ಭಾರತೀಯರ ಪಾಲಿಗೆ ಚಹಾ ಎಂದರೆ ಬರಿ ಪಾನೀಯವಲ್ಲ, ಅದೊಂದು ಎಮೋಷನ್. ಸಾಮಾನ್ಯವಾಗಿ ಚಹಾವನ್ನು ನಿಧಾನವಾಗಿ ಕುದಿಸಿ (Slow Cooking) ಅದರ ಅಸಲಿ ರುಚಿ ಸವಿಯುವುದು ರೂಢಿ. ಆದರೆ ಇಲ್ಲೊಬ್ಬ ಮಹಿಳೆ ಪ್ರೆಶರ್ ಕುಕ್ಕರ್ ಬಳಸಿ ಕೇವಲ 4 ನಿಮಿಷಗಳಲ್ಲಿ ಚಹಾ ತಯಾರಿಸಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಮೂಡಿಸಿದ್ದಾರೆ
ಏನಿದು ಕುಕ್ಕರ್ ಚಾಯ್ ಕಥೆ
ಇನ್‌ಸ್ಟಾಗ್ರಾಮ್ ಇನ್ಫ್ಲುಯೆನ್ಸರ್ ಪಾಯಲ್ ಗುರ್ದಾಸನಿ ಅವರು ಹಂಚಿಕೊಂಡಿರುವ ಈ ವಿಡಿಯೋ ಈಗಾಗಲೇ 5.5 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ಬೆಳಗಿನ ಗಡಿಬಿಡಿಯಲ್ಲಿ ಸಮಯ ಉಳಿಸಲು ಅವರು ಕಂಡುಕೊಂಡ ಈ ಶಾರ್ಟ್‌ಕಟ್ ಈಗ ನೆಟ್ಟಿಗರ ನಡುವೆ ಪರ-ವಿರೋಧದ ಚರ್ಚೆಗೆ ನಾಂದಿ ಹಾಡಿದೆ.
https://www.instagram.com/reel/DTPanxXAWid/?utm_source=ig_web_copy_link
ತಯಾರಿಸುವ ವಿಧಾನ ಹೀಗಿದೆ:
ಮಿಶ್ರಣ: ಮೊದಲು ದಪ್ಪ ತಳದ ಕುಕ್ಕರ್‌ಗೆ ಒಂದು ಕಪ್ ನೀರು ಮತ್ತು ಎರಡು ಕಪ್ ಹಾಲು ಸುರಿಯಲಾಗುತ್ತದೆ.
ಪದಾರ್ಥಗಳು: ಇದಕ್ಕೆ ಚಹಾ ಪುಡಿ, ಸಕ್ಕರೆ, ಶುಂಠಿ ಹಾಗೂ ಏಲಕ್ಕಿಯನ್ನು ಒಟ್ಟಿಗೇ ಸೇರಿಸಲಾಗುತ್ತದೆ.
ಫಿನಿಶಿಂಗ್: ಕುಕ್ಕರ್ ಮುಚ್ಚಳ ಹಾಕಿ ಸರಿಯಾಗಿ 2 ವಿಸ್ಲ್ ಕೂಗಿಸಿದರೆ ಚಹಾ ರೆಡಿ!
ಇನ್ಫ್ಲುಯೆನ್ಸರ್ ಮಾತು:
ನಾನು ಬೇಕೆಂದೇ ಈ ಪ್ರಯೋಗ ಮಾಡಲಿಲ್ಲ. ಒಬ್ಬ ತಾಯಿಯಾಗಿ ನನಗೆ ಅತಿ ವೇಗವಾಗಿ ಚಹಾ ಬೇಕಿತ್ತು. ಕೇವಲ 4 ನಿಮಿಷಗಳಲ್ಲಿ ಅದ್ಭುತ ರುಚಿಯ ಚಹಾ ಸಿದ್ಧವಾಯಿತು. ಸಮಯ ಉಳಿಸುವ ಇಂತಹ ಐಡಿಯಾಗಳು ತಾಯಂದಿರಿಗೆ ಒಂದು ಗೆಲುವೇ ಸರಿ, ಎನ್ನುತ್ತಾರೆ ಪಾಯಲ್.
ನೆಟ್ಟಿಗರ ರಿಯಾಕ್ಷನ್ ಹೇಗಿದೆ?
ಈ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ:
ಪರ: ಗಡಿಬಿಡಿಯ mornings ಗೆ ಇದು ಬೆಸ್ಟ್ ಐಡಿಯಾ, ಸಮಯ ಉಳಿಯುತ್ತದೆ ಎಂದು ಕೆಲವರು ಬೆಂಬಲಿಸಿದ್ದಾರೆ.
ವಿರೋಧ: ಚಹಾ ಅಂದಮೇಲೆ ಅದು ಕುದಿಯಬೇಕು, ಕುಕ್ಕರ್‌ನಲ್ಲಿ ಮಾಡಿದರೆ ಅದು ಕಷಾಯದಂತಾಗುತ್ತದೆ, ಅಸಲಿ ರುಚಿ ಸಿಗುವುದಿಲ್ಲ ಎಂದು ಚಹಾ ಪ್ರಿಯರು ಬೇಸರ ವ್ಯಕ್ತಪಡಿಸಿದ್ದಾರೆ.

