಣಿಗೇರಿ (ದೂ: 9731041200), ಕುಂದಗೋಳ ತಾಲೂಕಿನ ಯರಗುಪ್ಪಿ ಪಿ.ಕೆ.ಪಿ.ಎಸ್ (ದೂ: 9845169206), ಯಲಿವಾಳ ಪಿ.ಕೆ.ಪಿ.ಎಸ್ (ದೂ: 9945163891), ಕುಂದಗೋಳ ಪಿ.ಕೆ.ಪಿ.ಎಸ್ (ದೂ: 9845169206), ಯರೇಬೂದಿಹಾಳ ಪಿ.ಕೆ.ಪಿ.ಎಸ್ (ದೂ:9742553167), ಸಂಶಿ ಎಫ್.ಪಿ.ಓ ಕುಂದಗೋಳ (ದೂ: 7411512065), ಕುಬಿಹಾಳ ಪಿ.ಕೆ.ಪಿ.ಎಸ್ (ದೂ: 9880414263) ಖರೀದಿ ಕೇಂದ್ರಗಳಾಗಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಉತ್ಪನ್ನವನ್ನು ಖರೀದಿಸಲು ಅಗತ್ಯವಿರುವ ದಾಖಲೆಗಳು: ಆಧಾರ ಗುರುತಿನ ಚೀಟಿಯ ಮೂಲ ಪ್ರತಿ ಹಾಗೂ ಅದರ ನಕಲು ಪ್ರತಿ. ಪಹಣಿ ಪತ್ರಿಕೆಯಲ್ಲಿರುವ ಹೆಸರಿನ ರೈತರ ಆಧಾರ ಸಂಖ್ಯೆ ಜೋಡಣೆಗೊಂಡ ಬ್ಯಾಂಕ್ ಖಾತೆ ಪಾಸ್ ಪುಸ್ತಕದ ನಕಲು ಪ್ರತಿ.
ಕಡಲೆಕಾಳು ಖರೀದಿಸಲು ಅನುಸರಿಸುವ ಕ್ರಮಗಳು: ಕಡಲೆಕಾಳು ಉತ್ಪನ್ನದ ಎಫ್.ಎ.ಕ್ಯೂ ಗುಣಮಟ್ಟ ಅಂದರೆ ಚೆನ್ನಾಗಿ ಒಣಗಿರಬೇಕು, ತೇವಾಂಶವು ಶೇ.12 ಕ್ಕಿಂತ ಕಡಿಮೆ ಇರಬೇಕು. ಕಡಲೆಕಾಳು ಉತ್ಪನ್ನವು ಗುಣಮಟ್ಟದ ಗಾತ್ರ, ಬಣ್ಣ ಮತ್ತು ಆಕಾರವನ್ನು ಹೊಂದಿರಬೇಕು.ಗಟ್ಟಿಯಾಗಿರಬೇಕು ಮತ್ತು ಮಣ್ಣಿನಿಂದ ಬೇರ್ಪಡಿಸಲ್ಪಟ್ಟು ಸ್ವಚ್ಛವಾಗಿರಬೇಕು, ಸಾಣಿಗೆಯಿಂದ ಸ್ವಚ್ಛಗೊಳಿಸಿರಬೇಕು. ಕ್ರಿಮಿಕೀಟಗಳಿಂದ ಮುಕ್ತವಾಗಿರಬೇಕು. ರೈತರಿಗೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದವರು ನೀಡುವ ಗೋಣಿ ಚೀಲದಲ್ಲಿ 50 ಕೆ.ಜಿ. ಪ್ರಮಾಣದಲ್ಲಿ ತುಂಬಬೇಕು. ಕಡಲೆಕಾಳು ಪ್ರತಿ ಎಕರೆಗೆ 04 ಕ್ವಿಂಟಾಲ್ ಗರಿಷ್ಟ ಪ್ರಮಾಣ ಹಾಗೂ ಪ್ರತಿ ರೈತರಿಂದ ಗರಿಷ್ಟ 40 ಕ್ವಿಂಟಾಲ್ ಪ್ರಮಾಣದ ಎಫ್ಎಕ್ಯೂ ಗುಣಮಟ್ಟದ ಉತ್ಪನ್ನವನ್ನು ಖರೀದಿಸಲಾಗುವುದು. ಸರ್ಕಾರದ ಬೆಂಬಲ ಬೆಲೆ ಪ್ರತಿ ಕ್ವಿಂಟಾಲ್ಗೆ ರೂ.5,875 ರಂತೆ ಕಡಲೆಕಾಳನ್ನು ಖರೀದಿಸಲಾಗುವುದು.

ಸರ್ಕಾರಿ ರಜೆ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ಮಾತ್ರ ಖರೀದಿಸಲಾಗುವುದು. ಯಾವುದೇ ಸಂದರ್ಭದಲ್ಲಿ ರೈತರು ಮಧ್ಯವರ್ತಿಗಳ ಮೊರೆ ಹೋಗಬಾರದು. ಇದರ ಉಪಯೋಗವನ್ನು ರೈತರೇ ನೇರವಾಗಿ ಪಡೆಯಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಧಾರವಾಡ, ಹುಬ್ಬಳ್ಳಿ, ಕುಂದಗೋಳ ಮತ್ತು ಅಣ್ಣಿಗೇರಿ ತಾಲೂಕಾ ತಹಶೀಲ್ದಾರ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಯವರನ್ನು ಹಾಗೂ ಶಾಖಾ ವ್ಯವಸ್ಥಾಪಕರು, ಹುಬ್ಬಳ್ಳಿ ಶಾಖೆಯ ಕ.ರಾ.ಸ.ಮಾ.ಮ.ಮಂಡಳ (ದೂರವಾಣಿ ಸಂಖ್ಯೆ:0836-2004419) ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ಟಾಸ್ಕ್ಪೋರ್ಸ್ ಸಮಿತಿಯ ಅಧ್ಯಕ್ಷರು ಆಗಿರುವ ಪ್ರಭಾರ ಜಿಲ್ಲಾಧಿಕಾರಿ ಭುವನೇಶ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular