HomeLatest Newsಪ್ರಿಯಕರನಿಗೆ ಬೆತ್ತಲೆ ಫೋಟೋ ಕಳಿಸಿದ ಯುವತಿಗೆ ಬ್ಲಾಕ್ ಮೇಲ್

ಪ್ರಿಯಕರನಿಗೆ ಬೆತ್ತಲೆ ಫೋಟೋ ಕಳಿಸಿದ ಯುವತಿಗೆ ಬ್ಲಾಕ್ ಮೇಲ್

ಬೆಂಗಳೂರು: ಯುವತಿಯ ಖಾಸಗಿ ಫೋಟೋ ಬಹಿರಂಗಪಡಿಸುವುದಾಗಿ ಬೆದರಿಸಿ ಹಣ ವಸೂಲಿ ಮಾಡಿದ ಘಟನೆ ನಡೆದಿದೆ. 19 ವರ್ಷದ ಯುವತಿ ನೀಡಿದ ದೂರಿನ ಅನ್ವಯ ಕೇಂದ್ರ ವಿಭಾಗದ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ.

ಖಾಸಗಿ ಕಾಲೇಜಿನಲ್ಲಿ ಓದುತ್ತಿರುವ ಯುವತಿ ತನ್ನ ಪ್ರಿಯಕರನಿಗೆ ಖಾಸಗಿ ಫೋಟೋಗಳನ್ನು ಕಳುಹಿಸಿದ್ದಾಳೆ. ನಂತರ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ಯುವತಿಗೆ ಕರೆ ಮಾಡಿದ ವ್ಯಕ್ತಿ ಆಕೆಯ ಖಾಸಗಿ ಫೋಟೋಗಳನ್ನು ಕಳುಹಿಸಿ ಒಂದು ಲಕ್ಷ ರೂ. ಕೊಡದಿದ್ದರೆ ಫೋಟೋಗಳನ್ನು ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಸಿದ್ದಾನೆ.

ಇದರಿಂದ ಆತಂಕಗೊಂಡ ಯುವತಿ ಪ್ರಿಯಕರನ ಜೊತೆ ಚರ್ಚಿಸಿದ್ದಾಳೆ. ನಂತರ ಕರೆ ಮಾಡಿದ ವ್ಯಕ್ತಿಗೆ ಪ್ರಿಯಕರನಿಂದ ಒಂದು ಲಕ್ಷ ರೂ. ಕೊಡಿಸಿದ್ದಾಳೆ. ನಂತರ ಅಪರಿಚಿತ ವ್ಯಕ್ತಿ ಯುವತಿಗೆ ಕರೆ ಮಾಡಿ ಹೆಚ್ಚಿನ ಹಣ ಕೊಡುವಂತೆ ಬೆದರಿಕೆ ಹಾಕಿದ್ದಾನೆ. ಪ್ರಿಯಕರನಿಗೆ ಕಳುಹಿಸಿದ ಖಾಸಗಿ ಫೋಟೋ ಅಪರಿಚಿತ ವ್ಯಕ್ತಿಗೆ ಹೇಗೆ ದೊರೆಯಿತು ಎಂದು ಮೊದಲು ಪ್ರಿಯಕರನ ಮೇಲೆಯೇ ಯುವತಿ ಅನುಮಾನ ವ್ಯಕ್ತಪಡಿಸಿದ್ದಾಳೆ. ತನಿಖೆ ನಡೆಸಿದಾಗ ಆತನಿಂದ ಬಹಿರಂಗವಾಗಿಲ್ಲ ಎನ್ನುವುದು ಗೊತ್ತಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular