ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಏರುತ್ತಿರುವುದು ಎಲ್ಲರ ಆತಂಕಕ್ಕೆ ಕಾರಣವಾಗಿದೆ. ಎಷ್ಟೇ ಜಾಗರೂಕತೆಯಿಂದ ಗಾಡಿ ಓಡಿಸಿದರೂ, ವಿಧಿಯಾಟ ಅಥವಾ ನಕಾರಾತ್ಮಕ ಶಕ್ತಿಗಳ ಪ್ರಭಾವದಿಂದ ಅನಾಹುತಗಳು ಸಂಭವಿಸುತ್ತವೆ ಎಂಬ ನಂಬಿಕೆ ಭಾರತೀಯ ಸಮಾಜದಲ್ಲಿದೆ. ಮನೆಗೆ ವಾಸ್ತು ನೋಡುವಂತೆ, ನಾವು ದಿನನಿತ್ಯ ಬಳಸುವ ವಾಹನಗಳಿಗೂ ವಾಸ್ತು ಶಾಸ್ತ್ರವನ್ನು ಅಳವಡಿಸಿಕೊಳ್ಳುವುದು ಸುಖಮಯ ಮತ್ತು ಸುರಕ್ಷಿತ ಪ್ರಯಾಣಕ್ಕೆ ದಾರಿಯಾಗುತ್ತದೆ.
ನಿಮ್ಮ ಪ್ರಯಾಣದಲ್ಲಿ ಎದುರಾಗುವ ಅಡೆತಡೆಗಳನ್ನು ನಿವಾರಿಸಲು ಮತ್ತು ನಕಾರಾತ್ಮಕ ಶಕ್ತಿಯನ್ನು ಓಡಿಸಲು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕಾರಿನಲ್ಲಿ ಇರಲೇಬೇಕಾದ ಆ ಮ್ಯಾಜಿಕಲ್ 6 ವಸ್ತುಗಳು ಯಾವುವು ಗೊತ್ತಾ? ಇಲ್ಲಿದೆ ನೋಡಿ ಡಿಟೇಲ್ಸ್:
ಗಣೇಶನ ವಿಗ್ರಹ:
ಯಾವುದೇ ಹೊಸ ಕೆಲಸ ಅಥವಾ ಶುಭಾರಂಭಕ್ಕೆ ನಾವು ಮೊದಲು ಪ್ರಾರ್ಥಿಸುವುದು ಅಡೆತಡೆಗಳನ್ನು ನಿವಾರಿಸುವ ‘ವಿಘ್ನರಾಜ’ ಗಣಪತಿಯನ್ನು. ಅದೇ ರೀತಿ, ವಾಸ್ತುಶಾಸ್ತ್ರದ ಪ್ರಕಾರ ನಿಮ್ಮ ಕಾರಿನ ಡ್ಯಾಶ್ಬೋರ್ಡ್ ಮೇಲೆ ಗಣೇಶನ ಪುಟ್ಟ ವಿಗ್ರಹವನ್ನು ಪ್ರತಿಷ್ಠಾಪಿಸುವುದು ಅತ್ಯಂತ ಶುಭದಾಯಕ ಎಂದು ಪರಿಗಣಿಸಲಾಗುತ್ತದೆ.
ಪ್ರಯಾಣದ ಹಾದಿಯಲ್ಲಿ ಎದುರಾಗುವ ಅನಿರೀಕ್ಷಿತ ಅಡಚಣೆಗಳು ಮತ್ತು ತಾಂತ್ರಿಕ ಸಮಸ್ಯೆಗಳನ್ನು ಗಣೇಶನು ದೂರ ಮಾಡುತ್ತಾನೆ ಎಂಬ ಅಚಲ ನಂಬಿಕೆ ಇದೆ.ಕಾರಿನೊಳಗೆ ಮನೆಮಾಡಿರುವ ಕೆಟ್ಟ ದೃಷ್ಟಿ ಅಥವಾ ನಕಾರಾತ್ಮಕ ಶಕ್ತಿಯನ್ನು ಹೊರಹಾಕಿ, ಸಕಾರಾತ್ಮಕ ಕಂಪನಗಳನ್ನು (Positive Vibrations) ಸೃಷ್ಟಿಸಲು ಗಣಪತಿಯ ಸಾನ್ನಿಧ್ಯ ಸಹಕಾರಿ.ಗಣೇಶನ ವಿಗ್ರಹವು ಕೇವಲ ಅಲಂಕಾರಿಕ ವಸ್ತುವಲ್ಲ, ಅದು ಚಾಲಕನಿಗೆ ಮಾನಸಿಕ ಧೈರ್ಯ ನೀಡಿ, ಪ್ರಯಾಣವನ್ನು ಶಾಂತಿಯುತ ಮತ್ತು ಸುರಕ್ಷಿತವಾಗಿಸುತ್ತದೆ.
ಕಲ್ಲುಪ್ಪು:
ವಾಸ್ತು ಶಾಸ್ತ್ರದಲ್ಲಿ ಉಪ್ಪಿಗೆ ವಿಶಿಷ್ಟ ಸ್ಥಾನವಿದೆ. ಇದು ಕೇವಲ ಅಡುಗೆಗೆ ರುಚಿ ನೀಡುವುದಷ್ಟೇ ಅಲ್ಲ, ಸುತ್ತಮುತ್ತಲ ಪರಿಸರದಲ್ಲಿರುವ ಕೆಟ್ಟ ದೃಷ್ಟಿ ಮತ್ತು ನಕಾರಾತ್ಮಕತೆಯನ್ನು ಹೋಗಲಾಡಿಸುವ ಶಕ್ತಿಯನ್ನು ಹೊಂದಿದೆ.ಸ್ವಲ್ಪ ಕಲ್ಲುಪ್ಪನ್ನು ಅಡುಗೆ ಸೋಡಾದೊಂದಿಗೆ ಬೆರೆಸಿ, ಒಂದು ಸಣ್ಣ ಕಾಗದದ ತುಂಡಿನಲ್ಲಿ ಕಟ್ಟಿ ನಿಮ್ಮ ಕಾರಿನ ಸೀಟಿನ ಕೆಳಗೆ ಇರಿಸಿ.ಈ ಮಿಶ್ರಣವು ಕಾರಿನೊಳಗಿನ ದುಷ್ಟ ಶಕ್ತಿಗಳ ಪ್ರಭಾವವನ್ನು ನಿಯಂತ್ರಿಸುತ್ತದೆ. ಇದು ಚಾಲಕನ ಮನಸ್ಸನ್ನು ಪ್ರಶಾಂತವಾಗಿರಿಸಲು ಸಹಾಯ ಮಾಡುತ್ತದೆ ಇದರಿಂದಾಗಿ ಲಾಂಗ್ ಜರ್ನಿಗಳು ಕೂಡ ಯಾವುದೇ ಕಿರಿಕಿರಿ ಇಲ್ಲದೆ ಶಾಂತಿಯುತವಾಗಿ ಸಾಗುತ್ತವೆ.
ಕಪ್ಪು ಆಮೆ
ಆಮೆಯು ಹಿಂದೂ ಧರ್ಮ ಮತ್ತು ವಾಸ್ತುಶಾಸ್ತ್ರದಲ್ಲಿ ದೀರ್ಘಾಯುಷ್ಯ ಹಾಗೂ ತಾಳ್ಮೆಯ ಸಂಕೇತ. ಕಾರಿನಲ್ಲಿ ಕಪ್ಪು ಆಮೆಯನ್ನು ಇಟ್ಟುಕೊಳ್ಳುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರ ಆಯ್ಕೆಯಾಗಿದೆ.ಆಮೆಯು ನಿಧಾನವಾಗಿ ಸಾಗಿದರೂ ಸ್ಥಿರವಾಗಿರುವ ಪ್ರಾಣಿ. ಇದು ಚಾಲನೆ ಮಾಡುವಾಗ ಚಾಲಕನಿಗೆ ತಾಳ್ಮೆ ಮತ್ತು ಸ್ಥಿರವಾದ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ನೀಡುತ್ತದೆ.ಕಾರಿನಲ್ಲಿ ಸಣ್ಣ ಕಪ್ಪು ಆಮೆಯ ಪ್ರತಿಕೃತಿಯನ್ನು ಇಟ್ಟುಕೊಳ್ಳುವುದರಿಂದ ಸಕಾರಾತ್ಮಕ ಶಕ್ತಿ (Positive Energy) ವೃದ್ಧಿಯಾಗುತ್ತದೆ.
ನಿಂಬೆ-ಹಸಿರು ಮೆಣಸಿನಕಾಯಿ
ಭಾರತೀಯ ಸಂಪ್ರದಾಯದಲ್ಲಿ ನಿಂಬೆ ಮತ್ತು ಹಸಿರು ಮೆಣಸಿನಕಾಯಿಯನ್ನು ಕೇವಲ ಆಹಾರಕ್ಕೆ ಮಾತ್ರವಲ್ಲ, ಕೆಟ್ಟ ದೃಷ್ಟಿಯಿಂದ ರಕ್ಷಿಸಿಕೊಳ್ಳಲು ಶತಮಾನಗಳಿಂದ ಬಳಸಲಾಗುತ್ತಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕಾರಿನ ಒಳಭಾಗದ ಕನ್ನಡಿಯ (Rearview Mirror) ಹತ್ತಿರ ನಿಂಬೆ ಮತ್ತು ಏಳು ಮೆಣಸಿನಕಾಯಿಗಳನ್ನು ನೇತುಹಾಕುವುದರಿಂದ ಇತರರ ಕೆಟ್ಟ ದೃಷ್ಟಿ ವಾಹನದ ಮೇಲೆ ಬೀಳುವುದಿಲ್ಲ.
ಇದು ಹೊರಗಿನಿಂದ ಬರುವ ನಕಾರಾತ್ಮಕ ಶಕ್ತಿಗಳನ್ನು ಹೀರಿಕೊಂಡು, ಅಪಘಾತಗಳಂತಹ ಅಹಿತಕರ ಘಟನೆಗಳಿಂದ ವಾಹನವನ್ನು ಕಾಪಾಡುತ್ತದೆ ಎಂಬ ಅಚಲ ನಂಬಿಕೆ ಇದೆ.
ಹನುಮಂತನ ವಿಗ್ರಹ
ಶಕ್ತಿ, ಭಕ್ತಿ ಮತ್ತು ರಕ್ಷಣೆಯ ದೇವರೆಂದೇ ಕರೆಯಲ್ಪಡುವ ಹನುಮಂತನ ಉಪಸ್ಥಿತಿ ಎಂತಹ ಭಯವನ್ನಾದರೂ ದೂರ ಮಾಡುತ್ತದೆ. ಇದೇ ಕಾರಣಕ್ಕೆ ಹೆಚ್ಚಿನ ವಾಹನ ಸವಾರರ ಮೊದಲ ಆಯ್ಕೆ ‘ಆಂಜನೇಯ.ಕಾರಿನಲ್ಲಿ ಹನುಮಂತನ ಸಣ್ಣ ಮೂರ್ತಿ ಅಥವಾ ಫೋಟೋವನ್ನು ಇಟ್ಟುಕೊಳ್ಳುವುದು ಒಂದು ರಕ್ಷಣಾ ಕವಚವಿದ್ದಂತೆ. ಇದು ಚಾಲಕನಲ್ಲಿ ಆತ್ಮವಿಶ್ವಾಸ ಮತ್ತು ಧೈರ್ಯವನ್ನು ತುಂಬುತ್ತದೆ.
ಆಂಜನೇಯನ ಸಾನ್ನಿಧ್ಯವಿರುವಲ್ಲಿ ದುಷ್ಟ ಶಕ್ತಿಗಳು ಸುಳಿಯುವುದಿಲ್ಲ ಎಂದು ನಂಬಲಾಗಿದೆ. ವಿಶೇಷವಾಗಿ ದೀರ್ಘ ಪ್ರಯಾಣಗಳಲ್ಲಿ ಅಥವಾ ರಾತ್ರಿ ವೇಳೆ ಚಾಲನೆ ಮಾಡುವಾಗ ಹನುಮಂತನ ವಿಗ್ರಹವು ಮನಸ್ಸಿಗೆ ನೆಮ್ಮದಿ ಮತ್ತು ಸುರಕ್ಷತೆಯ ಭಾವವನ್ನು ನೀಡುತ್ತದೆ.

