HomeLatest Newsದುಬೈನಲ್ಲಿ ಚೋಲೆ ಭಟೂರೆ ಸವಿದ ವಿರಾಟ್ ಕೊಹ್ಲಿ: ಪತ್ನಿ ಅನುಷ್ಕಾ ನೀಡಿದ ಸರ್ಪ್ರೈಸ್‌ಗೆ ಕಿಂಗ್ ಫಿದಾ

ದುಬೈನಲ್ಲಿ ಚೋಲೆ ಭಟೂರೆ ಸವಿದ ವಿರಾಟ್ ಕೊಹ್ಲಿ: ಪತ್ನಿ ಅನುಷ್ಕಾ ನೀಡಿದ ಸರ್ಪ್ರೈಸ್‌ಗೆ ಕಿಂಗ್ ಫಿದಾ

ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸದಾ ತಮ್ಮ ಕೆಮಿಸ್ಟ್ರಿ ಮೂಲಕ ಅಭಿಮಾನಿಗಳ ಮನಗೆಲ್ಲುತ್ತಾರೆ. ಇದೀಗ ಈ ಜೋಡಿ ಮತ್ತೊಮ್ಮೆ ಸುದ್ದಿಯಲ್ಲಿದ್ದು, ದುಬೈ ಪ್ರವಾಸೋದ್ಯಮದ ಹೊಸ ಜಾಹೀರಾತಿನಲ್ಲಿ ಒಂದಾಗಿ ಕಾಣಿಸಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ವಿರಾಟ್ ಮತ್ತು ಅನುಷ್ಕಾ ನಡುವಿನ ಪ್ರೀತಿ ಮತ್ತು ತುಂಟಾಟದ ಸ್ಪರ್ಧೆ ನೋಡುಗರ ಗಮನ ಸೆಳೆಯುತ್ತಿದೆ.

ಜಾಹೀರಾತಿನ ಆರಂಭದಲ್ಲಿ ದುಬೈನ ಸುಂದರ ದೃಶ್ಯಗಳನ್ನು ಸವಿಯುವ ಈ ಜೋಡಿ, ಒಬ್ಬರಿಗೊಬ್ಬರು ಅಚ್ಚರಿ ಮೂಡಿಸುವ ಸವಾಲು ಹಾಕಿಕೊಳ್ಳುತ್ತಾರೆ. ಅನುಷ್ಕಾ ಮೊದಲು ವಿರಾಟ್‌ಗಾಗಿ ಮರುಭೂಮಿಯ ಮಧ್ಯೆ ರೋಮ್ಯಾಂಟಿಕ್ ಲಂಚ್ ಡೇಟ್ ಆಯೋಜಿಸುತ್ತಾರೆ. ನಂತರ ಸಮುದ್ರ ತೀರದಲ್ಲಿ ಇಬ್ಬರೂ ವಾಲಿಬಾಲ್ ಆಟವಾಡುತ್ತಾರೆ. ಈ ಪಂದ್ಯದಲ್ಲಿ ಅನುಷ್ಕಾ ಅವರು ವಿರಾಟ್‌ಗೆ ಸೋಲುಣಿಸಿ ತಾನೇ ಉತ್ತಮ ಅಥ್ಲೀಟ್ ಎಂದು ಕಾಲೆಳೆಯುತ್ತಾರೆ. ಇದಕ್ಕೆ ಪ್ರತಿಯಾಗಿ ವಿರಾಟ್ ನಾನೇ ಉತ್ತಮ ಡ್ಯಾನ್ಸರ್ ಎಂದು ತಮಾಷೆ ಮಾಡುತ್ತಾರೆ.

ಜಾಹೀರಾತಿನ ಹೈಲೈಟ್ ಎಂದರೆ ವಿರಾಟ್ ಕೊಹ್ಲಿಗೆ ನೀಡಿದ ಫುಡ್ ಸರ್ಪ್ರೈಸ್. ವಿರಾಟ್‌ಗೆ ಅತ್ಯಂತ ಪ್ರಿಯವಾದ ದೆಹಲಿ ಶೈಲಿಯ ‘ಚೋಲೆ ಭಟೂರೆ’ಯನ್ನು ಅನುಷ್ಕಾ ದುಬೈನಲ್ಲಿ ಸವಿಯಲು ನೀಡುತ್ತಾರೆ. ದೆಹಲಿಯ ಸವಿಯನ್ನೇ ನೆನಪಿಸುವ ಈ ಖಾದ್ಯವನ್ನು ಕಂಡು ಖುಷಿಯಾದ ವಿರಾಟ್ ತಮ್ಮ ಡಯಟ್ ಮರೆತು ಸವಿಯುತ್ತಾರೆ. ಕೊನೆಯಲ್ಲಿ ಅನುಷ್ಕಾಗೆ ಅಚ್ಚರಿ ಮೂಡಿಸಲು ವಿರಾಟ್ ಅವರ ನೆಚ್ಚಿನ ಕೋಲ್ಡ್ ಕಾಫಿ ತಂದು ಕೊಡುವ ಮೂಲಕ ವೀಡಿಯೋ ಪೂರ್ಣಗೊಳ್ಳುತ್ತದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಇವರನ್ನು ನೋಡಿ ಇದು ಜಾಹೀರಾತಿನಂತೆ ಇಲ್ಲ ಯಾವುದೋ ಸಿನಿಮಾದ ತುಣುಕಿನಂತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

https://www.instagram.com/reel/DTzVFyJCBof/?utm_source=ig_web_copy_link

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular