HomeLive NewsBIG NEWS: ಮನೆ ಕೆಲಸದವಳಿಗೆ ಮದುವೆಯಾಗುವುದಾಗಿ ನಂಬಿಸಿ, ಲೈಂಗಿಕ ದೌರ್ಜನ್ಯ: ಧುರಂಧರ್ ನಟ ಅರೆಸ್ಟ್

BIG NEWS: ಮನೆ ಕೆಲಸದವಳಿಗೆ ಮದುವೆಯಾಗುವುದಾಗಿ ನಂಬಿಸಿ, ಲೈಂಗಿಕ ದೌರ್ಜನ್ಯ: ಧುರಂಧರ್ ನಟ ಅರೆಸ್ಟ್

ಮುಂಬೈ: ಮನೆ ಕೆಲಸದವಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದಲಿ ಧುರಂಧರ್ ಸಿನಿಮಾ ನಟ ನದೀಮ್ ಖಾನ್ ನನ್ನು ಪೊಲೀಸರು ಬಂಧಿಸಿದ್ದಾರೆ.

ನದೀಮ್ ಖಾನ್ ಮನೆ ಕೆಲಸದವಳಿಗೆ ಮದುವೆಯಾಗುವುದಾಗಿ ಭರವಸೆ ನೀಡಿ ಕಳೆದ 10 ವರ್ಷಗಳಿಂದ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ. ಈಗ ಮದುವೆಗೆ ಒಪ್ಪದೇ ಮೋಸ ಮಾಡಿದ್ದಾರೆ ಎಂದು ಸಂತ್ರಸ್ತೆ ದೂರು ನೀಡಿದ್ದಾರೆ. ಪ್ರಕರ್ಣ ದಾಖಲಿಸಿಕೊಂಡಿರುವ ಪೊಲೀಸರು ನದೀಮ್ ಖನನ್ನು ಬಂಧಿಸಿದ್ದಾರೆ.

ನದೀಮ್ ಖಾನ್ ಧುರಂಧರ್ ಸಿನಿಮಾದಲ್ಲಿ ಡಕಾಯತ್ ರೆಹಮಾನ್ ಮನೆಯ ಬಾಣಸಿಗ ಅಖ್ಲಾಕ್ ಆಗಿ ನಟಿಸಿದ್ದರು. ಲೈಂಗಿಕ ಕಿರುಕುಳ ಆರೋಪದಲ್ಲಿ ನದೀಮ್ ಖಾನ್ ಬಂಧನವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2015ರಲ್ಲಿ ಸಂತ್ರಸ್ತೆ ನದೀಮ್ ಖಾನ್ ನ್ನು ಭೇಟಿಯಾಗಿದ್ದು. ಮನೆ ಕೆಲಸದವಳಾಗಿ ಕೆಲಸಕ್ಕೆ ಸೇರಿದ್ದಳು. ಮನೆ ಕೆಲಸದವಳ ಜೊತೆಯೇ ಸ್ನೇಹ-ಸಲುಗೆ ಬೆಳೆಸಿದ್ದ ನದೀಮ್ ಖಾನ್, ಮದುವೆಯ ಭರವಸೆ ನೀಡಿ ದೈಹಿಂಕ ಸಂಪರ್ಕವನ್ನು ಇಟ್ಟಿಕೊಂಡಿದ್ದರು. ಹೀಗೆ ಕಳೆದ 10 ವರ್ಷಗಳಿಂದ ಇಬ್ಬರ ನಡುವೆ ಸಂಬಂಧವಿತ್ತು. ಆದರೆ ನದೀಮ್ ಖಾನ್ ಈಗ ಮದುವೆಗೆ ಒಪ್ಪುತ್ತಿಲ್ಲ ಎಂದು 41 ವರ್ಷದ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನದೀಮ್ ಖಾನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular