HomeIndiaಈಗ ಲೋಕಸಭೆ ಚುನಾವಣೆ ನಡೆದರೆ ಯಾರಿಗೆ ಅಧಿಕಾರ?: ಅಚ್ಚರಿಯ ಸಮೀಕ್ಷೆ ವರದಿ!

ಈಗ ಲೋಕಸಭೆ ಚುನಾವಣೆ ನಡೆದರೆ ಯಾರಿಗೆ ಅಧಿಕಾರ?: ಅಚ್ಚರಿಯ ಸಮೀಕ್ಷೆ ವರದಿ!

5 ರಾಜ್ಯಗಳ ವಿಧಾನಸಭೆ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್ ತಯಾರಿ ನಡೆಸಿದೆ. ಆದರೆ ಈಗ ಲೋಕಸಭೆ ಚುನಾವಣೆ ನಡೆದರೆ ಯಾರಿಗೆ ಅಧಿಕಾರ ಸಿಗಲಿದೆ?. 2024ರ ಚುನಾವಣೆ ಫಲಿತಾಂಶಕ್ಕಿಂತ ಹೆಚ್ಚಿನ ಸೀಟು ಯಾರಿಗೆ ಬರಲಿದೆ?.

 India Today-CVoter Mood of the Nation ಸಮೀಕ್ಷೆ ವರದಿ ಜನವರಿ 2026 ಪ್ರಕಟವಾಗಿದೆ. ಸಮೀಕ್ಷೆ ವರದಿಯ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಎನ್‌ಡಿಎ ಮೈತ್ರಿಕೂಟದ ಪ್ರಭಾವ ಹೆಚ್ಚಿದ್ದು 352 ಸೀಟುಗಳಲ್ಲಿ ಮೈತ್ರಿಕೂಟ ಜಯಗಳಿಸಲಿದೆ. ಬಿಜೆಪಿ ಏಕಾಂಗಿಯಾಗಿ 287 ಸೀಟು ಗೆಲ್ಲಲಿದೆ.

ಜಾಗತಿಕ ವಿದ್ಯಮಾನಗಳು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆಗಳ ನಡುವೆಯೂ ಪ್ರಧಾನಿ ನರೇಂದ್ರ ಮೋದಿ ಪ್ರಭಾವ ಹೆಚ್ಚಾಗುತ್ತಿದೆ ಎಂದು ಸಮೀಕ್ಷೆ ಅಂದಾಜಿಸಿದೆ. 2025ರ ದೆಹಲಿ, ಬಿಹಾರ ವಿಧಾನಸಭೆ ಚುನಾವಣೆ ಮತ್ತು ಬೃಹ್ಮನ್ ಮುಂಬೈ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶಗಳ ಬಳಿಕ ನಡೆದ ಸಮೀಕ್ಷೆ ಇದಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಮೀಕ್ಷೆಯ ವಿವರಗಳು: 2024ರ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ 234 ಸೀಟುಗಳಲ್ಲಿ ಜಯಗಳಿತ್ತು. ಆದರೆ ಈಗ ಲೋಕಸಭೆ ಚುನಾವಣೆ ನಡೆದರೆ ಇಂಡಿಯಾ ಮೈತ್ರಿಕೂಟ ಗೆಲ್ಲುವುದು 182 ಸೀಟುಗಳನ್ನು ಮಾತ್ರ. ಆಗಸ್ಟ್ 2025ರ ಇದೇ ಸಮೀಕ್ಷೆಯಲ್ಲಿ ಮೈತ್ರಿಕೂಟ 208 ಸೀಟು ಗೆಲ್ಲಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ 2026ರ ಜನವರಿಯಲ್ಲಿ ಸೀಟುಗಳ ಸಂಖ್ಯೆ ಇನ್ನೂ ಕಡಿಮೆಯಾಗಿದೆ.

ಬಿಜೆಪಿ ನೇತೃತ್ವದ ಎನ್‌ಡಿಎ ಪಶ್ಚಿಮ ಬಂಗಾಳ, ತಮಿಳುನಾಡು, ಪುದುಚೇರಿ, ಕೇರಳ ಮತ್ತು ಅಸ್ಸಾಂ ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವಾಗಲೇ ಈ ಸಮೀಕ್ಷೆಯ ವರದಿ ಬಂದಿದೆ. ಈ ರಾಜ್ಯಗಳ ಪೈಕಿ ಬಿಜೆಪಿ ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಅಧಿಕಾರದಲ್ಲಿಲ್ಲ.

2024ರ ಚುನಾವಣೆಯಲ್ಲಿ ಈ ಬಾರಿ 400 ಎಂಬ ಬಿಜೆಪಿ ಘೋಷಣೆಯ ಹೊರತಾಗಿಯೂ ಬಿಜೆಪಿ ಸರಳ ಬಹುಮತ ಪಡೆಯಲು ವಿಫಲವಾಗಿತ್ತು. 271 ಮ್ಯಾಜಿಕ್ ನಂಬರ್ ತಲುಪದ ಬಿಜೆಪಿ 240 ಸೀಟು ಗೆದ್ದಿತ್ತು. ಎನ್‌ಡಿಎ ಮೈತ್ರಿಕೂಟ ಪಕ್ಷಗಳ ಸಹಾಯದಿಂದ ನರೇಂದ್ರ ಮೋದಿ ನೇತೃತ್ವದಲ್ಲಿ 3.0 ಸರ್ಕಾರ ರಚನೆ ಮಾಡಿತ್ತು.

ಕಾಂಗ್ರೆಸ್ ಏಕಾಂಗಿಯಾಗಿ 2024ರಲ್ಲಿ 99 ಸೀಟುಗಳನ್ನು ಗೆದ್ದಿತ್ತು. ಆದರೆ ಈಗ ಕಾಂಗ್ರೆಸ್ ಹರ್ಯಾಣ, ಮಹಾರಾಷ್ಟ್ರ, ದೆಹಲಿ, ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಸೋತು ಹೋಗಿದೆ. ಆದ್ದರಿಂದ ಪಕ್ಷ ಗೆಲ್ಲುವ ಸೀಟುಗಳ ಸಂಖ್ಯೆಯಲ್ಲಿ ಈಗ ಕಡಿಮೆಯಾಗಲಿದೆ.

ಈಗ ಚುನಾವಣೆ ನಡೆದರೆ ಬಿಜೆಪಿ ಏಕಾಂಗಿಯಾಗಿ 287 ಸೀಟು ಗೆಲ್ಲುವ ಮೂಲಕ ಸರ್ಕಾರ ರಚಿಸಲಿದೆ ಎಂದು ಸಮೀಕ್ಷೆ ಹೇಳಿದೆ. 2025ರ ಆಗಸ್ಟ್ ಸಮೀಕ್ಷೆಯಲ್ಲಿ ಬಿಜೆಪಿ ಏಕಾಂಗಿಯಾಗಿ 260 ಸೀಟು ಗೆಲ್ಲಲಿದೆ ಎಂದು ಅಂದಾಜಿಸಲಾಗಿತ್ತು.

ಈಗ ಲೋಕಸಭೆ ಚುನಾವಣೆ ನಡೆದರೆ ಕಾಂಗ್ರೆಸ್ ಏಕಾಂಗಿಯಾಗಿ 80 ಸೀಟು ಗೆಲ್ಲಲಿದೆ. ಆಗಸ್ಟ್ 2025ರ ಸಮೀಕ್ಷೆಯಲ್ಲಿ ಕಾಂಗ್ರೆಸ್ 97 ಸೀಟು ಗೆಲ್ಲಲಿದೆ ಎಂದು ಅಂದಾಜಿಸಲಾಗಿತ್ತು.  ‘ಬ್ರಾಂಡ್ ಮೋದಿ; ಎನ್‌ಡಿಎ ಮೈತ್ರಿಕೂಟದ ಬದುದೊಡ್ಡ ಶಕ್ತಿ ಎಂದು ಸಮೀಕ್ಷೆ ಹೇಳಿದೆ.

ಲೋಕಸಭೆ ಚುನಾವಣೆ ಈಗ ನಡೆದರೆ ಎನ್‌ಡಿಎ ಮತಗಳಿಕೆ ಪ್ರಮಾಣ ಶೇ 47 ಎಂದು ಅಂದಾಜಿಸಲಾಗಿದೆ. ಇದು ಆಗಸ್ಟ್‌ನಲ್ಲಿ ಶೇ 45ರಷ್ಟಿತ್ತು. ಇಂಡಿಯಾ ಮೈತ್ರಿಕೂಟ ಈಗ ಶೇ 39ರಷ್ಟು ಮತಗಳಿಸಲಿದೆ ಎಂದು ಸಮೀಕ್ಷೆ ವರದಿ ಹೇಳಿದೆ.

ಈಗ ನಡೆಯುವ 5 ರಾಜ್ಯಗಳ ಚುನಾವಣೆಗಳ ಪೈಕಿ ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರಕ್ಕೆ ಕಾಂಗ್ರೆಸ್ ಬೆಂಬಲವಿದೆ. ಕೇರಳ, ಪಶ್ಚಿಮ ಬಂಗಾಳ, ಪುದುಚೇರಿ, ಅಸ್ಸಾಂ ರಾಜ್ಯಗಳಲ್ಲಿ ಕಾಂಗ್ರೆಸ್ ಆಡಳಿತದಲ್ಲಿಲ್ಲ, ಸರ್ಕಾರಕ್ಕೆ ಬೆಂಬಲ ನೀಡಿಲ್ಲ. ಆದ್ದರಿಂದ 5 ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ತುಂಬಲಿದೆಯೇ? ಎಂದು ಕಾದು ನೋಡಬೇಕಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular