ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಸದಾ ತಮ್ಮ ಕೆಮಿಸ್ಟ್ರಿ ಮೂಲಕ ಅಭಿಮಾನಿಗಳ ಮನಗೆಲ್ಲುತ್ತಾರೆ. ಇದೀಗ ಈ ಜೋಡಿ ಮತ್ತೊಮ್ಮೆ ಸುದ್ದಿಯಲ್ಲಿದ್ದು, ದುಬೈ ಪ್ರವಾಸೋದ್ಯಮದ ಹೊಸ ಜಾಹೀರಾತಿನಲ್ಲಿ ಒಂದಾಗಿ ಕಾಣಿಸಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ವಿರಾಟ್ ಮತ್ತು ಅನುಷ್ಕಾ ನಡುವಿನ ಪ್ರೀತಿ ಮತ್ತು ತುಂಟಾಟದ ಸ್ಪರ್ಧೆ ನೋಡುಗರ ಗಮನ ಸೆಳೆಯುತ್ತಿದೆ.
ಜಾಹೀರಾತಿನ ಆರಂಭದಲ್ಲಿ ದುಬೈನ ಸುಂದರ ದೃಶ್ಯಗಳನ್ನು ಸವಿಯುವ ಈ ಜೋಡಿ, ಒಬ್ಬರಿಗೊಬ್ಬರು ಅಚ್ಚರಿ ಮೂಡಿಸುವ ಸವಾಲು ಹಾಕಿಕೊಳ್ಳುತ್ತಾರೆ. ಅನುಷ್ಕಾ ಮೊದಲು ವಿರಾಟ್ಗಾಗಿ ಮರುಭೂಮಿಯ ಮಧ್ಯೆ ರೋಮ್ಯಾಂಟಿಕ್ ಲಂಚ್ ಡೇಟ್ ಆಯೋಜಿಸುತ್ತಾರೆ. ನಂತರ ಸಮುದ್ರ ತೀರದಲ್ಲಿ ಇಬ್ಬರೂ ವಾಲಿಬಾಲ್ ಆಟವಾಡುತ್ತಾರೆ. ಈ ಪಂದ್ಯದಲ್ಲಿ ಅನುಷ್ಕಾ ಅವರು ವಿರಾಟ್ಗೆ ಸೋಲುಣಿಸಿ ತಾನೇ ಉತ್ತಮ ಅಥ್ಲೀಟ್ ಎಂದು ಕಾಲೆಳೆಯುತ್ತಾರೆ. ಇದಕ್ಕೆ ಪ್ರತಿಯಾಗಿ ವಿರಾಟ್ ನಾನೇ ಉತ್ತಮ ಡ್ಯಾನ್ಸರ್ ಎಂದು ತಮಾಷೆ ಮಾಡುತ್ತಾರೆ.
ಜಾಹೀರಾತಿನ ಹೈಲೈಟ್ ಎಂದರೆ ವಿರಾಟ್ ಕೊಹ್ಲಿಗೆ ನೀಡಿದ ಫುಡ್ ಸರ್ಪ್ರೈಸ್. ವಿರಾಟ್ಗೆ ಅತ್ಯಂತ ಪ್ರಿಯವಾದ ದೆಹಲಿ ಶೈಲಿಯ ‘ಚೋಲೆ ಭಟೂರೆ’ಯನ್ನು ಅನುಷ್ಕಾ ದುಬೈನಲ್ಲಿ ಸವಿಯಲು ನೀಡುತ್ತಾರೆ. ದೆಹಲಿಯ ಸವಿಯನ್ನೇ ನೆನಪಿಸುವ ಈ ಖಾದ್ಯವನ್ನು ಕಂಡು ಖುಷಿಯಾದ ವಿರಾಟ್ ತಮ್ಮ ಡಯಟ್ ಮರೆತು ಸವಿಯುತ್ತಾರೆ. ಕೊನೆಯಲ್ಲಿ ಅನುಷ್ಕಾಗೆ ಅಚ್ಚರಿ ಮೂಡಿಸಲು ವಿರಾಟ್ ಅವರ ನೆಚ್ಚಿನ ಕೋಲ್ಡ್ ಕಾಫಿ ತಂದು ಕೊಡುವ ಮೂಲಕ ವೀಡಿಯೋ ಪೂರ್ಣಗೊಳ್ಳುತ್ತದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಇವರನ್ನು ನೋಡಿ ಇದು ಜಾಹೀರಾತಿನಂತೆ ಇಲ್ಲ ಯಾವುದೋ ಸಿನಿಮಾದ ತುಣುಕಿನಂತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
https://www.instagram.com/reel/DTzVFyJCBof/?utm_source=ig_web_copy_link

