ಕೃತಕ ಬುದ್ಧಿಮತ್ತೆ (AI) ಬಂದ ಬಳಿಕ ಕಂಪನಿಗಳ ನೇಮಕಾತಿ ನಿಯಮಗಳಲ್ಲಿ ಬದಲಾವಣೆಯಾಗಿದೆ. ಈಗ ಓಪನ್ಎಐ ಸಿಇಒ ಸ್ಯಾಮ್ ಆಲ್ಟ್ಮನ್ ಕಂಪನಿಗಳ ಹೊಸ ನೇಮಕಾತಿ ಕುರಿತು ಹೇಳಿರುವ ಮಾತುಗಳು ವೈರಲ್ ಆಗಿವೆ.
ಕಂಪನಿಗಳು ಹೊಸ ಉದ್ಯೋಗಗಳನ್ನು ಎಷ್ಟು ಬೇಗ ಸೇರಿಸಿಕೊಳ್ಳುತ್ತವೆ? ಎಂಬುದನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ. ಎಐ ಈಗಾಗಲೇ ಕೈಗಾರಿಕೆ ಆಧಾರಿತ ನೇಮಕಾತಿಗಳ ಮೇಲೆ ಪರಿಣಾಮ ಬೀರಿದೆ.
ಮೊದಲು ಡೆವಲಪರ್ಗಳ ನೇಮಕಾತಿ ಪ್ರಕ್ರಿಯೆಯ ಮೇಲೆ ಎಐ ಪ್ರಭಾವ ಬೀರಿತು. ಆದರೆ ಕಂಪನಿಯು ನೇಮಕಾತಿ ಸಂಪೂರ್ಣವಾಗಿ ಸ್ಥಗಿತಗೊಳಿಸಿ ಎಐ ಮೊರೆ ಹೋಗಲು ಸಾಧ್ಯವಿಲ್ಲ. ಬದಲಿಗೆ, ಅವುಗಳ ಗಮನ ಈಗ ಎಐ ಬಳಿಕ ಚಿಕ್ಕ ಚಿಕ್ಕ ತಂಡಗಳನ್ನು ರೂಪಿಸುವತ್ತ ಸಾಗಿದೆ ಎಂದು ಹೇಳಿದ್ದಾರೆ.
ಎಐ ಹೆಚ್ಚಿನ ಜನರು ಅಗತ್ಯವಿದ್ದ ಕೆಲಸವನ್ನು ಕಡಿಮೆ ಜನರ ಜೊತೆ ಮಾಡಲು ಅವಕಾಶ ಮಾಡಿಕೊಡುತ್ತವೆ. ಈ ಕಾರಣದಿಂದಾಗಿ, ಓಪನ್ಎಐ ತನ್ನ ಹೆಡ್ಕೌಂಟ್ ಅನ್ನು ವೇಗವಾಗಿ ವಿಸ್ತರಿಸುವ ಅಗತ್ಯವಿಲ್ಲ ಎಂದು ಭಾವಿಸುತ್ತದೆ.
ಎಐ ಮೂಲಕ ನಾವು ಕಡಿಮೆ ಜನರೊಂದಿಗೆ ಹೆಚ್ಚು ಮಾಡಲು ಸಾಧ್ಯವಾಗುತ್ತದೆ ಎಂದು ನಾವು ಭಾವಿಸುತ್ತೇವೆ. ಕಂಪನಿಗಳ ಕಾರ್ಯತಂತ್ರಗಳು ಬದಲಾಗುವುದನ್ನು ನಾವು ನೋಡುತ್ತಿದ್ದೇವೆ. ಆದರೆ ಎಲ್ಲಾ ಕಂಪನಿಗಳು ಹೀಗೆ ಸಾಗಲು ಸಾಧ್ಯವಿಲ್ಲ. ಆದ್ದರಿಂದ ಬೇಗ ನೇಮಕಾತಿಗಳನ್ನು ಮಾಡಬೇಕು ಎಂದು ಎಚ್ಚರಿಸಿದರು.
ವಿಶೇಷವಾಗಿ ಎಐ ಸಾಮರ್ಥ್ಯಗಳು ವೇಗವಾಗಿ ಸುಧಾರಿಸಬೇಕಿದೆ. ಕಂಪನಿಗಳು ಹಠಾತ್ ಆಗಿ ಎಐ ಬಹಳಷ್ಟು ಕೆಲಸಗಳನ್ನು ಮಾಡಬಹುದು ಮತ್ತು ನಮಗೆ ಕಡಿಮೆ ಜನರ ಅಗತ್ಯವಿದೆ ಎಂದು ಅರಿತು ಉದ್ಯೋಗ ಕಡಿತ ಮಾಡಲು ಸಾಧ್ಯವಿಲ್ಲ ಎಂದರು.
ಹಠಾತ್ ಉದ್ಯೋಗ ಕಡಿತ ವಿಧಾನ ಸರಿಯಲ್ಲ. ನಮ್ಮ ಸರಿಯಾದ ವಿಧಾನವೆಂದರೆ ನಿಧಾನವಾಗಿ ನೇಮಕಾತಿ ಮಾಡಿಕೊಳ್ಳುವುದು. ಆದರೆ ನೇಮಕಾತಿ ಮಾಡಿಕೊಳ್ಳುವುದನ್ನು ಮುಂದುವರಿಸುವುದು.
ನಾವು ದೀರ್ಘಾವಧಿಯ ಚಿಂತನೆಯೊಂದಿಗೆ ಮುಂದುವರಿಯಬೇಕಿದೆ. ತುಂಬಾ ಆಕ್ರಮಣಕಾರಿಯಾಗಿ ನೇಮಕಾತಿ ಮಾಡಿಕೊಳ್ಳುವುದು, ನಂತರ ಇದ್ದಕ್ಕಿದ್ದಂತೆ ಬಹಳಷ್ಟು ಉದ್ಯೋಗ ಕಡಿತ ಮಾಡುವುದು ಕಂಪನಿಗಳ ಸರಿಯಾದ ಕ್ರಮವಲ್ಲ ಎಂದು ತಿಳಿಸಿದ್ದಾರೆ.
ತಂಡಗಳ ತ್ವರಿತ ವಿಸ್ತರಣೆ ಮತ್ತು ಹಠಾತ್ ಉದ್ಯೋಗ ಕಡಿತಗಳ ಬದಲು ಕಂಪನಿಗಳು ನಿಧಾನ ಮತ್ತು ಸ್ಥಿರವಾದ ವಿಧಾನವನ್ನು ತೆಗೆದುಕೊಳ್ಳಬೇಕು. ಎಐ ಬಂದರೂ ಸಹ ನೇಮಕಾತಿ ಮಾಡಿಕೊಳ್ಳುವುದನ್ನು ಮುಂದುವರಿಸುವುದು ಮುಖ್ಯ. ದೀರ್ಘಾವಧಿಯ ಚಿಂತನೆಯೊಂದಿಗೆ ನಮಗೆ ಸ್ಪಷ್ಟವಾದ ದಾರಿ ಅಗತ್ಯ ಎಂದರು.
ಅಮೆರಿಕದ ಮಾರುಕಟ್ಟೆಯು ಈಗಾಗಲೇ ಒತ್ತಡದಲ್ಲಿದೆ. ಕಳೆದ ಒಂದು ವರ್ಷದಲ್ಲಿ ನೇಮಕಾತಿಯ ವೇಗ ನಿಧಾನವಾಗಿದೆ. ನಿರುದ್ಯೋಗ ದರವು 2021ರ ನವೆಂಬರ್ 2025ರ ನಂತರದ ಗರಿಷ್ಠ ಮಟ್ಟಕ್ಕೆ ಏರಿದೆ ಎಂದು ತೋರಿಸುತ್ತಿದೆ. ಅದೇ ಸಮಯದಲ್ಲಿ, ಉದ್ಯೋಗಾವಕಾಶಗಳು ಗಮನಾರ್ಹವಾಗಿ ಕುಸಿದಿವೆ.
2022ರಲ್ಲಿ ಅಮೆರಿಕದಲ್ಲಿ ಪ್ರತಿಯೊಬ್ಬ ನಿರುದ್ಯೋಗಿ ಕಾರ್ಮಿಕರಿಗೂ ಸರಿಸುಮಾರು ಎರಡು ಉದ್ಯೋಗಗಳು ಮುಕ್ತವಾಗಿದ್ದವು. ಸೆಪ್ಟೆಂಬರ್ 2025ರ ವೇಳೆಗೆ ಆ ಅಂತರವು ಪ್ರತಿ ನಿರುದ್ಯೋಗಿ ವ್ಯಕ್ತಿಗೆ ಒಂದು ಉದ್ಯೋಗಾವಕಾಶಕ್ಕೆ ಅವಕಾಶ ಇಲ್ಲದಂತೆ ಮಾಡಿದೆ. ಕನಿಷ್ಠ 27 ವಾರಗಳಿಂದ ಕೆಲಸವಿಲ್ಲದ ಜನರು ಈಗ ಅಮೆರಿಕದಲ್ಲಿ ಸಿಗುತ್ತಾರೆ.
ಇಂತಹ ಪರಿಸ್ಥಿತಿ ಹೊಸ ಪದವೀಧರರು ಮತ್ತು ವೃತ್ತಿಜೀವನದ ಆರಂಭಿಸುವ ವೃತ್ತಿಪರರಿಗೆ ಸ್ಥಿರವಾದ ಉದ್ಯೋಗಗಳನ್ನು ಹುಡುಕುವುದು ವಿಶೇಷವಾಗಿ ಸವಾಲಿನ ಸಂಗತಿಯಾಗಿದೆ. ಹೊಸ ನೇಮಕಾತಿ ಕೆಲಸವನ್ನು ವೇಗಗೊಳಿಸಬಹುದು ಎಂದು ಹೇಳಿದ್ದಾರೆ.

