HomeLatest Newsರಾಜ್ಯದ ರೈತರೇ ಗಮನಿಸಿ : 'ಕೃಷಿ ಇಲಾಖೆ'ಯ ಎಲ್ಲಾ ಯೋಜನೆಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

ರಾಜ್ಯದ ರೈತರೇ ಗಮನಿಸಿ : ‘ಕೃಷಿ ಇಲಾಖೆ’ಯ ಎಲ್ಲಾ ಯೋಜನೆಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ

ಬೆಂಗಳೂರು :   ಕರ್ನಾಟಕ ಕೃಷಿ ಇಲಾಖೆಯು ರೈತರ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. 2026ರ ಸಾಲಿನಲ್ಲಿ ಚಾಲ್ತಿಯಲ್ಲಿರುವ ಪ್ರಮುಖ ಯೋಜನೆಗಳ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.ಕೃಷಿ ಭಾಗ್ಯ ಯೋಜನೆಯಡಿ  ಮಳೆ ಆಶ್ರಿತ ರೈತರಿಗಾಗಿ ಕೃಷಿ ಹೊಂಡ ನಿರ್ಮಾಣ, ಡೀಸೆಲ್ ಪಂಪ್‌ಸೆಟ್ ಮತ್ತು ಹನಿ ನೀರಾವರಿ ಘಟಕಗಳಿಗೆ ಶೇ. 90 ರವರೆಗೆ ಸಹಾಯಧನ ನೀಡಲಾಗುತ್ತದೆ. ಗಂಗಾ ಕಲ್ಯಾಣ ಯೋಜನೆ: ಸಣ್ಣ ಮತ್ತು ಅತಿ ಸಣ್ಣ ರೈತರ ಜಮೀನುಗಳಲ್ಲಿ ಕೊಳವೆಬಾವಿ ಕೊರೆಯಿಸಿ ಪಂಪ್‌ಸೆಟ್ ಅಳವಡಿಸಲು ಆರ್ಥಿಕ ನೆರವು ನೀಡಲಾಗುತ್ತಿದೆ.

1) ರಾಜ್ಯ ವಲಯ ಯೋಜನೆಗಳು:

*  ಕೃಷಿ ಆಯುಕ್ತಾಲಯ(2401-00-001-1-01): ಅಧಿಕಾರಿ/ ಸಿಬ್ಬಂದಿಗಳ/ ಹೊರಗುತ್ತಿಗೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ವೇತನ ಹಾಗೂ ಬಾಡಿಗೆ ಆಧಾರದ ಮೇಲೆ ವಾಹನಗಳ ಬಳಕೆ, ಗಣಕ ಯಂತ್ರಗಳು, ಬಿಡಿಭಾಗಗಳು, ಕೆ-ಕಿಸಾನ್ ಯೋಜನೆಯ * ಕಾರ್ಯಾಚರಣೆ ಮತ್ತು ನಿರ್ವಹಣೆ ವೆಚ್ಚಗಳು, ಇಲಾಖೆಯ ಅಧಿಕಾರಿಗಳಿಗೆ Close User Group (CUG) mobile connectivity ಒದಗಿಸುವುದು, ದೂರವಾಣಿ ವೆಚ್ಚಗಳು, ಕೇಂದ್ರ ಕಚೇರಿಯ ವಿವಿಧ ವಿಭಾಗಗಳ ದುರಸ್ತಿ ಹಾಗೂ ಅತ್ಯಗತ್ಯ ಕಟ್ಟಡ ಕಾಮಗಾರಿಗಳ ನಿರ್ವಹಣೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2) ಅನುಸೂಚಿತ ಜಾತಿಗಳ ಉಪಯೋಜನೆ ಕಾಯ್ದೆ 2013ರಡಿ ಬಳಕೆಯಾಗದೆ ಇರುವ ಮೊತ್ತ (2401-00-001-1-75): ಈ ಯೋಜನೆಯಡಿ ಅನುದಾನವನ್ನು 2021-223 ಸಾಲಿನಲ್ಲಿ ಪರಿಶಿಷ್ಟ ಜಾತಿ/ ವಂಗಡದ ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ಸಹಾಯಧನದಡಿ ನೀಡಲು ಬಳಸಿಕೊಳ್ಳಲಾಗುವುದು.

3. ರೈತರ ಪ್ರೋತ್ಸಾಹ ಮತ್ತು ಬೆಂಬಲ ಯೋಜನೆಗಳು(2401-00-102-0-28)

ಅ) ಸಮಿತಿ ಮತ್ತು ಸಲಹೆಗಳು: ಕೃಷಿ ಇಲಾಖೆಯು ಏರ್ಪಡಿಸುವ ಕಾರ್ಯಾಗಾರಗಳು.

ಅಂದೋಲನಗಳು, ಸಮಿತಿಗಳ ಸಭೆಗಳು, ಇತ್ಯಾದಿಗಳ ಕಾರ್ಯ ನಿರ್ವಹಣೆಯು ಸುಲಲಿತಾವಾಗುವ ಸಲುವಾಗಿ ಅವುಗಳ ವೆಚ್ಚಗಳನ್ನು ಭರಿಸುವುದು ಹಾಗೂ ಸಭೆಗಳಿಗೆ ಕಾಫಿ/ಟೀ/ ಲಘು ಉಪಹಾರ ವೆಚ್ಚಗಳನ್ನು ಭರಿಸುವುದು.

ಆ) ಕೃಷಿ ಪ್ರಶಸ್ತಿ ಮತ್ತು ಕೃಷಿ ಪಂಡಿತ ಪ್ರಶಸ್ತಿ: ರೈತರಲ್ಲಿ ಹೆಚ್ಚಿನ ಉತ್ಪಾದನೆ ಮಾಡುವ

ಮನೋಭಾವ ಉಂಟು ಮಾಡಲು ತಾಲ್ಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಬೆಳೆ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನು ನೀಡಲಾಗುತ್ತದೆ. ಕೃಷಿ ಕ್ಷೇತ್ರದಲ್ಲಿ ಅಮೂಲ್ಯ ಅನ್ವೇಷಣೆ ಹಾಗೂ ಸೃಜನಾತ್ಮಕ ಕಾರ್ಯಗಳನ್ನು ಕೈಗೊಂಡ ರೈತರನ್ನು ಗುರುತಿಸಿ ಅವರುಗಳಿಗೆ ಪ್ರಶಸ್ತಿ ನೀಡಲಾಗುತ್ತಿದೆ. ಈ ಸಂಬಂಧ ತಗಲುವ ಎಲ್ಲಾ ವೆಚ್ಚಗಳನ್ನು ಭರಿಸಲಾಗುತ್ತದೆ (ಸಮಾರಂಭ ಆಯೋಜನೆ ಇತ್ಯಾದಿ)

ಇ) ಬೆಳೆ ಸಾಲಕ್ಕೆ ಸಹಾಯಧನ: ರಾಜ್ಯದ ರೈತರಿಗೆ ನೀಡಿದ ಬೆಳೆ ಸಾಲ/ ಅಲ್ಪಾವಧಿ ಸಾಲಕ್ಕೆ

ನಿಗದಿತ ಅವಧಿಯಲ್ಲಿ ಸಾಲ ಮರುಪಾವತಿ ಮಾಡಿದ ರೈತರಿಗೆ ಶೇ.1ರ ಬಡ್ಡಿ ರಿಯಾಯಿತಿ ನೀಡಲು (ಸರ್ಕಾರಿ ಸ್ವಾಮ್ಯದ ವಾಣಿಜ್ಯ ಬ್ಯಾಂಕುಗಳು ಹಾಗೂ ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳ ಮೂಲಕ ಗರಿಷ್ಠ 1.00 ಲಕ್ಷ ಮಿತಿಯೊಳಗೆ) ಬಳಸಿಕೊಳ್ಳಲಾಗುವುದು.

ಈ) ಕೃಷಿ ಬಂಡವಾಳ ಹೂಡಿಕೆ ನಿಧಿ: ಆಹಾರ ಸಂಸ್ಕರಣಾ ಯೋಜನೆಗಳ ಬಗ್ಗೆ ಅರಿವು

ಮೂಡಿಸುವ ಕಾರ್ಯಕ್ರಮ, ಆಹಾರ ಸಂಸ್ಕರಣಾ ತಾಂತ್ರಿಕತೆಗಳ ತರಬೇತಿ ಕಾರ್ಯಾಗಾರ, ವಿಚಾರ ಸಂಕಿರಣ, ವಾಣಿಜ್ಯ ಮೇಳದಲ್ಲಿ ಭಾಗವಹಿಸುವುದು, ರೋಡ್ ಷೋ ಏರ್ಪಡಿಸುವುದು ಮುಂತಾದ ಉತ್ತೇಜನ ಕಾರ್ಯಕ್ರಮ ಕೈಗೊಳ್ಳಲು ಹಾಗೂ ಕರ್ನಾಟಕ ಕೃಷಿ ವಾಣಿಜ್ಯ ನಿಗಮದ ಆಡಳಿತಾತ್ಮಕ ವೆಚ್ಚ ಭರಿಸಲಾಗುವುದು. ಈ ಕಾರ್ಯಕ್ರಮಕ್ಕೆ ರೂ.0.50ಕೋಟಿ ಅನುದಾನವನ್ನು ಒದಗಿಸಲಾಗಿದೆ.

ಉ. ಕೃಷಿ ಬೆಲೆ ಆಯೋಗ: ಕೃಷಿ ಬೆಲೆ ಆಯೋಗದ ಅಧ್ಯಕ್ಷರ ಮತ್ತು ಇತರೆ ಸಿಬ್ಬಂದಿಯವರ

ವೇತನ, ಇಂಧನ ಮತ್ತಿತರೆ ನಿರ್ವಹಣಾ ವೆಚ್ಚಗಳು, ರಾಜ್ಯದ 5 ಕೃಷಿ/ತೋಟಗಾರಿಕ ವಿಶ್ವವಿದ್ಯಾಲಯಗಳ ಸಹಯೋಗದಲ್ಲಿ ಬೆಳೆ ಉತ್ಪಾದನಾ ವೆಚ್ಚ ಮತ್ತು ಮಾರುಕಟ್ಟೆ ಮಾಹಿತಿ ಅಧ್ಯಯನ. ಬೆಳೆ ಉತ್ಪಾದನೆ, ಬೆಲೆ ಮುನ್ಸೂಚನೆ ತಂತ್ರಾಂಶ ಅಭಿವೃದ್ಧಿ, ಬೆಲೆ ನೀತಿ ಇತ್ಯಾದಿಗಳ ಬಗ್ಗೆ ಅಧ್ಯಯನ, ಆಮದು ರಫ್ತು, ನೀತಿ ಅಧ್ಯಯನ ಸಾಲ ನೀತಿ ಕುರಿತು ಅಧ್ಯಯನ ಕೈಗೊಳ್ಳಲಾಗುವುದು.

4. ಬೀಜ ಕ್ಷೇತ್ರಗಳು(2401-00-103-0-01) : ಬೀಜೋತ್ಪಾದನೆಗೆ ಅಗತ್ಯವಾದ ಎಲ್ಲಾ ಸಾಗುವಳಿ

ಖರ್ಚುಗಳನ್ನು ನಿರ್ವಹಿಸುವುದು. ಸಿಬ್ಬಂದಿ ವೇತನ ಮತ್ತು ಭತ್ಯೆಗಳನ್ನು ಭರಿಸುವುದು ಹಾಗೂ ಅಗತ್ಯ ಕಚೇರಿ ವೆಚ್ಚಗಳನ್ನು ನಿರ್ವಹಿಸುವುದು. ಬೀಜ ಪರೀಕ್ಷಾ ಪ್ರಯೋಗಾಲಯಗಳು ಮತ್ತು ಬೀಜ ಪರೀಕ್ಷೆಗೆ ಅಗತ್ಯವಾದ ಎಲ್ಲಾ ಖರ್ಚುಗಳನ್ನು ನಿರ್ವಹಿಸುವುದು.

5. ಕೃಷಿ ಪರಿಕರಗಳು ಮತ್ತು ಗುಣಮಟ್ಟ ನಿಯಂತ್ರಣ (2401-00-103-0-15):

ಅ) ವೇತನ ಹಾಗೂ ಪ್ರಯೋಗಶಾಲೆ ವೆಚ್ಚಗಳು: ವಿವಿಧ ಪ್ರಯೋಗಾಲಯಗಳಲ್ಲಿ ಮಾದರಿಗಳ ವಿಶ್ಲೇಷಣೆಗೆ ತಗಲುವ ವೆಚ್ಚ ಹಾಗೂ ಇತರೆ ಖರ್ಚುಗಳ ಪಾವತಿ, ರಸಗೊಬ್ಬರ, ಪೀಡೆನಾಶಕಗಳು, ಜೈವಿಕ ಗೊಬ್ಬರಗಳು, ಜೈವಿಕ ಪೀಡೆನಾಶಕಗಳ ಗುಣನಿಯಂತ್ರಣಕ್ಕಾಗಿ ವೆಚ್ಚವನ್ನು ಭರಿಸಲಾಗುವುದು.

ಆ) ಮಣ್ಣು ಆರೋಗ್ಯ ಅಭಿಯಾನ: ಮಣ್ಣು ಮಾದರಿಗಳ ವಿಶ್ಲೇಷಣೆಗಾಗಿ ಮಣ್ಣು ಆರೋಗ್ಯ

ಚೀಟಿ ಯೋಜನೆಯ ಘಟಕಗಳ ಅನುಷ್ಠಾನ, ಹೊರಗುತ್ತಿಗೆ ಆಧಾರದಲ್ಲಿ ತೆಗೆದುಕೊಂಡಿರುವ ಸಿಬ್ಬಂದಿಗಳಿಗೆ ವೇತನ ಪಾವತಿಗಾಗಿ ಮತ್ತು GIS-GPS ಸೇವೆಗಳನ್ನು ಪಡೆಯಲು, ಮಾಹಿತಿ – ಮತ್ತು-ಜೈವಿಕ ತಂತ್ರಜ್ಞಾನ ಇಲಾಖೆಗೆ ಅನುದಾನ, ಕೇಂದ್ರಗಳ ವಿದ್ಯುತ್, ನೀರು ಬಾಡಿಗೆ ವೆಚ್ಚ, ತೆರಿಗೆ ಪರಿಕರಗಳ ಖರೀದಿ, ಸ್ಥಾನಿಕ ಮಣ್ಣು ಆರೋಗ್ಯ ಕೇಂದ್ರಗಳ ಕಾಮಗಾರಿ, ರಿಪೇರಿ ಮತ್ತು ನವೀಕರಣಕ್ಕಾಗಿ ಉಪಯೋಗಿಸಿಕೊಳ್ಳಲಾಗುವುದು.

ಇ) ಬೀಜಗಳ ಪೂರೈಕೆ: ಈ ಯೋಜನೆಯಡಿ ಸಾಮಾನ್ಯ ವರ್ಗದ ರೈತರಿಗೆ ಶೇ. 50 ಹಾಗೂ

ಪರಿಶಿಷ್ಟ ಜಾತಿ/ ಪಂಗಡದ ರೈತರಿಗೆ ಶೇ.75 ರ ರಿಯಾಯಿತಿ ದರದಲ್ಲಿ ಭತ್ತ, ರಾಗಿ, ಜೋಳ, ಮುಸುಕಿನ ಜೋಳ, ಸಜ್ಜೆ, ತೊಗರಿ, ಕಡಲೆ, ಹೆಸರು, ಉದ್ದು, ಅಲಸಂದೆ, ನೆಲಗಡಲೆ, ಸೂರ್ಯಕಾಂತಿ, ಸೋಯಾ ಅವರೆ, ಹತ್ತಿ ಇತ್ಯಾದಿ ಬೆಳೆಗಳ ಪ್ರಮಾಣಿತ/ ನಿಜ ಚೀಟಿ ಬಿತ್ತನೆ ಬೀಜಗಳನ್ನು ವಿತರಣೆ ಮಾಡಲಾಗುವುದು.

ಈ) ಬೀಜ ಹಾನಿ ನಿಧಿ ಮತ್ತು KSSC, KSSOCA & ತೊಗರಿ ಅಭಿವೃದ್ಧಿ ಮಂಡಳಿಗೆ ಸಹಾಯಾನುದಾನ: ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಮತ್ತು ಕೃಷಿ ವಿಶ್ವವಿದ್ಯಾನಿಲಯಗಳಲ್ಲಿ ವಿತರಣೆಯಾಗಿ ಉಳಿದ ಬಿತ್ತನೆ ಬೀಜಗಳನ್ನು ಬೀಜೇತರವಾಗಿ ವಿಲೇವಾರಿ ಮಾಡಿ ವ್ಯತ್ಯಾಸದ ಹಣದ ಪಾವತಿಗೆ ವೆಚ್ಚ ಭರಿಸಲಾಗುವುದು.

ಉ) ಸಸ್ಯ ಸಂರಕ್ಷಣೆ: ರಿಯಾಯಿತಿ ದರದಲ್ಲಿ ಪೀಡನಾಶಕ/ ಜೈವಿಕ ಪೀಡೆನಾಶಕ ಹಾಗೂ ಜೈವಿಕ ನಿಯಂತ್ರಣಕಾರಕಗಳ ವಿತರಣೆ, ಗುಣ ನಿಯಂತ್ರಣ, ಬೀಜೋಪಚಾರ ಆಂದೋಲನ ಹಾಗೂ ಸುರಕ್ಷಿತ ಕೀಟನಾಶಕಗಳ ಬಳಕೆ ಬಗ್ಗೆ ತರಬೇತಿಗಾಗಿ ಅನುದಾನವನ್ನು ಬಳಸಿಕೊಳ್ಳಲಾಗುವುದು.

ಊ) ರಾಸಾಯನಿಕ ಗೊಬ್ಬರದ ಮೇಲಿನ ಬಡ್ಡಿ ಸಹಾಯಧನ: ರಸಗೊಬ್ಬರಗಳ ಕಾವು

ದಾಸ್ತಾನಿಗೆ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಿ ಹಾಗೂ ಕರ್ನಾಟಕ ರಾಜ್ಯ ಬೀಜ ನಿಗಮಕ್ಕೆ ಮುಂಗಡ ಹಣ ನೀಡಲು ಮತ್ತು ರಸಗೊಬ್ಬರ ಖರೀದಿಯ ಸಾಲಕ್ಕೆ ಬಡ್ಡಿ. ಸಂಗ್ರಹಣಾ ವೆಚ್ಚ ಹಾಗೂ ರಸಗೊಬ್ಬರ ಸಾಗಾಣಿಕಾ ವೆಚ್ಚವನ್ನು ಭರಿಸಲಾಗುವುದು.

ಋ) ಮಣ್ಣಿನ ಸತ್ವ ಹೆಚ್ಚಿಸುವಿಕೆ: ಮಣ್ಣಿನ ಫಲವತ್ತತೆ ಹಾಗೂ ಉತ್ಪಾದಕತೆಯನ್ನು

ಹೆಚ್ಚಿಸಲು ರಿಯಾಯಿತಿ ದರದಲ್ಲಿ ಹಸಿರೆಲೆ ಗೊಬ್ಬರ ಬೀಜ, ಜಿಪ್ಪಂ, ಕೃಷಿ ಸುಣ್ಣ ಲಘುಪೋಷಕಾಂಶಗಳು, ಜೈವಿಕ ಗೊಬ್ಬರಗಳು, ಸಾವಯವ ಗೊಬ್ಬರಗಳು ಇತ್ಯಾದಿಗಳ ವಿತರಣೆ ಹಾಗೂ ಎರೆಹುಳು ಗೊಬ್ಬರ ಮತ್ತು ಸಾವಯವ ಗೊಬ್ಬರಗಳ ಉತ್ಪಾದನೆಗೆ ಪ್ರೋತ್ಸಾಹಧನ (ಬಯೋಡೈಜಿಸ್ಟರ್ ಘಟಕ ಸ್ಥಾವನೆ, ಎರೆಹುಳು ಗೊಬ್ಬರ ಉತ್ಪಾದನಾ ಘಟಕಗಳಿಗೆ ಪೋತ್ಸಾಹಧನ ನೀಡಲಾಗುವುದು.

ಎ) ಸಾವಯವ ಇಂಗಾಲ ಹೆಚ್ಚಿಸುವಿಕೆ: ಮಣ್ಣಿನಲ್ಲಿ ಸಾವಯವ ಇಂಗಾಲ ಹೆಚ್ಚಿಸಲು

ಹಸಿರೆಲೆ ಗೊಬ್ಬರ ಬೀಜಗಳನ್ನು ರಿಯಾಯತಿ ದರದಲ್ಲಿ ವಿತರಣೆ ಮತ್ತು ಬಳಕೆ ಮಾಡುವ ರೈತರಿಗೆ ನೇರ ನಗದು ಸೌಲಭ್ಯ ವರ್ಗಾವಣೆ ಮೂಲಕ(Direct Benefit Transfer) ಬ್ಯಾಂಕ್ ಖಾತೆಗೆ ಪ್ರೋತ್ಸಾಹಧನ ಜಮೆ ಮಾಡಲಾಗುವುದು. ಇದಲ್ಲದೆ, ಸಾವಯವ ಇಂಗಾಲ ಹೆಚ್ಚಿಸುವ ಪ್ರಾತ್ಯಕ್ಷಿಕೆಗಳನ್ನು ಕೈಗೊಂಡು ಅದರ ಮಹತ್ವವನ್ನು ರೈತರಿಗೆ ತಿಳಿಯಪಡಿಸಲಾಗುವುದು.

ಏ)ಕೃಷಿ ಸಂಸ್ಕರಣೆ: ಕೃಷಿ ಸಂಸ್ಕರಣಾ ಘಟಕಗಳು, ಸಣ್ಣ ಯಂತ್ರ ಚಾಲಿತ ಎಣ್ಣೆಗಾಣಗಳು -ಮತ್ತು ಟಾರ್ಪಾಲಿನ್ ಗಳನ್ನು ಸಹಾಯಧನದಡಿ ವಿತರಣೆ ಮಾಡಲಾಗುವುದು…

ಐ) ಕೃಷಿ ಯಂತ್ರಧಾರೆ: ರಾಜ್ಯದಲ್ಲಿ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಸಕಾಲದಲ್ಲಿ ಕೃಷಿ

ಚಟುವಟಿಕೆಗಳನ್ನು ಕೈಗೊಳ್ಳಲು ಅನುವಾಗುವಂತೆ, ಕಡಿಮೆ ಬಾಡಿಗೆ ದರದಲ್ಲಿ ಭೂಮಿ ಸಿದ್ಧತೆಯಿಂದ ಕೊಯ್ದು ಮತ್ತು ಸಂಸ್ಕರಣೆಗೆ ಉಪಯುಕ್ತವಾಗುವ ವಿವಿಧ ಕೃಷಿ ಯಂತ್ರೋಪಕರಣಗಳನ್ನು ರೈತರಿಗೆ ಬಾಡಿಗೆ ಆಧಾರದ ಮೇಲೆಉಪಯೋಗಿಸಲು ಅವಕಾಶ ಕಲ್ಪಿಸಲು ಹೋಬಳಿ ಕೇಂದ್ರಗಳಲ್ಲಿ ಆಯ್ಕೆ ಸಂಸ್ಥೆಗಳ ಸಹಯೋಗದೊಂದಿಗೆ ಕೃಷಿ ಯಂತ್ರಧಾರೆ (ಕೃಷಿ ಯಂತ್ರೋಪಕರಣಗಳ ಬಾಡಿಗೆ ಆಧಾರಿತ ಸೇವಾ) ಕೇಂದ್ರಗಳನ್ನು ತೆರೆಯಲಾಗುವುದು.

6. ಕೃಷಿ ಕ್ಷೇತ್ರ ಮತ್ತು ಕೃಷಿ ಅಭಿವೃದ್ಧಿ ಕೇಂದ್ರಗಳು (2401-00-104-0-10): ಕೃಷಿ ಕ್ಷೇತ್ರ ಮತ್ತು ಕೃಷಿ ಅಭಿವೃದ್ಧಿ ಕೇಂದ್ರಗಳ ಎಲ್ಲಾ ಸಾಗುವಳಿ ವೆಚ್ಚವನ್ನು ನಿರ್ವಹಿಸುವುದು, ಸಿಬ್ಬಂದಿ ವೇತನ ಮತ್ತು ಭತ್ಯೆಗಳನ್ನು ಭರಿಸುವುದು ಮತ್ತು ಅಗತ್ಯ ಕಚೇರಿ ವೆಚ್ಚಗಳನ್ನು ನಿರ್ವಹಿಸುವುದು.

7. ಸಾವಯವ ಕೃಷಿ ಮತ್ತು ಸಿರಿಧಾನ್ಯಗಳ ಕಾರ್ಯಕ್ರಮ:

ಅ) ಸಾವಯವ ಕೃಷಿ ಪ್ರಮಾಣೀಕರಣ: ರಾಜ್ಯದ ಪ್ರಮಾಣಿತ ಸಾವಯವ ಕೃಷಿ ಪ್ರದೇಶದ

ವಿಸ್ತೀರ್ಣವನ್ನು ಹೆಚ್ಚಿಸುವ ಸಲುವಾಗಿ ಆಯ್ದ ವ್ಯಕ್ತಿಗತ/ ಗುಂಪು ಪ್ರಸ್ತಾವನೆಗಳ ಪ್ರದೇಶವನ್ನು ಸಾವಯವ ಪ್ರಮಾಣೀಕರಣವನ್ನು ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನಾ ಸಂಸ್ಥೆ ಮೂಲಕ ಕೈಗೊಳ್ಳಲಾಗುವುದು.

ಊ) ತರಬೇತಿ ಕಾರ್ಯಕ್ರಮಗಳು: ಈ ಯೋಜನೆಯಡಿ ಕೃಷಿ ವಿಸ್ತರಣಾ ಅಧಿಕಾರಿಗಳ

ನಿರ್ವಹಣಾ ಸಾಮರ್ಥ್ಯ ಮತ್ತು ರೈತರ/ ರೈತ ಮಹಿಳೆಯರ ವೃತ್ತಿ ಸಾಮರ್ಥ್ಯವನ್ನು ಹೆಚ್ಚಿಸಲು ಕೃಷಿ ತಾಂತ್ರಿಕತೆಗಳಿಗೆ ಸಂಬಂಧಿಸಿದಂತೆ ವಿಶೇಷ ತರಬೇತಿಗಳನ್ನು ಹಾಗೂ ಅಧ್ಯಯನ ಪ್ರವಾಸಗಳನ್ನು ಆಯೋಜಿಸಲಾಗುವುದು.

ಋ) ಜಿಲ್ಲಾ ಕೃಷಿ ತರಬೇತಿ ಕೇಂದ್ರಗಳ ನಿರ್ವಹಣೆ ಮತ್ತು ಉನ್ನತೀಕರಣ: ಈ ಯೋಜನೆಯಡಿ ಜಿಲ್ಲಾ ಕೃಷಿ ತರಬೇತಿ ಕೇಂದ್ರಗಳ ನಿರ್ವಹಣೆ ಮತ್ತು ಉನ್ನತೀಕರಣಕ್ಕಾಗಿ ಅನುದಾನವನ್ನು ಬಳಸಲಾಗುವುದು.

ಎ) ಕೃಷಿಕ ಸಮಾಜ: ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ವತಿಯಿಂದ ಕೈಗೊಳ್ಳುವ ತರಬೇತಿ, ವಿಚಾರ ಸಂಕಿರಣ, ರೈತರ ಅಧ್ಯಯನ, ಪ್ರವಾಸ ಕ್ಷೇತ್ರೋತ್ಸವ ಇತರೆ ವಿಚಾರ ಚಟುವಟಿಕೆಗಳಿಗೆ ಅನುದಾನ ಬಳಕೆ ಮಾಡಲಾಗುವುದು.

9. ಹೊಸ ಬೆಳೆ ವಿಮಾ ಯೋಜನೆ: ಈ ಯೋಜನೆಯಡಿ ಪ್ರಕೃತಿ ವಿಕೋಪಗಳು, ಕೀಟಗಳು

ಮತ್ತು ರೋಗಗಳಿಂದಾಗಿ ಯಾವುದೇ ಅಧಿಸೂಚಿತ ಬೆಳೆ ವಿಫಲವಾದ ಪಕ್ಷದಲ್ಲಿ ರೈತರಿಗೆ ವಿಮಾ ರಕ್ಷಣೆ ಮತ್ತು ಹಣಕಾಸು ಬೆಂಬಲ ನೀಡಲಾಗುವುದು ರೈತರಿಗೆ ನೀಡುವ ವಿಮಾ ಕಂತಿನ ರಿಯಾಯಿತಿಯಲ್ಲಿ ರಾಜ್ಯ ಸರ್ಕಾರದ ಪಾಲನ್ನು ನೀಡಿ ಬೆಳೆ ವಿಮಾ ನಷ್ಟ. ಪರಿಹಾರವನ್ನು ಇತ್ಯರ್ಥಪಡಿಸಲು ಅನುವು ಮಾಡಲಾಗುವುದು ಹಾಗೂ ಬೆಳೆ ಸಮೀಕ್ಷೆ ಕಾರ್ಯಕ್ಕೆ ಮತ್ತು ಬೆಳೆ ವಿಮೆ ಯೋಜನೆಗಳಿಗೆ ಸಂಬಂಧಿಸಿದಂತೆ ಅಗತ್ಯ ವೆಚ್ಚ ಭರಿಸಲಾಗುವುದು.

10. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ: ಭಾರತ ಸರ್ಕಾರದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಸಾಗುವಳಿ ಭೂಮಿ ಹೊಂದಿರುವ ಎಲ್ಲಾ ಅರ್ಹ ರೈತರಿಗೆ – ವಾರ್ಷಿಕ ರೂ.6000/-ಗಳ, ನಗದನ್ನು ರೂ.2000/-ಗಳಂತೆ ಮೂರು ಕಂತುಗಳಲ್ಲಿ ನಾಲ್ಕು ತಿಂಗಳಿಗೊಮ್ಮೆ ನೀಡಲಾಗುವುದು ಕೇಂದ್ರ ಸರ್ಕಾರದ ಪಿ.ಎಂ.ಕಿಸಾನ್ ಯೋಜನೆಯ ಎಲ್ಲಾ ಅರ್ಹ ರೈತರಿಗೆ ದಿನಾಂಕ: 14-08-2019 ರಿಂದ ರಾಜ್ಯ ಸರ್ಕಾರವು ಹೆಚ್ಚುವರಿಯಾಗಿ ರೂ.4000/-ಗಳನ್ನು ಎರಡು ಕಂತುಗಳಲ್ಲಿ ಆರ್ಥಿಕ ನೆರವನ್ನು ಪಿ.ಎಂ.ಕಿಸಾನ್ ಕರ್ನಾಟಕ ಯೋಜನೆಯಡಿ ನೀಡಲಾಗುತ್ತಿದೆ.

11. ಕೃಷಿ ಮಹಿಳೆಯರು ಮತ್ತು ಯುವಕ ರೈತರ ತರಬೇತಿ ಮತ್ತು ವಿಸ್ತರಣಾ (WYTEP) (2401-00-109-0-80): ಸದರಿ ಯೋಜನೆಯಡಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ವೇತನ ಮತ್ತು ಇತರೆ ಭತ್ಯೆಗಳನ್ನು ಭರಿಸಲಾಗುತ್ತದೆ.

12. (2401-00-800-1-70): ಭರ್ತಿಯಾದಲ್ಲಿ ವೇತನ ನೀಡಲು ಅನುದಾನ ನಿಗದಿಪಡಿಸಲಾಗಿರುತ್ತದೆ.

13.ಭೂಸಾರದ ಸಮೀಕ್ಷೆ ಮತ್ತು ಪರೀಕ್ಷೆ (2402-00-101-0-01) : ಸದರಿ ಯೋಜನೆಯಡಿ

ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ವೇತನ ಮತ್ತು ಇತರೆ ಭತ್ಯೆಗಳನ್ನು ಭರಿಸಲಾಗುತ್ತದೆ.

14. ಕೃಷಿ ಮೂಲಭೂತ ಸೌಕರ್ಯ (4401-00-001-1-01)

ಅ. ಬಂಡವಾಳ ವೆಚ್ಚಗಳು (ಪ್ರಮುಖ ಕಾಮಗಾರಿಗಳು): ಲಭ್ಯವಿರುವ ನಿವೇಶನಗಳಲ್ಲಿ ಜಂಟಿ ಕೃಷಿ ನಿರ್ದೇಶಕರು, ಉಪ ಕೃಷಿ ನಿರ್ದೇಶಕರು, ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳ ನೂತನ ಕಟ್ಟಡಗಳನ್ನು ನಿರ್ಮಿಸುವುದು ಸ್ವಂತ ಕಟ್ಟಡ ಹೊಂದಿರುವ ರೈತ ಸಂಪರ್ಕ ಕೇಂದ್ರಗಳ ಆವರಣದಲ್ಲಿ ಗೋದಾಮು ನಿರ್ಮಾಣ ಹಾಗೂ ಉಚಿತ ನಿವೇಶನಗಳು ಲಭ್ಯವಿಲ್ಲದ ಕಡೆ ಇಲಾಖೆಯ ಸ್ವಂತ ಕಟ್ಟಡಗಳ ನಿರ್ಮಾಣಕ್ಕೆ ನಿವೇಶನಗಳ ಖರೀದಿಗೆ ಅನುದಾನವನ್ನು ಬಳಸಲಾಗುವುದು.

ರೈತ ಸಂಪರ್ಕ ಕೇಂದ್ರಗಳು: ಅನುಮೋದನೆಯಾಗಿರುವ ರೈತ ಸಂಪರ್ಕ ಕೇಂದ್ರಗಳ ಕಟ್ಟಡಗಳ ನಿರ್ಮಾಣಕ್ಕೆ ಯೋಜನೆಯಡಿ ಅನುದಾನವನ್ನು ಬಳಸಲಾಗುವುದು.

15. ಮುಖ್ಯಮಂತ್ರಿಗಳ ರೈತ ವಿದ್ಯಾನಿಧಿ ಯೋಜನೆ (2202-08-107-0-06): ರೈತರ ಮಕ್ಕಳು ಸ್ನಾತಕೋತ್ತರ ಶಿಕ್ಷಣದವರೆಗೆ ವಿದ್ಯಾಭ್ಯಾಸ ಪಡೆಯಲು ಪ್ರೋತ್ಸಾಹಿಸುವುದು ಈ ಯೋಜನೆಯ ಉದ್ದೇಶವಾಗಿರುತ್ತದೆ. ಈ ಕಾರ್ಯಕ್ರಮದಡಿ 8, 9 ಮತ್ತು 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ರೈತ ಕುಟುಂಬದ ಹೆಣ್ಣುಮಕ್ಕಳು ಮತ್ತು ಎಸ್.ಎಸ್.ಎಲ್.ಸಿ / 10ನೇ ತರಗತಿಯನ್ನು ಪೂರೈಸಿರುವ ಹಾಗೂ ಕರ್ನಾಟಕ ರಾಜ್ಯದ ಯಾವುದೇ ಭಾಗದಲ್ಲಿರುವ ಅಧಿಕೃತವಾಗಿ ನೋಂದಣಿಯಾಗಿರುವ ಶಿಕ್ಷಣಸಂಸ್ಥೆ /ವಿಶ್ವವಿದ್ಯಾನಿಲಯಗಳಲ್ಲಿ ಸ್ನಾತಕೋತ್ತರ ಕೋರ್ಸ್ ಗಳವರೆಗೆ ವಿದ್ಯಾಭ್ಯಾಸ ಮಾಡುತ್ತಿರುವ ರೈತರ ಮಕ್ಕಳು ಈ ವಿದ್ಯಾರ್ಥಿವೇತನ ಪಡೆಯಲು ಅರ್ಹರಿರುತ್ತಾರೆ. ವಿದ್ಯಾರ್ಥಿ ವೇತನವನ್ನು ವಾರ್ಷಿಕವಾಗಿ ಬ್ಯಾಂಕ್ ಖಾತೆಗಳಿಗೆ ನೇರನಗದು ವರ್ಗಾವಣೆ (Direct Benefit Transfer – DBT) ..

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular