HomeLatest Newsಅಪ್ಪ, ನಾನು ಡಿಸಿಎಂ ಅಜಿತ್ ಪವಾರ್ ಅವರ ವಿಮಾನದಲ್ಲಿ ಹೋಗುತ್ತಿದೇನೆ: ನಾಳೆ ಊರಿಗೆ ಬರುತ್ತೇನೆ: ಅಪಘಾತಕ್ಕೂ...

ಅಪ್ಪ, ನಾನು ಡಿಸಿಎಂ ಅಜಿತ್ ಪವಾರ್ ಅವರ ವಿಮಾನದಲ್ಲಿ ಹೋಗುತ್ತಿದೇನೆ: ನಾಳೆ ಊರಿಗೆ ಬರುತ್ತೇನೆ: ಅಪಘಾತಕ್ಕೂ ಮುನ್ನ ತಂದೆಯ ಜೊತೆ ಫ್ಲೈಟ್ ಅಟೆಂಡೆಂಟ್ ಪಿಂಕಿ ಕೊನೆಯ ಮಾತು

ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಬಾರಾಮತಿಯಲ್ಲಿ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅಜಿತ್ ಪವಾರ್ ಅವರೊಂದಿಗೆ ವಿಮನದಲ್ಲಿದ್ದ ಪೈಲಟ್, ಫ್ಲೈಟ್ ಅಟೆಂಡೆಂಟ್ ಇಬ್ಬರು ಭದ್ರತಾ ಸಿಬ್ಬಂದಿಗಳು ಸೇರಿ 6 ಜನರು ದುರ್ಮರಣ ಹೊಂದಿದ್ದಾರೆ. ವಿಮಾನದಲ್ಲಿ ಫ್ಲೈಟ್ ಅಟೆಂಡೆಂಟ್ ಆಗಿದ್ದ ಪಿಂಕಿ ಮಾಲಿ ತನ್ನ ತಂದೆಯ ಜೊತೆ ಮಾತನಾಡಿದ್ದ ಕೊನೆಯ ಮಾತುಗಳು ವೈರಲ್ ಆಗಿವೆ.

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸಾವಿಗೆ ಕಾರಣವಾದ ವಿಮಾನದಲ್ಲಿ ಇಬ್ಬರು ಮಹಿಳಾ ಪೈಲಟ್ ಗಳು ಇದ್ದರು. ಅವರು ಕೂಡ ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಇಬ್ಬರು ಪೈಲಟ್ ಗಳ ಪೈಕಿ ಓರ್ವ ಪೈಲಟ್ ಪಿಂಕಿ ಮಾಲಿ ವಿಮಾನ ಹಾರಾಟಕ್ಕೂ ಮುನ್ನ ತನ್ನ ತಂದೆಯ ಜೊತೆ ಮಾತನಾಡಿದ್ದರು. ತಂದೆ ಶಿವಕುಮಾರ್ ಗೆ ಕರೆ ಮಾಡಿದ್ದ ಪುತ್ರಿ ಪಿಂಕಿ ನಾಳೆ ಊರಿಗೆ ಬರುವುದಾಗಿ ತಿಳಿಸಿದ್ದರು.

ಮುಂಬೈನ ವರ್ಲಿ ನಿವಾಸಿಯಾಗಿರುವ ಪಿಂಕಿ ಮಾಲಿ, ವಿಮಾನ ಪ್ರಯಾಣಕ್ಕೂ ಮುನ್ನ ತಂದೆ ಶಿವಕುಮಾರ್ ಅವರಿಗೆ ಕರೆ ಮಾಡಿ, ಅಪ್ಪ, ನಾನು ಡಿಸಿಎಂ ಅಜಿತ್ ಪವಾರ್ ಅವರ ವಿನದಲ್ಲಿ ಹೋಗುತ್ತಿದ್ದೇನೆ. ಬಾರಮತಿಗೆ ಹೋಗುತ್ತಿದ್ದೇನೆ. ಅವರನ್ನು ಬಿಟ್ಟು ಬಂದ ಬಳಿಕ ನಾಂದೇಡ್ (ಸ್ವಂತ ಊರು)ಗೆ ಹೋಗುತ್ತೇನೆ. ನಾಳೆ ಊರುಗೆ ಬರುತ್ತೇನೆ. ಆಗ ಮಾತನಾಡೊಣ ಎಂದು ಹೇಳಿದ್ದರು. ಪಿಂಕಿ ತನ್ನ ತಂದೆಯ ಜೊತೆ ಫೋನ್ ಸಂಭಾಷಣೆಯಲ್ಲಿ ಆಡಿದ್ದ ಮಾತುಗಳು ಹೊರಬಿದ್ದಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪಿಂಕಿ ಸಾವಿನ ಬಗ್ಗೆ ಕಣ್ಣೀರಿಟ್ಟಿರುವ ತಂದೆ ಶಿವಕುಮಾರ್, ನಾನು ಮಗಳಿಗೆ ಹೇಳಿದ್ದೆ. ನಾಳೆ ಸಿಕ್ಕಾಗ ಮಾತನಾಡೋಣ ಎಂದು ಆದರೆ ಆ ನಾಳೆ ಮತ್ತೆ ಎಂದಿಗೂ ಬರುವುದೇ ಇಲ್ಲ ಎಂದು ಗದ್ಗದಿತರಾಗಿದ್ದಾರೆ.

ಇತ್ತೀಚೆಗೆ ಡಿಸಿಎಂ ಅಜಿತ್ ಪವಾರ್ ಅವರ ವಿಮಾನದಲ್ಲಿ ಪಿಂಕಿ ಹಲವು ಪ್ರವಾಸಗಳಲ್ಲಿ ಹೋಗಿಬರುತ್ತಿದ್ದಳು. ನಾನು ನನ್ನ ಮಗಳನ್ನು ಕಳೆದುಕೊಂಡಿದ್ದೇನೆ. ನಿಜವಾಗಿ ಏನಾಗಿದೆ ಎಂಬುದು ನನಗೆ ಗೊತ್ತಿಲ್ಲ. ಕಾರಣ ನನಗೆ ಯಾವುದೇ ತಾಂತ್ರಿಕ ಜ್ಞಾನವಿಲ್ಲ ಎಂದಿದಾರೆ. ನನ್ನ ಮಗಳ ಅಂತ್ಯಕ್ರಿಯೆಯನ್ನು ಗೌರವದಿಂದ ನಡೆಸಲು ನನಗೆ ಆಕೆಯ ಮೃತದೇಹ ಬೇಕು. ನಾನು ಬಯಸುವುದು ಅಷ್ಟೇ ಎಂದು ಕಣ್ಣೀರಿಟ್ಟಿದ್ದಾರೆ.

ಪುಣೆಯ ಬಾರಾಮತಿ ವಿಮಾನ ನಿಲ್ದಾಣದ ಬಳಿ ಬುಧವಾರ ಬೆಳಿಗ್ಗೆ ಡಿಸಿಎಂ ಅಜಿತ್ ಪವಾರ್ ಇದ್ದ ವಿಮಾನ ಲ್ಯಾಂಡಿಂಗ್ ವೇಳೆ ಪತನಗೊಂಡು ಅಜಿತ್ ಪವಾಸ್ ಸೇರಿ ಆರು ಜನರು ಮೃತಪಟ್ಟಿದ್ದರು.

For Latest News Updates, Join Our Whatsapp Community🚩
RELATED ARTICLES

Most Popular