HomeLatest News‘ಬಿಗ್ ಬಾಸ್’ ವಿನ್ನರ್ ಗಿಲ್ಲಿ ನಟಗೆ ಶಾಸಕ ಜನಾರ್ದನ ರೆಡ್ಡಿ ಅಭಿನಂದನೆ

‘ಬಿಗ್ ಬಾಸ್’ ವಿನ್ನರ್ ಗಿಲ್ಲಿ ನಟಗೆ ಶಾಸಕ ಜನಾರ್ದನ ರೆಡ್ಡಿ ಅಭಿನಂದನೆ

ಬೆಂಗಳೂರು: ‘ಬಿಗ್ ಬಾಸ್’ ವಿನ್ನರ್ ಗಿಲ್ಲಿ ನಟ ಅವರಿಗೆ ಮಾಜಿ ಸಚಿವ ಜನಾರ್ದನ ರೆಡ್ಡಿ ಅಭಿನಂದಿಸಿದ್ದಾರೆ.

ಕನ್ನಡದ ಹೆಸರಂತ ರಿಯಾಲಿಟಿ ಶೋ ಬಿಗ್ ಬಾಸ್ 12ರ ಆವೃತ್ತಿಯ ವಿಜೇತ, ರಾಜ್ಯ ಅಲ್ಲದೆ ದೇಶ- ವಿದೇಶದಾದ್ಯಂತ ತನ್ನ ಮಾತಿನಿಂದಲೇ ಮನೆ ಮನೆಗಳ ಮಾತಾಗಿ ನಾಡಿನ ಜನರ ಹೃದಯ ಗೆದ್ದ ಗಿಲ್ಲಿ ನಟ ಅವರನ್ನು ನಮ್ಮ ನಿವಾಸದಲ್ಲಿ ನನ್ನ ಪತ್ನಿ ಲಕ್ಷ್ಮಿ ಅರುಣ ಅವರೊಂದಿಗೆ ಭೇಟಿ ಮಾಡಿ, ಆತ್ಮೀಯವಾಗಿ ಸನ್ಮಾನಿಸಿ, ಮುಂದಿನ ಅವರ ಕಲಾಜೀವನವು ಯಶಸ್ಸಿನಿಂದ ಕೂಡಿರಲಿ ಎಂದು ಶುಭ ಹಾರೈಸಿದೆವು ಎಂದು ಜನಾರ್ದನ ರೆಡ್ಡಿ ತಿಳಿಸಿದ್ದಾರೆ.

‘ಬಿಗ್ ಬಾಸ್’ 12ರ ವಿಜೇತ ಗಿಲ್ಲಿ ನಟ ಅವರ ನಿಜವಾದ ಹೆಸರು ನಟರಾಜ್. ಮಂಡ್ಯ ಜಿಲ್ಲೆಯ ದಡದಪುರದ ರೈತ ಕುಟುಂಬದಿಂದ ಬಂದ ಗಿಲ್ಲಿ ನಟ ತಮ್ಮ ಕಾಮಿಡಿ ಮತ್ತು ಸರಳ ವ್ಯಕ್ತಿತ್ವದಿಂದ ಜನಪ್ರಿಯರಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

‘ಬಿಗ್ ಬಾಸ್’ನಲ್ಲಿ ಅವರು 40 ಕೋಟಿಗೂ ಅಧಿಕ ವೋಟ್ ಪಡೆದು ಗೆಲುವು ಸಾಧಿಸಿದ್ದಾರೆ. ಶಿವರಾಜ್ ಕುಮಾರ್, ಜಗ್ಗೇಶ್, ಮತ್ತು ಇತರ ಪ್ರಮುಖ ನಟರಿಂದ ಸನ್ಮಾನಿತರಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಮತ್ತು ಗೃಹ ಸಚಿವ ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular