ರಾಯಚೂರು: ಕೌಟುಂಬಿಕ ಕಲಹ ಕಾರಣದಿಂದ ಗರ್ಭಿಣಿ ಸೊಸೆಯ ಕತ್ತು ಸೀಳಿ ಮಾವ ಹತ್ಯೆ ಮಾಡಿದ ಘಟನೆ ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಅಣಗಿ ಗ್ರಾಮದಲ್ಲಿ ನಡೆದಿದೆ.
ರೇಖಾ(25) ಕೊಲೆಯಾದ ಮಹಿಳೆ. 4 ತಿಂಗಳ ಗರ್ಭಿಣಿ ರೇಖಾ ಕುತ್ತಿಗೆಗೆ ಮಾವ ಸಿದ್ದಪ್ಪ ಚಾಕುವಿನಿಂದ ಇರಿದಿದ್ದಾನೆ. ಈ ವೇಳೆ ಪ್ರಾಣ ಉಳಿಸಿಕೊಳ್ಳಲು ಮನೆಯಿಂದ ಹೊರಬಂದ ರೇಖಾ ನರಳಾಡಿ ಪ್ರಾಣ ಬಿಟ್ಟಿದ್ದಾರೆ. ಕೃತ್ಯವೆಸಗಿ ಪರಾರಿಯಾಗಿದ್ದ ಆರೋಪಿ ಸಿದ್ದಪ್ಪನನ್ನು ಕವಿತಾಳ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

