HomeLatest Newsಬೆಂಗಳೂರಲ್ಲಿ ಅಂಬಾರಿ 'ಡಬಲ್‌ ಡೆಕ್ಕರ್‌' ಬಸ್‌ ಸೇವೆಗೆ ಚಾಲನೆ , ಟಿಕೆಟ್ ಬೆಲೆ ಎಷ್ಟು ತಿಳಿಯಿರಿ.!

ಬೆಂಗಳೂರಲ್ಲಿ ಅಂಬಾರಿ ‘ಡಬಲ್‌ ಡೆಕ್ಕರ್‌’ ಬಸ್‌ ಸೇವೆಗೆ ಚಾಲನೆ , ಟಿಕೆಟ್ ಬೆಲೆ ಎಷ್ಟು ತಿಳಿಯಿರಿ.!

ಬೆಂಗಳೂರು : ಬೆಂಗಳೂರಿಗರಿಗೆ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದ್ದು,  ಬೆಂಗಳೂರಿನಲ್ಲೂ ಲಂಡನ್‌ ಮಾದರಿಯ ಅಂಬಾರಿ ಡಬಲ್‌ ಡೆಕ್ಕರ್‌ ಬಸ್‌ ಸೇವೆಗೆ ಚಾಲನೆ ಸಿಕ್ಕಿದೆ.

ಹೌದು.   ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ಪ್ರವಾಸೋದ್ಯಮ ಕ್ಷೇತ್ರದಲ್ಲಿ ಬೆಂಗಳೂರನ್ನು ಜನಪ್ರಿಯಗೊಳಿಸಲು ಹಾಗೂ ನಗರಕ್ಕೆ ಆಗಮಿಸುವ ಪ್ರವಾಸಿಗರ ಅನುಕೂಲಕ್ಕಾಗಿ ಮೂರು ಡಬಲ್ ಡೆಕ್ಕರ್ ಬಸ್‌ ಸೇವೆ ಪ್ರಾರಂಭಿಸಿದೆ. ಮೈಸೂರು ದಸರಾ ವೇಳೆ ಜನಪ್ರಿಯವಾಗಿದ್ದ ಈ ಸೇವೆ ಇದೀಗ ನಗರಲ್ಲಿ ಕಾಲಿಟ್ಟಿದ್ದು, ಉದ್ಯಾನನಗರಿಗೆ ಆಗಮಿಸುವ ಪ್ರವಾಸಿಗರು ಲಂಡನ್ ಮಾದರಿಯ ಬಸ್‌ ಸೇವೆ ಪಡೆಯಬಹುದಾಗಿದೆ.

ರವೀಂದ್ರ ಕಲಾಕ್ಷೇತ್ರ ಕಾರ್ಪೊರೇಷನ್ ಸರ್ಕಲ್-ಹಡ್ಸನ್ ಸರ್ಕಲ್-ಕಸ್ತೂರಬಾ ರಸ್ತೆ-ವಿಶ್ವೇಶ್ವರಯ್ಯ ಮ್ಯೂಸಿಯಂ-ಚಿನ್ನಸ್ವಾಮಿ ಸ್ಟೇಡಿಯಂ ರಸ್ತೆ, ಅಂಚೆ ಕಚೇರಿ, ನ್ಯಾಯಾಲಯ/ವಿಧಾನಸೌಧ-ಕೆ.ಆರ್. ಸರ್ಕಲ್-ಹಡ್ಸನ್ ಸರ್ಕಲ್-ಕಾರ್ಪೊರೇಷನ್ ಸರ್ಕಲ್-ರವೀಂದ್ರ ಕಲಾಕ್ಷೇತ್ರಕ್ಕೆ ಸಂಚರಿಸಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೇಲಿನ ಡೆಕ್‌ನಲ್ಲಿ 20 ಆಸನ, ಕೆಳಗಿನ ಡೆಕ್‌ನಲ್ಲಿ 20 ಆಸನ ಸೇರಿ ಒಟ್ಟು 40 ಆಸನಗಳನ್ನು ಈ ಬಸ್‌ ಹೊಂದಿದ್ದು, ಪ್ರತಿ ಪ್ರಯಾಣಿಕರಿಗೆ ₹180 ದರ ನಿಗದಿ ಮಾಡಲಾಗಿದೆ. ಟಿಕೆಟ್‌ ಬುಕ್ಕಿಂಗ್‌ಗಾಗಿ https://kstdc.co/ ವೆಬ್‌ಸೈಟ್‌ ಭೇಟಿ ನೀಡಿ ಅಥವಾ 080 4334 4334, 8970650070 / 8970650075 ಗೆ ಸಂಪರ್ಕಿಸಬಹುದು ಎಂದು ಸರ್ಕಾರ ಪ್ರಕಟಣೆ ತಿಳಿಸಿದೆ.

https://twitter.com/KarnatakaVarthe/status/2014581977001951508

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular