HomeLatest NewsBREAKING: ಹಸು ಹೊಲಕ್ಕೆ ನುಗ್ಗಿ ಮೇಯ್ದಿದ್ದಕ್ಕೆ ಕಂಬಕ್ಕೆ ಕಟ್ಟಿ ವೃದ್ಧೆಗೆ ಥಳಿತ: ನಾಲ್ವರು ಅರೆಸ್ಟ್

BREAKING: ಹಸು ಹೊಲಕ್ಕೆ ನುಗ್ಗಿ ಮೇಯ್ದಿದ್ದಕ್ಕೆ ಕಂಬಕ್ಕೆ ಕಟ್ಟಿ ವೃದ್ಧೆಗೆ ಥಳಿತ: ನಾಲ್ವರು ಅರೆಸ್ಟ್

ಚಾಮರಾಜನಗರ: ವೃದ್ಧೆಯನ್ನು ಕಂಬಕ್ಕೆ ಕಟ್ಟಿ ಹಾಕಿ ಎರಡು ಗಂಟೆ ಥಳಿಸಲಾಗಿದೆ. ಜಮೀನಿಗೆ ಹಸು ನುಗ್ಗಿ ಬೆಳೆ ಮೇಯ್ದಿದ್ದರಿಂದ ವೃದ್ಧೆಯನ್ನು ಥಳಿಸಿದ ಘಟನೆ ದೊಮ್ಮನಗದ್ದೆ ಗ್ರಾಮದಲ್ಲಿ ನಡೆದಿದೆ. ಕಂಬಕ್ಕೆ ಕಟ್ಟಿ ಕಣ್ಣಮ್ಮ ಅವರನ್ನು ಥಳಿಸಲಾಗಿದೆ.

ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ದೊಮ್ಮನಗದ್ದೆ ಗ್ರಾಮದಲ್ಲಿ ಅಂಗಮುತ್ತು ಅವರ ಜಮೀನಿಗೆ ಕಣ್ಣಮ್ಮ ಅವರ ಹಸು ನುಗ್ಗಿತ್ತು. ಹೀಗಾಗಿ ವೃದ್ಧೆ ಕಣ್ಣಮ್ಮರನ್ನು ಕಂಬಕ್ಕೆ ಕಟ್ಟಿ ಹಾಕಿ ಥಳಿಸಲಾಗಿದೆ. ಅಂಗಮುತ್ತು ಮತ್ತು ಕುಟುಂಬ ಸದಸ್ಯರು ಥಳಿಸಿದ್ದಾರೆ. ಕಣ್ಣಮ್ಮ ಅವರ ಮೇಲೆ ಹಲ್ಲೆ ನಡೆಸಿದ ಅಂಗಮುತ್ತು ಮತ್ತು ಮೂವರು ಮಹಿಳೆಯರನ್ನು ಬಂಧಿಸಲಾಗಿದೆ. ಹನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular